/newsfirstlive-kannada/media/media_files/2025/12/06/kiccha-sudeep-3-2025-12-06-16-07-18.jpg)
ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಟ್ರೈಲರ್​ ಬಿಡುಗಡೆಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ.
ನಾಳೆಯೇ ಮಾರ್ಕ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್, ಕಿಚ್ಚನ ಅಭಿಮಾನಿಗಳಲ್ಲಿ ಮಾರ್ಕ್ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಇದೀಗ ಟ್ರೈಲರ್ ಇನ್ನೂ ಅದ್ದೂರಿಯಾಗಿ ಮೂಡಿ ಬಂದಿದೆಯಂತೆ.
ನಿರ್ದೇಶಕ ವಿಜಯ್ ಕಾರ್ತಿಕೇಯ ಮತ್ತೊಮ್ಮೆ ಕಿಚ್ಚನ ಹೊಸ ಮಾಸ್ ಅವತಾರವನ್ನು ತೆರೆಗೆ ತರ್ತಿದ್ದಾರೆ. ಅಂದ್ಹಾಗೆ ಮಾರ್ಕ್ ಇದೇ ಡಿಸೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಆ್ಯಕ್ಷನ್, ಥ್ರಿಲ್ಲಿಂಗ್ ಜಾನರ್​​ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅಜನೀಶ್ ಲೋಕ್​ನಾಥ್​ ಸಂಗೀತವಿದೆ. ಸತ್ಯ ಜ್ಯೋತಿ ಫಿಲ್ಮ್ಸ್​ ಮತ್ತು ಕಿಚ್ಚ ಕ್ರಿಯೇಷನ್ಸ್​ ನಿರ್ಮಾಣದ ಚಿತ್ರ ಇದಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us