Advertisment

ಇಂದು ಮೆಹಂದಿ ಶಾಸ್ತ್ರ, ನಾಳೆ ಹಳದಿ ಶಾಸ್ತ್ರ, ನಾಡಿದ್ದು ಮದುವೆ : ನಟಿ ರಶ್ಮಿಕಾ- ವಿಜಯ ದೇವರಕೊಂಡ ವಿವಾಹಕ್ಕೆ ಒಂದೇ ದಿನ ಬಾಕಿ

ಉದಯಪುರದ ಐಟಿಸಿ ಮೆಮೆಂಟೋ ಹೋಟೇಲ್ ನಲ್ಲಿ ಈಗಾಗಲೇ ನಟಿ ರಶ್ಮಿಕಾ- ನಟ ವಿಜಯ ದೇವರಕೊಂಡ ವಿವಾಹ ಶಾಸ್ತ್ರಗಳು ಆರಂಭವಾಗಿವೆ. ಇಂದು ಸಂಜೆ ಮೆಹಂದಿ ಶಾಸ್ತ್ರ, ನಾಳೆ ಹಳದಿ ಶಾಸ್ತ್ರ ನಡೆದರೇ, ನಾಡಿದ್ದು ಗುರುವಾರ ಸಪ್ತಪದಿ, ತಾಳಿ ಕಟ್ಟುವ ಕಾರ್ಯ ನಡೆಯಲಿದೆ. ನಟಿ ರಶ್ಮಿಕಾ ವಿವಾಹಕ್ಕೆ ಇನ್ನೂ ಒಂದೇ ದಿನ ಬಾಕಿ ಇದೆ.

author-image
Chandramohan
ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​
Advertisment


ಸಿನಿಮಾ ಸ್ಟಾರ್‌ಗಳ ನಡುವೆ ಪ್ರೀತಿ ಅರಳುವುದು.. ಮದುವೆ ಆಗೋದು ಹೊಸ ವಿಷ್ಯ ಏನಿಲ್ಲ.. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌, ಹಾಲಿವುಡ್‌ವರೆಗೂ ಅಂತ ಮದುವೆಗಳನ್ನ ನೋಡಿದ್ದೇವೆ. aದೇ ಹಾದಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಎಂಟ್ರಿಯಾಗಿದ್ದಾರೆ. ಈಗ ವಿವಾಹ ಬಂಧ ಮೂಡಿಬರ್ತಾ ಇದೆ. ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದೆ.
ಕೊಡಗಿನ ಬೆಡಗಿ ರಶ್ಮಿಕಾ ಮದುವೆಗೆ ಶುರು ಕೌಂಟ್​ಡೌನ್​!
100 ಜನರಿಗೆ ಆಹ್ವಾನ, ಯಾರ್‌ ಯಾರ್‌ ಸೆಲೆಬ್ರಿಟಿ ಬರ್ತಾರೆ?
ದಕ್ಷಿಣ ಭಾರತದ ಮತ್ತೊಂದ್‌ ಸ್ಟಾರ್‌ ಜೋಡಿ ಹಸೆಮಣೆ ಏರ್ತಾ ಇದೆ. ಅದು ಬೇರಾರೂ ಅಲ್ಲ ನಮ್ಮ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್‌ನ ಸ್ಟಾರ್‌ ನಟ ವಿಜಯದೇವರಕೊಂಡ. 2018 ರಲ್ಲಿ ರಿಲೀಸ್‌ ಆಗಿದ್ದ ಗೀತಗೊವಿಂದಂ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟ್ಸಿದ್ರು. ಅಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಕದ್ದು ಮುಚ್ಚಿ ಓಡಾಡಿದ್ದು ಬಿಟ್ರೆ.. ಯಾವತ್ತೂ ತಾವು ಪ್ರೇಮಿಗಳು ಅನ್ನೋದನ್ನ ಎಲ್ಲಿಯೂ ರಿವೀಲ್‌ ಮಾಡಿರಲಿಲ್ಲ.  ಅವರಿಬ್ಬರಿಗೂ ಪ್ರೀತಿ ಇತ್ತು ಅನ್ನೋದ್‌ ನಿಜವಾಗಿದೆ. ಹಾಗೇ ಇಬ್ಬರೂ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿ ಕಲ್ಯಾಣಕ್ಕೆ ಸಿದ್ಧರಾಗಿದ್ದಾರೆ.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ 29 ವರ್ಷ.. ರೌಡಿ ಬಾಯ್ ವಿಜಯ್‌ ದೇವರಕೊಂಡಗೆ ಈಗ 36 ವರ್ಷ.. ಇಬ್ಬರಿಗೂ ಸುಮಾರು 7 ವರ್ಷದ ವ್ಯಾತ್ಯಾಸವಿದೆ. ಮದುವೆ ನಡೆಯೋದು ಫೆಬ್ರವರಿ 26 ರಂದು. ಅದು ಉದಯಪುರದಿಂದ ಸುಮಾರು 25 ಕಿಲೋ ಮೀಟರ್‌ ದೂರದಲ್ಲಿರೋ ಐಟಿಸಿ ಅನ್ನೋ ಹೋಟೆಲ್‌ನಲ್ಲಿ. ಲಕ್ಸುರಿ ಹೋಟೆಲ್‌ ಅದಾಗಿದ್ದು, ಮದುವೆಗೆ ಕೌಂಟ್‌ಡೌನ್‌ ಶುರುವಾಗಿದೆ. ಫೆಬ್ರವರಿ 24ಕ್ಕೆ ಸಂಜೆ ವೇಳೆ ಮೆಹಂದಿ ಶಾಸ್ತ್ರ, ಫೆಬ್ರವರಿ 25ಕ್ಕೆ ಹಳದಿ ಶಾಸ್ತ್ರ, ಫೆಬ್ರವರಿ 26ಕ್ಕೆ ಮದುವೆ, ಮಾರ್ಚ್‌ 6ಕ್ಕೆ ಹೈದ್ರಾಬಾದ್‌ನಲ್ಲಿ ರಿಸೆಪ್ಶನ್‌ ನಡೆಯಲಿದೆ.
ಈಗಾಗ್ಲೇ ಮೆಹಂದಿ ಶಾಸ್ತ್ರ ಸ್ಟ್ರಾಟ್‌ ಆಗಿದೆ.. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕುಟುಂಬಸ್ಥರು.. ಆಪ್ತರು ಹೋಟೆಲ್‌ಗೆ ಆಗಮಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸ್ಟಾರ್‌ಗಳ ಮದುವೆ, ಸೆಲೆಬ್ರಿಟಿಗಳ ವಿವಾಹ ಅಂದ್ರೆ ತೀರಾ ಖಾಸಗಿ ಕಾರ್ಯಕ್ರಮವಾಗಿ ನಡೆಯುತ್ತೆ. ಅಲ್ಲಿ ಕೆಲವು ಆಯ್ದ ಸೆಲೆಬ್ರಿಟಿಗಳಿಗೆ ಮಾತ್ರ ಆಹ್ವಾನ ಇರುತ್ತೆ. ಅಪ್ಪಿ ತಪ್ಪಿಯೂ ಜನ ಸಾಮಾನ್ಯರಿಗೆ ಯಾವುದೇ ಕಾರಣಕ್ಕೂ ಆಹ್ವಾನ ಇರೋದಿಲ್ಲ. ಅದು ರಶ್ಮಿಕಾ-ವಿಜಯ್‌ ದೇವರಕೊಂಡ ಮದುವೆಯಲ್ಲೂ ಕಾಣಿಸ್ತಿದೆ. 

