/newsfirstlive-kannada/media/media_files/2025/11/09/max_manju_sandhya_kushi_photos-2025-11-09-15-49-51.jpg)
/newsfirstlive-kannada/media/media_files/2025/11/09/max_manju_new_photoshoot-2025-11-09-16-18-52.jpg)
ಮಂಜುನಾಥ್ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉಗ್ರಂ ಮಂಜು ಎಂದೇ ಖ್ಯಾತಿ ಪಡೆದಿದ್ದಾರೆ. ಸದ್ಯ ಉಗ್ರಂ ಮಂಜು ಅವರು ಮದುವೆಗೆ ಸಿದ್ಧವಾಗಿದ್ದು ತಮ್ಮ ಎಂಗೇಜ್ಮೆಂಟ್ನ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಅವರಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
/newsfirstlive-kannada/media/media_files/2025/11/09/max_manju_new_photoshoot_1-2025-11-09-16-20-08.jpg)
ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.
/newsfirstlive-kannada/media/media_files/2025/11/09/sandya_kushi_ugram_manju-2025-11-09-16-20-55.jpg)
ಉಗ್ರಂ ಮಂಜು ಅವರ ಜೊತೆ ಹೆಜ್ಜೆ ಹಾಕುತ್ತಿರುವ ಸಂಧ್ಯಾ ಖುಷಿ ಅವರು ದೀಪಾವಳಿ ಹಬ್ಬದಂದು ಕ್ಲಿಕ್ ಮಾಡಿದಂತ ಫೋಟೋ ಇದು. ತಮ್ಮ ಎಂಗೇಜ್ಮೆಂಟ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
/newsfirstlive-kannada/media/media_files/2025/11/09/sandya_kushi_ugram_manju_photo-2025-11-09-16-23-32.jpg)
ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಹೆಸರು ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್ನಲ್ಲಿದ್ದಾರೆ. ಇನ್ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/11/09/kichch_sudeep-2025-11-09-16-28-29.png)
ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದಲ್ಲೂ ಉಗ್ರಂ ಮಂಜು ನಟಿಸಿದ್ದಾರೆ. ಈ ಸಿನಿಮಾ ಬಿಗ್ ಹಿಟ್ ಆಗಿತ್ತು. ಇದರಿಂದಲೇ ಏನೋ ಉಗ್ರಂ ಮಂಜು ಅವರು ಇನ್ಸ್ಟಾದಲ್ಲಿ ತಮ್ಮ ಹೆಸರನ್ನು ಮ್ಯಾಕ್ಸ್ ಮಂಜು ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್ ಸಿನಿಮಾ ಕನ್ನಡದ ಆ್ಯಕ್ಷನ್ ಥ್ರಿಲ್ಲರ್ ಮೂವಿ. 2024 ರಲ್ಲಿ ಮಲ್ಟಿ-ಲ್ಯಾಂಗ್ವೇಜ್ನಲ್ಲಿ ತೆರೆಗೆ ಅಪ್ಪಳಿಸಿ ದೊಡ್ಡ ಮಟ್ಟದಲ್ಲೇ ಕಲೆಕ್ಷನ್ ಮಾಡಿತ್ತು.
/newsfirstlive-kannada/media/media_files/2025/11/09/sandya_kushi_ugram_manju_model-2025-11-09-16-29-51.jpg)
ಸಂಧ್ಯಾ ಅವರು ತಮ್ಮ ಇನ್ಸ್ಟಾದಲ್ಲಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಿಭಿನ್ನವಾದ ಕಾಸ್ಟ್ಯೂಮ್ನಲ್ಲಿ ಮಿಂಚಿದ್ದಾರೆ. ಅಲ್ಲದೇ ಕೆಲವೊಂದು ಫೋಟೋಗಳಿಗೆ ಮಾಡೆಲ್ ಎಂದು ಬರೆದಿರುವುದು ಇದೆ. ಈ ಸಂಬಂಧ ಮಂಜು ಅವರೇ ಹೇಳಬೇಕು.
/newsfirstlive-kannada/media/media_files/2025/11/09/sandya_kushi_ugram_manju_new-2025-11-09-16-32-00.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಮ್ಯಾಕ್ಸ್ ಮಂಜು ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ. ಇದನ್ನೂ ಸದ್ಯದಲ್ಲೇ ಅವರು ಅಪ್ಡೇಟ್ ಕೊಡಬಹುದು.
/newsfirstlive-kannada/media/media_files/2025/11/09/max_manju_sandhya_kushi_new-2025-11-09-16-33-57.jpg)
ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್ನಲ್ಲಿದ್ದಾರೆ. ಇನ್ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/11/09/ugram_manju_new_photoshoot-2025-11-09-16-34-42.jpg)
ಉಗ್ರಂ ಮಂಜು ತಮ್ಮ ವಿಭಿನ್ನ ನಟನೆಯಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಕನ್ನಡದಲ್ಲಿ ಉಗ್ರಂ, ಭರಾಟೆ, ಬುದ್ಧಿವಂತ 2, ಮ್ಯಾಕ್ಸ್, ರಾನಿ, ಸಂತು ಸ್ಟ್ರೇಟ್ ಫಾರ್ವರ್ಡ್, ದೂರದರ್ಶನ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ ಮೂವಿ ಸೇರಿ ಇನ್ನು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
/newsfirstlive-kannada/media/media_files/2025/11/09/sandya_kushi_ugram_manju_3-2025-11-09-16-37-58.jpg)
ಸಂಧ್ಯಾ ಅವರು ತಮ್ಮ ಮನೆಯ ಮುದ್ದಿನ ಶ್ವಾನದ ಜೊತೆ ಖುಷಿ ಖುಷಿಯಾಗಿರುವ ಕ್ಷಣ. ಮದುವೆ ಯಾವಾಗ, ಎಲ್ಲಿ ನಡೆಯಲಿದೆ ಎನ್ನುವುದು ಮಂಜು-ಸಂಧ್ಯಾ ಅವರೇ ಹೇಳಬೇಕಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us