/newsfirstlive-kannada/media/media_files/2025/11/24/dharmendra-21-2025-11-24-16-37-22.jpg)
/newsfirstlive-kannada/media/media_files/2025/11/24/dharmendra-6-2025-11-24-16-28-55.jpg)
ಅನಾರೋಗ್ಯದಿಂದ ಬಳಲುತ್ತಿದ್ದರು
ಧರ್ಮೇಂದ್ರ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದಾಗಿ ನಟನನ್ನು ವೆಂಟಿಲೇಟರ್ಗೆ ಸ್ಥಳಾಂತರಿಸಲಾಯಿತು.
/newsfirstlive-kannada/media/media_files/2025/11/24/dharmendra-8-2025-11-24-16-29-49.jpg)
ಮನೆಯಲ್ಲೇ ಚಿಕಿತ್ಸೆ
ಈ ಸಮಯದಲ್ಲಿ ಇಡೀ ಡಿಯೋಲ್ ಕುಟುಂಬ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದೌಡಾಯಿಸಿತ್ತು. ಸಲ್ಮಾನ್ ಖಾನ್ನಿಂದ ಶಾರುಖ್ ಖಾನ್ವರೆಗೆ ಎಲ್ಲರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೂ ಮನೆಯಲ್ಲೇ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು.
/newsfirstlive-kannada/media/media_files/2025/11/24/dharmendra-9-2025-11-24-16-30-11.jpg)
ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಹಲವಾರು ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲಾಗಲಿಲ್ಲ. ಅವರು ನವೆಂಬರ್ 24 ರಂದು ತಮ್ಮ 89 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
/newsfirstlive-kannada/media/media_files/2025/11/24/dharmendra-10-2025-11-24-16-30-38.jpg)
ಅವರ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಇಡೀ ಚಿತ್ರರಂಗ ದುಃಖದಲ್ಲಿ ಮುಳುಗಿದೆ. ಬಹಳ ಸಮಯದಿಂದ, ದಂತಕಥೆಯ ನಟನ ಅಭಿಮಾನಿಗಳು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು.
/newsfirstlive-kannada/media/media_files/2025/11/24/dharmendra-11-2025-11-24-16-30-59.jpg)
65 ವರ್ಷಗಳ ಸಿನಿ ಜರ್ನಿ
ಧರ್ಮೇಂದ್ರ 1960 ರಲ್ಲಿ ನಟನಾ ವೃತ್ತಿ ಪ್ರಾರಂಭಿಸಿದರು. ಅವರ ಮೊದಲ ಚಿತ್ರ "ದಿಲ್ ಭಿ ತೇರಾ ಹಮ್ ಭಿ ತೇರೆ", ನಂತರ 1961 ರ ಚಲನಚಿತ್ರ "ಬಾಯ್ ಫ್ರೆಂಡ್" ನಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದರು.
/newsfirstlive-kannada/media/media_files/2025/11/24/dharmendra-12-2025-11-24-16-31-25.jpg)
65 ವರ್ಷಗಳ ಕಾಲ ಸಕ್ರಿಯರಾಗಿದ್ದ ಧರ್ಮೇಂದ್ರ ಹಿಂದಿ ಚಿತ್ರರಂಗಕ್ಕೆ ಹಲವಾರು ಹಿಟ್ಗಳು, ಸೂಪರ್ಹಿಟ್ಗಳು ಮತ್ತು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದರು.
/newsfirstlive-kannada/media/media_files/2025/11/24/dharmendra-15-2025-11-24-16-31-45.jpg)
ವೃತ್ತಿಜೀವನದುದ್ದಕ್ಕೂ, ಅವರು ಶೋಲೆ (1975), ಚುಪ್ಕೆ ಚುಪ್ಕೆ (1975), ಸೀತಾ ಔರ್ ಗೀತಾ (1972), ಧರಂವೀರ್ (1977), ಫೂಲ್ ಔರ್ ಪತ್ತರ್ (1966), ಜುಗ್ನು (1973), ಮತ್ತು ಯಾದೋನ್ ಕಿ ಬಾರಾತ್ (1973) ನಂತಹ ಸ್ಮರಣೀಯ ಚಲನಚಿತ್ರಗಳಲ್ಲಿ ನಟಿಸಿದ್ದರು.
