ಟಾಕ್ಸಿಕ್​ ಟೀಸರ್​ ರಿಲೀಸ್! ಌಕ್ಷನ್ ಪ್ಯಾಕ್ಡ್ ದೃಶ್ಯದಲ್ಲಿ ಯಶ್​ ಫುಲ್ ರಾಕಿಂಗ್..! VIDEO

ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ಬರ್ತ್​ಡೇ. ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರತಂಡವು ಅವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಌಕ್ಷನ್ ಪ್ಯಾಕ್ಡ್ ಟೀಸರ್​ನಲ್ಲಿ ಯಶ್​ ಫುಲ್ ರಾಕಿಂಗ್ ಆಗಿ ಕಾಣಿಸಿಕೊಂಡಿದ್ದು, ‘ಡ್ಯಾಡೀಸ್​ ಹೋಮ್​’ನಲ್ಲಿ ಯಶ್ ಮಾಡಿದ್ದೇ ರೂಲ್ಸ್​ ಆಗಿದೆ.

author-image
Ganesh Kerekuli
Yash toxic
Advertisment

ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ಬರ್ತ್​ಡೇ. ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರತಂಡವು ಅವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಟೀಸರ್​ನಲ್ಲಿ ಯಶ್ ಅವರ ಪಾತ್ರದ ಬಗ್ಗೆ ಪರಿಚಯ ನೀಡಲಾಗಿದೆ. 

ಌಕ್ಷನ್ ಪ್ಯಾಕ್ಡ್ ಟೀಸರ್​ನಲ್ಲಿ ಯಶ್​ ಫುಲ್ ರಾಕಿಂಗ್ ಆಗಿ ಕಾಣಿಸಿಕೊಂಡಿದ್ದು, ‘ಡ್ಯಾಡೀಸ್​ ಹೋಮ್​’ನಲ್ಲಿ ಯಶ್ ಮಾಡಿದ್ದೇ ರೂಲ್ಸ್​ ಆಗಿದೆ ಎಂಬ ಕತೆಯನ್ನ ಹೇಳ್ತಿದೆ. ಹಿಂದೆಂದೂ ಕಾಣದಂಥ ವೈಲೆನ್ಸ್ ಅವತಾರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಕಾಲಲ್ಲೇ ಬುಲೆಟ್.. ಇದು ‘ರಾಯ’ನ ಟಾಕ್ಸಿಕ್ ಲುಕ್​ ಆಗಿದೆ. ಯಶ್ ಮಾಸ್ ಅವತಾರ ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.

40ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್ ಅವರು ಸ್ನೇಹಿತರು, ಆಪ್ತರ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಯಶ್ ಗೋವಾದಲ್ಲಿದ್ದು, ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವರ್ಷ ಅಭಿಮಾನಿಗಳ ಜೊತೆ ದೊಡ್ಡದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಯೋಚನೆಯಿತ್ತು. ಆದರೆ, ಟಾಕ್ಸಿಕ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜೋರಾಗಿ ನಡೀತಿದ್ದು, ಕೆಲಸದ ಒತ್ತಡದಿಂದ ಯಶ್, ಈ ಬಾರಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Rocking Star Yash Toxic movie Toxic: A Fairy Tale for Grown-Ups
Advertisment