/newsfirstlive-kannada/media/media_files/2025/09/27/big-boss-season-12-logo-2025-09-27-18-57-15.jpg)
ಬಿಗ್ ಬಾಸ್ 12ನೇ ಸೀಸನ್ ನಾಳೆಯಿಂದ( ಸೆಪ್ಟೆಂಬರ್ 28) ಆರಂಭವಾಗುತ್ತಿದೆ. ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾಱರು ಸ್ಪರ್ಧಿಗಳಾಗುತ್ತಾರೆ ಅನ್ನೋದನ್ನು ಇನ್ನೂ ಕಲರ್ಸ್ ಕನ್ನಡ ಪ್ರಕಟಿಸಿಲ್ಲ. ಈ ಭಾರಿಯೂ 18 ಕ್ಕೂ ಹೆಚ್ಚು ಸ್ಪರ್ಧಿಗಳಿರುತ್ತಾರೆ. ಬಿಗ್ ಬಾಸ್ ಹೌಸ್ ಈಗಾಗಲೇ ನಿರ್ಮಾಣವಾಗಿದೆ. ಸ್ಪರ್ಧಿಗಳನ್ನು ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಈಗಾಗಲೇ ಆಯ್ಕೆ ಮಾಡಿದೆ. ಆದರೇ, ಅದರ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ನಾಳೆ (ಸೆಪ್ಟೆಂಬರ್ 28) ಬಿಗ್ ಬಾಸ್ ಷೋ ಆರಂಭವಾದಾಗಲೇ ರಾಜ್ಯದ ಜನರಿಗೆ ಯಾಱರು ಈ ಭಾರಿಯ ಬಿಗ್ ಬಾಸ್ ಷೋನಲ್ಲಿ ಭಾಗವಹಿಸುತ್ತಾರೆ ಅಂತ ಸಂಪೂರ್ಣವಾಗಿ ಗೊತ್ತಾಗುತ್ತೆ. ಇದು ಈ ಹಿಂದಿನ ಸೀಸನ್ ನಲ್ಲೂ ಫಾಲೋ ಮಾಡಿಕೊಂಡು ಬಂದಿರುವ ಸಂಪ್ರದಾಯ. ಸ್ಪರ್ಧಿಗಳ ಹೆಸರಿನ ಬಗ್ಗೆ ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಎರಡೂ ಕೊನೆಯ ಕ್ಷಣದವರೆಗೂ ಸೀಕ್ರೆಟ್ ಕಾಪಾಡಿಕೊಂಡು ಬರುತ್ತಾರೆ. ಈ ಮೂಲಕ ರಾಜ್ಯದ ಜನರಲ್ಲಿ ಸ್ಪರ್ಧಿಗಳ ಬಗ್ಗೆ ಕುತೂಹಲ ಹುಟ್ಟಿಸುತ್ತಾರೆ.
ಬಿಗ್ ಬಾಸ್ ಷೋ ಆರಂಭಕ್ಕೂ ಮುನ್ನ ಕೆಲ ಪ್ರಮುಖ ಸ್ಪರ್ಧಿಗಳ ಹೆಸರು ಅನ್ನು ಬಿಗ್ ಬಾಸ್ ಘೋಷಿಸುತ್ತೆ. ಆದರೇ, ಎಲ್ಲ ಸ್ಪರ್ಧಿಗಳ ಹೆಸರು ಅನ್ನು ಮೊದಲೇ ಘೋಷಿಸಲ್ಲ.
ಆದರೇ, ಈ ಭಾರಿ ಸ್ವಲ್ಪ ಚೇಂಜ್ . ನಾಳೆ ಬಿಗ್ ಬಾಸ್ ಶೋ ಆರಂಭಕ್ಕೂ ಮುನ್ನವೇ ಇಂದೇ ಮೂವರು ಸ್ಪರ್ಧಿಗಳ ಹೆಸರು ಅನ್ನು ಬಿಗ್ ಬಾಸ್ ಘೋಷಿಸಲಿದೆ. ಇಂದು ಸಂಜೆ ಕ್ವಾಟ್ಲೆ ಕಿಚನ್ ಫಿನಾಲೆಯಲ್ಲೇ ಬಿಗ್ ಬಾಸ್‌ನ ಮೂವರು ಸ್ಪರ್ಧಿಗಳ ಹೆಸರು ಘೋಷಿಸಲಿದೆ. ನಾಳೆ ನಡೆಯಲಿರುವ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಗೂ ಮುನ್ನವೇ ಮೂವರು ಸ್ಪರ್ಧಿಗಳ ಹೆಸರು ಅನ್ನು ಬಹಿರಂಗಪಡಿಸಲಾಗುತ್ತಿದೆ.
ಕನ್ನಡ ಸೀರಿಯಲ್ ನಟ, ನಟಿಯರು, ಕಿರುತೆರೆಯ ಸ್ಟಾರ್ ಗಳು, ಟಿವಿ ನಿರೂಪಕ, ನಿರೂಪಕಿಯರು, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಈ ಭಾರಿಯೂ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಡುವುದು ಖಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.