/newsfirstlive-kannada/media/media_files/2025/11/24/dharmendra-16-2025-11-24-16-32-16.jpg)
ಧರ್ಮೇಂದ್ರ ಎರಡು ಬಾರಿ ವಿವಾಹವಾಗಿದ್ದರು. ಮೊದಲ ಪತ್ನಿಯ ಹೆಸರು ಪ್ರಕಾಶ್ ಕೌರ್. ಮತ್ತು ಎರಡನೇ ಪತ್ನಿಯ ಹೆಸರು ಹೇಮಾ ಮಾಲಿನಿ. ಹೇಮಾ ಮಾಲಿನಿಯೊಂದಿಗಿನ ಅವರ ವಿವಾಹವು ಆ ಸಮಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು.
/newsfirstlive-kannada/media/media_files/2025/11/24/dharmendra-18-2025-11-24-16-32-37.jpg)
ಧರ್ಮೇಂದ್ರ ಅವರ ಕುಟುಂಬದ ಬಹುತೇಕ ಸದಸ್ಯರು ಬಾಲಿವುಡ್ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 1954 ರಲ್ಲಿ ಪ್ರಕಾಶ್ ಕೌರ್ (Prakash Kaur) ಅವರನ್ನು ವಿವಾಹವಾದರು. ಆಗ ಧರ್ಮೇಂದ್ರಗೆ ಕೇವಲ 19 ವರ್ಷ ಆಗಿತ್ತು ಅಷ್ಟೇ. ಈ ಪ್ರಕಾಶ್ ಕೌರ್ ಮತ್ತು ಧರ್ಮೇಂದ್ರ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
/newsfirstlive-kannada/media/media_files/2025/11/24/dharmendra-19-2025-11-24-16-33-00.jpg)
ಅಜಯ್ ಸಿಂಗ್ ಡಿಯೋಲ್ (Sunny Deol), ವಿಜಯ್ ಸಿಂಗ್ ಡಿಯೋಲ್ (Bobby Deol), ವಿಜೇತ ಡಿಯೋಲ್ (Vijeta Deol) ಮತ್ತು ಅಜಿತಾ ಡಿಯೋಲ್ (Ajita Deol)) ಎಂಬ ಮಕ್ಕಳಿದ್ದಾರೆ. ಸನ್ನಿ ಮತ್ತು ಬಾಬಿ ತಮ್ಮ ತಂದೆ ಹಾದಿಯನ್ನೇ ತುಳಿದರು. ಅವರು ಹಿಂದಿ ಚಿಂತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜೇತಾ ಮತ್ತು ಅಜಿತಾ ಸಿನಿಮಾ ರಂಗದಿಂದ ದೂರವಿದ್ದಾರೆ. ಸಿನಿಮಾ, ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಿಂದ ದೂರವಿದ್ದಾರೆ.
/newsfirstlive-kannada/media/media_files/2025/11/24/dharmendra-20-2025-11-24-16-33-18.jpg)
1980ರಲ್ಲಿ ಧರ್ಮೇಂದ್ರ ಹೇಮಾ ಮಾಲಿಯನ್ನು (Hema Malini) ಮದುವೆಯಾದರು. ಧರ್ಮೇಂದ್ರ, ಮೊದಲ ಪತ್ನಿ ಪ್ರಕಾಶ್ ಕೌರ್ಗೆ ವಿಚ್ಛೇದನ ನೀಡದೇ ಹೇಮಾ ಮಾಲಿನಿ ಮದುವೆ ಆಗಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
/newsfirstlive-kannada/media/media_files/2025/11/24/dharmendra-1-2025-11-24-15-04-33.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us