Advertisment

ಇವತ್ತು ಹಳದಿ ಶಾಸ್ತ್ರ, ನಾಳೆ ವೀರೋಶ್ ಜೋಡಿ ಮದುವೆ, ಮಾ.4ಕ್ಕೆ ರಿಸೆಪ್ಷನ್‌! ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭ ಹಾರೈಕೆ

ನಾಳೆ ದೇಶದ ವಿರೋಶ್ ಜೋಡಿ ಎಂದೇ ಹೆಸರಾದ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹ ನಡೆಯಲಿದೆ. ಬೆಳಿಗ್ಗೆ ಆಂಧ್ರದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ಸಂಜೆ ಕೊಡಗು ಸಂಪ್ರದಾಯದ ಪ್ರಕಾರ ರಶ್ಮಿಕಾ - ವಿಜಯ ಮದುವೆ ನಡೆಯಲಿದೆ. ನವಜೋಡಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

author-image
Chandramohan
Rashmika and vijay wedding tomorrow

ನಾಳೆ ನಟಿ ರಶ್ಮಿಕಾ- ನಟ ವಿಜಯ ವಿವಾಹ ಸಮಾರಂಭ

Advertisment
  • ನಾಳೆ ನಟಿ ರಶ್ಮಿಕಾ- ನಟ ವಿಜಯ ವಿವಾಹ ಸಮಾರಂಭ
  • ನಾಳೆ ಬೆಳಿಗ್ಗೆ ಆಂಧ್ರದ ಸಂಪ್ರದಾಯದ ಪ್ರಕಾರ ಮದುವೆ, ಸಂಜೆ ಕೊಡಗು ಸಂಪ್ರದಾಯದ ಮದುವೆ
  • ಮಾರ್ಚ್ 4 ಕ್ಕೆ ಹೈದರಾಬಾದ್ ನಲ್ಲಿ ಮದುವೆ ರಿಸೆಪ್ಷನ್‌