Advertisment


ಸದ್ಯಕ್ಕೆ ಹೊರಬರುತ್ತಾ ಇರೋ ಮಾಹಿತಿ ಪ್ರಕಾರ ಮದುವೆಗೆ ಕೇವಲ 100 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಅದ್ರಲ್ಲಿ 50 ಜನ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಕುಟುಂಬಸ್ಥರಾಗಿರ್ತಾರೆ. ಉಳಿದ 50 ಮಂದಿ ರಶ್ಮಿಕಾ ಮತ್ತು ವಿಜಯ್‌ಗೆ ಆಪ್ತರಾಗಿರೋ ಸಿನಿಮಾ ಇಂಡಸ್ಟ್ರಿಯವ್ರು ಅಂತ ಹೇಳಲಾಗ್ತಿದೆ. 
ರಶ್ಮಿಕಾ ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ಅಭಿನಯಸಿದವ್ರು. ಹೀಗಾಗಿ ಎಲ್ಲಾ ಇಂಡಸ್ಟ್ರಿಯಲ್ಲಿಯೂ ಅವರಿಗೆ ಆಪ್ತರಿದ್ದಾರೆ. ಇನ್ನು ವಿಜಯ್‌ ದೇವರಕೊಂಡ ತೆಲುಗು ಮತ್ತು ಹಿಂದಿಯಲ್ಲಿ ಛಾಪು ಮೂಡಿಸಿದವ್ರು. ಆ ಎರಡೂ ಇಂಡಸ್ಟ್ರಿಯಲ್ಲಿ ವಿಜಯ್‌ಗೆ ಆಪ್ತರಿದ್ದಾರೆ. ಹೀಗಾಗಿ ಯಾವ್‌ ಯಾವ್‌ ಸ್ಟಾರ್‌ಗಳಿಗೆ ಆಹ್ವಾನ ನೀಡಿದ್ದಾರೆ. ಯಾರ್‌ ಯಾರ್‌ ಪಾಲ್ಗೊಳ್ಳುತ್ತಾರೆ ಅನ್ನೋದು ಇನ್ನೂ ಕನ್ಫರ್ಮ್‌  ಆಗಿಲ್ಲ. ಗುರುವಾರ ಮದುವೆ ನಡೆಯೋ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಯಾರ್‌ ಯಾರ್‌ ಆಗಮಿಸ್ತಾರೆ ಅನ್ನೋದು ತಳಿದು ಬರಲಿದೆ.

ನ್ಯೂಸ್ ಫಸ್ಟ್​ ಬ್ಯುರೋ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmika Mandanna, vijay devarakonda Rashmika Mandanna marriage
Advertisment
Advertisment
Advertisment