/newsfirstlive-kannada/media/media_files/2025/08/28/actress-lakshmi-menon-2025-08-28-08-50-12.jpg)
ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಸ್ಟಾರ್ ನಟಿ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ನಟಿ ಲಕ್ಷಿ ಮೆನನ್ ಐಟಿ ಉದ್ಯೋಗಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ನಟಿ ಮೇಲಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಲಕ್ಷ್ಮಿ ಮೆನನ್ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ನಟಿ ಲಕ್ಷ್ಮಿ ಮೆನನ್ ಆಗಸ್ಟ್ 24ರಂದು ಕೊಚ್ಚಿಯ ಬ್ಯಾನರ್ಜಿ ರಸ್ತೆಯಲ್ಲಿರುವ ಐಷಾರಾಮಿ ಬಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ಲಕ್ಷ್ಮಿ ಸ್ನೇಹಿತರು ಮತ್ತು ಇತರ ಗುಂಪಿನ ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಗಲಾಟೆ ರಾತ್ರಿ 11 ರಿಂದ 12 ಗಂಟೆಯವರೆಗೆ ನಡೆದಿದ್ದು, ಗಲಾಟೆಯ ನಂತರ ಲಕ್ಷ್ಮಿ ಮೆನನ್ ಸ್ನೇಹಿತರಾದ ಮಿಥುನ್ ಮತ್ತು ಅನೀಸ್ ಐಟಿ ಕಂಪನಿಯ ಯುವಕನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆ ಯುವಕನ ಮೇಲೆ ಕಾರಿನಲ್ಲಿ ಹಲ್ಲೆ ಮಾಡಿ, ನಂತರ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳಿಕ ಐಟಿ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಮಿಥುನ್ ಮತ್ತು ಅನೀಸ್ ಇಬ್ಬರನನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಟಿ ಲಕ್ಷ್ಮಿ ಮೆನನ್ ನಾಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧ ಕೇರಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
#LakshmiMenon 🤯😨
— Tharani ʀᴛᴋ (@iam_Tharani) August 27, 2025
pic.twitter.com/p5WO4aHtPV
ನಟಿ ಲಕ್ಷ್ಮಿ ಮೆನನ್ ರೆಕ್ಕಾ, ವೇದಾಲಂ, ಸುಂದರ ಪಾಂಡಿಯನ್, ಕೊಂಬಾನ್ ಮುಂತಾದ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದರು. ನೆಚ್ಚಿನ ನಟಿ ಮೇಲೆ ಆರೋಪ ಕೇಳಿ ಬಂದಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