ನಟಿ ರಶ್ಮಿಕಾ ಮಂದಣ್ಣ.. ನಟ ವಿಜಯ್ ದೇವರಕೊಂಡ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಒಂದು ಡೆಸ್ಟಿನೇಷನ್ ಪ್ಲಾನ್​ ಮಾಡಿ ರಾಜಸ್ಥಾನವನ್ನ ಫಿಕ್ಸ್​ ಮಾಡ್ಕೊಂಡಿರೋ ಜೋಡಿ.. ನಿನ್ನೆ ಮೆಹಂದಿ ಶಾಸ್ತ್ರ ಮುಗಿಸಿದೆ.. ಇವತ್ತು ಹಳದಿ ಶಾಸ್ತ್ರ.. ನಾಳೆ ವೆಡ್ಡಿಂಗ್.. ಇನ್ನೂ ಇವತ್ತಿನ ಸೆಲಬ್ರೇಷನ್​ ಹೇಗಿತ್ತು.. ಯಾರ್​ ಯಾರ್​ ಬಂದಿದ್ರು ಅನ್ನೋ ಡೀಟೇಲ್ಸ್​ ಇಲ್ಲಿದೆ. 
ನಾಳೆ ಹಸೆಮಣೆ ಏರಲಿದ್ದಾರೆ ‘ಗೀತ-ಗೋವಿಂದ’ ಜೋಡಿ!
ಇವತ್ತು ಹಳದಿ ಶಾಸ್ತ್ರ, ನಾಳೆ ಮದುವೆ, ಮಾ.4ಕ್ಕೆ ರಿಸೆಪ್ಷನ್‌!
ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ.. ಅಂಡ್​ ರೌಡಿ ಬಾಯ್‌ ವಿಜಯ್‌ ದೇವರಕೊಂಡ ನಿನ್ನೆ ಮೆಹಂದಿ.. ಇವತ್ತು ಹಳದಿ ಶಾಸ್ತ್ರ.. ಫೆಬ್ರವರಿ 26 ಅಂದ್ರೆ ನಾಳೆನೇ ದಾಂಪತ್ಯ ಬದುಕಿಗೆ ಕಾಲಿಡ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ಇಬ್ಬರ ಮದುವೆ ನಡೆಯುತ್ತಿದೆ. ನಾಳೆ ನಡೆಯಲಿರುವ ವಿವಾಹಕ್ಕೆ ಜಸ್ಟ್​ ಅವರ ಆಪ್ತರು.. ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್​​ನಲ್ಲಿ ಅದ್ಧೂರಿ ರಿಸೆಪ್ಷನ್ ಪ್ಲಾನ್​ ಮಾಡಿದ್ದು, ಹಲವು ಗಣ್ಯರು.. ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. 
ರಾಜಸ್ಥಾನದಲ್ಲಿ ಮದುವೆ.. ದಕ್ಷಿಣ ಭಾರತದ ಸಂಪ್ರದಾಯ!
ಕ್ಯೂಟ್ ಕಪಲ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ವಿಜಯ್ ದೇವರಕೊಂಡ ಮದುವೆ ಸಂಭ್ರಮ ರಾಜಸ್ಥಾನದಲ್ಲಿ ಕಳೆಗಟ್ಟಿದೆ. ವಿಶೇಷ ಎಂದ್ರೆ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ರಾಜಸ್ಥಾನವನ್ನ ಆಯ್ಕೆ ಮಾಡಿಕೊಂಡಿದ್ರೂ.. ಈ ಜೋಡಿ ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯಕ್ಕೆ ಮಣೆ ಹಾಕಿದೆ. 
ಗೆಸ್ಟ್‌ಗಳಿಗೆ ಎಳನೀರು ಸ್ವಾಗತ, ಬಾಳೆ ಎಲೆ ಊಟ!
ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯುತ್ತಿದ್ರೂ, ಅಲ್ಲಿನ ವ್ಯವಸ್ಥೆಗಳು ಮಾತ್ರ ಪಕ್ಕಾ ಸೌತ್ ಇಂಡಿಯನ್ ಸ್ಟೈಲ್‌ನಲ್ಲಿವೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ದಕ್ಷಿಣ ಭಾರತದ ಸಂಪ್ರದಾಯದಂತೆ ಎಳನೀರು ಕೊಟ್ಟು ಅತ್ಯಂತ ಪ್ರೀತಿಯಿಂದ ಸ್ವಾಗತಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಬಂದಂತಹ ಗೆಸ್ಟ್‌ಗಳಿಗೆ ಸಾಂಪ್ರದಾಯಿಕವಾಗಿ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಈ ದಕ್ಷಿಣ ಭಾರತ ಶೈಲಿಯ ಆತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisment


ಒಂದೇ ದಿನ.. 2 ಬಾರಿ ಮದುವೆ
ಬೆಳಗ್ಗೆ                         ದೇವರಕೊಂಡ ಕುಟುಂಬದ ಸಂಪ್ರದಾಯದಂತೆ ಮದುವೆ
ಸಂಜೆ                         ಮಂದಣ್ಣ ಕುಟುಂಬದ ಕೊಡವ ಸಂಪ್ರದಾಯದಂತೆ ಮದುವೆ


(ಒಟ್ನಲ್ಲಿ ನಾಳೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಎರಡೆರಡು ಬಾರಿ ಮದುವೆ ಆಗ್ತಿದ್ದಾರೆ. ಬೆಳಗ್ಗೆ ದೇವರಕೊಂಡ ಕುಟುಂಬದ ಸಂಪ್ರದಾಯದಂತೆ ಮದುವೆ ಆಗ್ತಾರೆ. ಸಂಜೆ ಮಂದಣ್ಣ ಕುಟುಂಬದ ಕೊಡವ ಸಂಪ್ರದಾಯದಂತೆ ಮದುವೆ ಆಗ್ತಿದ್ದಾರೆ.)


