/newsfirstlive-kannada/media/media_files/2025/10/03/akshaya-kumar-family-2025-10-03-19-52-50.jpg)
ನಟ ಅಕ್ಷಯ್ ಕುಮಾರ್, ಪತ್ನಿ ಟ್ವಿಂಕಲ್, ಮಗಳು ನಿತಾರಾ
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಂದೆಯಾಗಿ ತಮ್ಮ ಮಗಳಿಗೆ ಆನ್ ಲೈನ್ ನಲ್ಲಿ ಎದುರಾದ ಪರಿಸ್ಥಿತಿಯನ್ನು ಇಂದು ಎಲ್ಲರೆದುರು ವಿವರಿಸಿದ್ದಾರೆ. ಆನ್ ಲೈನ್ ನಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕೂಡ ಎಚ್ಚರದಿಂದ ಇರಬೇಕೆಂದು ಎಚ್ಚರಿಸಿದ್ದಾರೆ. ಮುಂಬೈನಲ್ಲಿ ಸೈಬರ್ ಜಾಗೃತಿ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.
ತಮ್ಮ 13 ವರ್ಷದ ಮಗಳು ನಿತಾರಾ, ಆನ್ ಲೈನ್ ನಲ್ಲಿ ಗೇಮ್ ಆಡುವಾಗ ಆಕೆಯ ಬೆತ್ತಲೆ ಚಿತ್ರಗಳನ್ನು ಕಳಿಸುವಂತೆ ವ್ಯಕ್ತಿಯೊಬ್ಬ ಕೇಳಿದ್ದಾನೆ. ಈ ಬೆಚ್ಚಿಬೀಳಿಸುವ ವಿಷಯವನ್ನು ಈಗ ಖುದ್ದು ಅಕ್ಷಯ್ ಕುಮಾರ್ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ನಿತಾರಾ ಆನ್ ಲೈನ್ ಗೇಮ್ ಆಡುವಾಗ ಪ್ರಾರಂಭದಲ್ಲಿ ಗೇಮ್ ಫ್ರೆಂಡ್ಲಿ ಆಗಿಯೇ ಇರುತ್ತೆ. ಥ್ಯಾಂಕ್ಯು, ಚೆನ್ನಾಗಿ ಆಡಿದ್ದೀರಿ, ಫೆಂಟಾಸ್ಟಿಕ್ ಎಂಬ ಮೆಚ್ಚುಗೆಯ ಮಾತುಗಳೇ ಬರುತ್ತಾವೆ. ಬಳಿಕ ಆಟ ಆಡುತ್ತಿರುವವರು ಹೆಣ್ಣು ಅಥವಾ ಗಂಡು ಎಂದು ತಿಳಿದುಕೊಳ್ಳುತ್ತಾರೆ. ಯಾವಾಗ ಅಕ್ಷಯ್ ಕುಮಾರ್ ಮಗಳು, ತಾನು ಹೆಣ್ಣು ಹುಡುಗಿ ಎಂದು ಹೇಳುತ್ತಾಳೋ ಆಗ ಮಾತುಕತೆಯ ಧ್ವನಿ ಬದಲಾಗಿದೆ.
ಆಗ ನಿನ್ನ ಬೆತ್ತಲೆ ಪೋಟೋಗಳನ್ನು ಕಳಿಸಿ ಎಂದು ಕೇಳಿದ್ದಾರೆ. ಅಪರಿಚಿತ ವ್ಯಕ್ತಿ ಹೀಗೆ ಬೆತ್ತಲೆ ಪೋಟೋ ಕಳಿಸುವಂತೆ ತಮ್ಮ ಮಗಳಿಗೆ ಕೇಳಿದ್ದಾನೆ. ತಕ್ಷಣವೇ ತಮ್ಮ ಮಗಳು ಗೇಮ್ ಆಡುವುದನ್ನು ನಿಲ್ಲಿಸಿ, ತನ್ನ ತಾಯಿಗೆ ವಿಷಯ ತಿಳಿಸಿದ್ದಾರೆ. ಮಗಳು, ಏನಾಯಿತು ಅನ್ನೋದನ್ನು ತನ್ನ ತಾಯಿಯ ಜೊತೆ ಹಂಚಿಕೊಂಡಿದ್ದಾರೆ. ಅದು ಒಳ್ಳೆಯ ಅಂಶ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.