/newsfirstlive-kannada/media/media_files/2025/10/02/kanthara-rukmini-vasantha02-2025-10-02-16-19-22.jpg)
ಕಾಂತಾರ ಸಿನಿಮಾ ಹೀರೋಯಿನ್ ರುಕ್ಮಿಣಿ ವಸಂತ್
ಕಾಂತಾರ ಚಾಪ್ಟರ್ -1 ಸಿನಿಮಾದ ಹೀರೋಯಿನ್ ರುಕ್ಮಿಣಿ ವಸಂತ್ ಸಿನಿಮಾದಲ್ಲಿನ ತಮ್ಮ ಅನುಭವಗಳ ಬಗ್ಗೆ ಹೇಳಿದ್ದಾರೆ. ಸಿನಿಮಾದಲ್ಲಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರಷ್ಟೇ ಮಿಂಚಿರುವವರು ರುಕ್ಮಿಣಿ ವಸಂತ್. ರುಕ್ಮಿಣಿ ವಸಂತ್ ಪಾಲಿಗೆ ಇದೊಂದು ಗ್ರೇಟ್ ಸಿನಿಮಾ. ಸಿನಿಮಾದ ಬಗ್ಗೆ ಹಾಗೂ ಸಿನಿಮಾದಲ್ಲಿ ತಮ್ಮನ್ನು ಬೆಂಬಲಿಸಿ, ಪೋತ್ಸಾಹಿಸಿದವರ ಬಗ್ಗೆ ರುಕ್ಮಿಣಿ ವಸಂತ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ರುಕ್ಮಿಣಿ ವಸಂತ್ ಹೇಳಿದ್ದೇನು ಅನ್ನೋದರ ಫುಲ್ ಡೀಟೈಲ್ಸ್ ಇಲ್ಲಿದೆ ಓದಿ.
ಒಂದು ವರ್ಷದ ಹಿಂದೆ, ಕನ್ನಡದ ಹೆಮ್ಮೆ ಎನಿಸಿರೋ, ಕಾಂತಾರ:ಚಾಪ್ಟರ್ 1 ತಂಡ ಸೇರೋ ಅವಕಾಶ ನಂಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡೋದು ಒಂದು ದೊಡ್ಡ ಜವಾಬ್ದಾರಿಯೂ ಹೌದು, ಸಾಹಸವೂ ಹೌದು. ಈ ಚಿತ್ರ ನನ್ನ ಜೀವನವನ್ನೇ ಬದಲಾಯಿಸಿದೆ! ನಾನು ತುಂಬಾ ಕಲಿತಿದ್ದೀನಿ ಮತ್ತು ಅದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ.
ನಮ್ಮ ತಂಡದ ನಾಯಕರೂ, ನಿರ್ದೇಶಕರೂ ಆದ ರಿಷಬ್ ಸರ್ ಅವರಿಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ದಯೆ ಮತ್ತು ಛಲ ಈ ಚಿತ್ರವನ್ನು ತುಂಬಾ ವಿಶೇಷವಾಗಿಸಿದೆ. ನನ್ನನ್ನು ನಂಬಿದ್ದಕ್ಕೆ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು! ಹೊಂಬಾಳೆ ತಂಡ, ನನ್ನನ್ನು ನಿಮ್ಮ ಕುಟುಂಬದಲ್ಲಿ ಒಬ್ಬಳನ್ನಾಗಿಸಿಕೊಂಡಿದ್ದೀರಿ. ನಿಮಗೆ ನಾನು ಸದಾ ಚಿರಋಣಿ. ವಿಜಯ್ ಸರ್, ಚಲುವೆ ಸರ್, ಆದರ್ಶ್ ಮತ್ತು ತೆರೆಮರೆಯಲ್ಲಿರುವ ಎಲ್ಲರಿಗೂ ಹಾಗೂ ನಾನು ಭೇಟಿಯಾಗಲು ಸಾಧ್ಯವಾಗದ ತಂಡದ ಇತರರಿಗೂ ತುಂಬಾ ತುಂಬಾ ಧನ್ಯವಾದಗಳು.
ನಮ್ಮ ಸೂಪರ್ ಕೂಲ್ ಕ್ಯಾಮೆರಮ್ಯಾನ್ ಅರವಿಂದ್ ಮತ್ತು ಬೆಸ್ಟ್ ಆಫ್ ದಿ ಬೆಸ್ಟ್ ಕಾಸ್ರೋಮ್ ಡಿಸೈನರ್ ಪ್ರಗತಿ. ನೀವು ನನಗೆ ಸಂಪೂರ್ಣ ಹೊಸ ಲುಕ್ ಕೊಟ್ಟಿದ್ದೀರಿ ಮತ್ತು ನಾನು ಸುಂದರವಾಗಿ ಕಾಣಿದ್ದೀನಿ ಅಂತ ಕಾಂಪ್ಲಿಮೆಂಟ್ಸ್ ಬರ್ತಿದ್ರೆ, ಅದಕ್ಕೆ ಪ್ರಮುಖ ಕಾರಣ ನೀವೇ! ನಿಮಗೆ ವಿಶೇಷವಾದ ಧನ್ಯವಾದಗಳು!