100 ಮಂದಿಗಷ್ಟೇ ಆಹ್ವಾನ
ರಶ್ಮಿಕಾ ಮದುವೆಗೆ ಅತ್ಯಾಪ್ತರು, ಸ್ನೇಹಿತರು ಸೇರಿ 100 ಮಂದಿಗಷ್ಟೇ ಆಹ್ವಾನ
ವಿಜಯ್ ಮೊದಲ ಪೆಳ್ಳಿ ಚೂಪುಲು ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಭಾಗಿ
‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ನಾಯಕಿ ಇಶಾ ರೆಬ್ಬಾಗೂ ಆಹ್ವಾನ
ರಶ್ಮಿಕಾ, ವಿಜಯ್ಇ ಬ್ಬರಿಗೂ ಆಪ್ತವಾಗಿರುವ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಭಾಗಿ 
ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಕೂಡ ಭಾಗಿ
ರಶ್ಮಿಕಾರ ದಿ ಗರ್ಲ್​​ಫ್ರೆಂಡ್ ಚಿತ್ರದ ನಿರ್ದೇಶಕ ರಾಹುಲ್ ರವಿಂದ್ರನ್​ಗೆ ಆಹ್ವಾನ
ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೂ ಕೂಡ ಆಹ್ವಾನ
ವಿಜಯ್ ಕಾಲೇಜು ದಿನಗಳ ಗೆಳೆಯರು, ರಶ್ಮಿಕಾ ಅತ್ಯಾಪ್ತ ಗೆಳತಿಯರು ಭಾಗಿ
(ರಶ್ಮಿಕಾ ಮದುವೆಗೆ ಅತ್ಯಾಪ್ತರು, ಸ್ನೇಹಿತರು ಸೇರಿ 100 ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. ವಿಜಯ್ ದೇವರಕೊಂಡ ನಟಿಸಿದ್ದ ಮೊದಲ ಪೆಳ್ಳಿ ಚೂಪುಲು ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಭಾಗಿಯಾಗ್ತಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದ ನಾಯಕಿ ಇಶಾ ರೆಬ್ಬಾಗೂ ಆಹ್ವಾನ ಕೊಡಲಾಗಿದೆ. ರಶ್ಮಿಕಾ, ವಿಜಯ್ ಇಬ್ಬರಿಗೂ ಆಪ್ತವಾಗಿರೋ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ.. ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಕೂಡ ಭಾಗಿಯಾಗ್ತಿದ್ದಾರೆ. ರಶ್ಮಿಕಾರ ದಿ ಗರ್ಲ್​​ಫ್ರೆಂಡ್ ಚಿತ್ರದ ನಿರ್ದೇಶಕ ರಾಹುಲ್ ರವಿಂದ್ರನ್​ಗೆ. ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾರಿಗೆ. ವಿಜಯ್ ಕಾಲೇಜು ದಿನಗಳ ಗೆಳೆಯರು, ರಶ್ಮಿಕಾ ಅತ್ಯಾಪ್ತ ಗೆಳತಿಯರು ಭಾಗಿಯಾಗ್ತಿದ್ದಾರೆ.)

Advertisment


ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭ ಹಾರೈಕೆ
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿರಿಂದ ರಶ್ಮಿಕಾ - ವಿಜಯ್ ಮದುವೆಗೆ ಶುಭ ಹಾರೈಕೆ ಬಂದಿದೆ. ಪತ್ರದ ಮೂಲಕ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಮದುವೆಯನ್ನ ದೈವಿಕ ಸ್ಕ್ರಿಪ್ಟ್‌ ಎಂದು ಕರೆದಿದ್ದಾರೆ.

Rashmika mandanna and vijay devarakonda arriving at udaipura




ಹೈದರಾಬಾದ್‌ನಲ್ಲಿ ನಡೆಯಲಿದೆ ವಿರೋಶ ಅದ್ದೂರಿ ಆರತಕ್ಷತೆ
ರಾಜಸ್ಥಾನದ ಮದುವೆ ಮುಗಿದ ನಂತರ, ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಗಣ್ಯರು, ಸ್ನೇಹಿತರು ಹಾಗೂ ಹಿತೈಷಿಗಳಿಗಾಗಿ ಹೈದರಾಬಾದ್‌ನಲ್ಲಿ ವಿರೋಶ್ ಜೋಡಿಯ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಒಟ್ನಲ್ಲಿ ರಾಜಸ್ಥಾನದ ಅರಮನೆಯಲ್ಲಿ ದಕ್ಷಿಣ ಭಾರತದ ಘಮಲು ಹರಡಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ವಿರೋಶ್ ಜೋಡಿಯ ಮದುವೆಯ ಅಧಿಕೃತ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.


ನ್ಯೂಸ್​ ಫಸ್ಟ್​ ಬ್ಯುರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmika Mandanna, vijay devarakonda Rashmika Mandanna marriage rashmika mandanna virusha wedding ceremony
Advertisment
Advertisment
Advertisment