ಕಾಂತಾರದ ಅತ್ಯದ್ಭುತ ಲೋಕವನ್ನ ಸೃಷ್ಟಿ ಮಾಡಿ, ನನ್ನನ್ನು ಅದರ ಒಂದು ನೈಜ ಭಾಗವಾಗಿರುವಂತೆ ನೋಡಿಕೊಂಡ ಕಲಾ ನಿರ್ದೇಶಕರಾದ ಬಾಂಗ್ಲಾನ್ ಅವರಿಗೆ
ವಿಶೇಷ ಧನ್ಯವಾದಗಳು
ಅಜನೀಶ್ ಸರ್, ನಿಮ್ಮ ಸಂಗೀತಕ್ಕೆ 'ರೋಮಾಂಚನ' ಅನ್ನೋದು ಬಿಟ್ಟು ಬೇರೆ ಏನೂ ಹೇಳೋಕೆ ಸಾಧ್ಯ ಇಲ್ಲ!
ಥಾಂಕ್ಯೂ!
ಅನಿ, ಗುರು ಮತ್ತು ನಿರ್ದೇಶನ ತಂಡ ಎಲ್ಲರೂ ನನ್ನ ಡೈಲಾಗ್ಸ್ ಅಲ್ಲಿ ಎಷ್ಟು ಸಹಾಯ ಮಾಡಿದ್ದೀರ ಅಂದ್ರೆ, ನಿಮಗೆ ಈಗ ಥಾಂಕ್ಸ್ ಹೇಳೋಕೂ, ಯಾವ ಪದ ಬಳಸಿ ಹೇಗೆ ಹೇಳಬೇಕು ಅಂತ ನಿಮಗೆ ಕಾಲ್ ಮಾಡೋಣ ಅನ್ನಿಸ್ತಿದೆ.
ನನ್ನ ಹೃದಯವು ನಿಮಗೆ ಧನ್ಯವಾದಗಳಿಂದ ತುಂಬಿದೆ. ನಮ್ಮ ನೃತ್ಯ ಸಂಯೋಜಕರು ಭೂಷಣ್ ಮಾಸ್ಟರ್ ಗೇ ಹಾಗೆ ನಮ್ಮ ಫೈಟ್ ಮಾಸ್ಟರ್ಸ್ ಆದ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ತುಂಬಾ ತುಂಬಾ ಧನ್ಯವಾದಗಳು.
ಗುಲಷನ್ ಸರ್ ಮತ್ತು ಜಯರಾಮ್ ಸರ್ ಜೊತೆ ಸ್ಟ್ರೀನ್ ಶೇರ್ ಮಾಡಿದ್ದು ತುಂಬಾ ಖುಷಿ ಇದೆ
ಕೇಟರಿಂಗ್ ತಂಡ - ನಿಮ್ಮ ಶುಚಿಯಾದ ರುಚಿಕರವಾದ ಆಹಾರ ಮತ್ತು ನೆವರ್ ಎಂಡಿಂಗ್ ಕಾಫಿ ನಮ್ಮನ್ನು ಮುನ್ನಡೆಸಿತು!
ನನ್ನದೇ ಆದ ಪುಟ್ಟ ಹೇರ್ ಅಂಡ್ ಮೇಕಪ್ ತಂಡ, ಬಿಸಿಲಿರಲಿ, ಮಳೆಯಿರಲಿ, ಸದಾ ನನ್ನನ್ನು ಹೊಳೆಯುವಂತೆ ನೋಡಿಕೊಂಡವರು ನೀವು! ನನ್ನ ಹುಚ್ಚಾಟ - ತುಂಟಾಟಗಳೆಲ್ಲದರಲ್ಲೂ ನೀವು ನನ್ನ ಜೊತೆಯಾಗಿ ನಿಂತಿದ್ದೀರಿ. ಥಾಂಕ್ಯೂ ಎಂದರೆ ಕಮ್ಮಿ ಅನಿಸುತ್ತಿದೆ.
ಮತ್ತು ಕೊನೆಯದಾಗಿ, ಎಲ್ಲರಿಗೂ, ವಿಶೇಷವಾಗಿ ನನ್ನನ್ನು ಹರಸಿ ಹುರಿದುಂಬಿಸುತ್ತಿರುವ ಎಲ್ಲಾ ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬು ಹೃದಯದ ಅನಂತಾನಂತ ಧನ್ಯವಾದಗಳು. ನೀವು ನಾನು ಸಿಕ್ಕಾಗೆಲ್ಲ, ಕನ್ನಡ ಫಿಲಂ ಯಾವಾಗ?" ಅಂತ ಕೇಳ್ತಾ ಇದ್ರಿ! ಇಲ್ಲಿದೆ ಉತ್ತರ!
ಅಕ್ಟೋಬರ್ 2ರಂದು ಚಿತ್ರಮಂದಿರದಲ್ಲಿ ನಿಮ್ಮನ್ನು ನೋಡಲು ಕಾಯ್ತಾ ಇರ್ತಿನಿ!!
ಇದೆಲ್ಲವನ್ನೂ ರುಕ್ಮಿಣಿ ವಸಂತ್ ತಮ್ಮ ಇನ್ಸಾಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.