Advertisment

ಸುದೀಪ್ ರಾಜಕೀಯಕ್ಕೆ.. ಕಿಚ್ಚ ಹೇಳಿದ್ದೇನು..?

ನಾಳೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಇವತ್ತು ಮಾಧ್ಯಮಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ರಾಜಕೀಯಕ್ಕೆ ಬರುವ ಬಗ್ಗೆ ಮಾತನ್ನಾಡಿದರು. ರಾಜಕಾರಣಕ್ಕೆ ಬರಬೇಕು ಅಂತೇನೂ ಇಲ್ಲ. ಕೆಲವೊಬ್ಬರು ಬರೋ ಥರಾ ಮಾಡುತ್ತಿದ್ದಾರೆ. ನೋಡೋಣ ಮುಂದೆ ಹೇಗೆ, ಏನು ಅಂತಾ? ಅನ್ನೋ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟರು.

author-image
Ganesh Kerekuli
kiccha sudeep (2)
Advertisment

ನಾಳೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಇವತ್ತು ಮಾಧ್ಯಮಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ರಾಜಕೀಯಕ್ಕೆ ಬರುವ ಬಗ್ಗೆ ಮಾತನ್ನಾಡಿದರು. ರಾಜಕಾರಣಕ್ಕೆ ಬರಬೇಕು ಅಂತೇನೂ ಇಲ್ಲ. ಕೆಲವೊಬ್ಬರು ಬರೋ ಥರಾ ಮಾಡುತ್ತಿದ್ದಾರೆ. ನೋಡೋಣ ಮುಂದೆ ಹೇಗೆ, ಏನು ಅಂತಾ? ಅನ್ನೋ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟರು. 

Advertisment

ಇದನ್ನೂ ಓದಿ:ದರ್ಶನ್ ಕುದುರೆ ಹತ್ತೋದ ಹೇಳಿಕೊಟ್ಟ ದಿನಗಳ ಮೆಲುಕು ಹಾಕಿದ ಸುದೀಪ್..!

Kiccha Sudeep(2)

ಗೊತ್ತಿಲ್ಲ! ಆ ರೀತಿಯ ಯೋಚನೆ ಏನೂ ಇಲ್ಲ. ಆದರೆ ಆವಾಗ ಆವಾಗ ಆ ರೀತಿಯ ಯೋಚನೆ ಬರುವ ಹಾಗೆ ಕೆಲವರು ಮಾಡುತ್ತಿರುತ್ತಾರೆ. ಅದಕ್ಕೆ ಅವರು ಯಾರು ಎಂದು ಕೇಳಲಾಯಿತು. ಪ್ರತಿಕ್ರಿಯಿಸಿದ ಸುದೀಪ್, ಯಾರೋ ಬಿಡಿ ಎಂದು ನಕ್ಕರು. 

ನಂತರ ಮೊನ್ನೆಯ ದಿನ ಮೈಸೂರಲ್ಲಿ ವೇದಿಕೆ ಮೇಲೆ ಸಿದ್ದರಾಮಯ್ಯ ಕರೆದು ಮಾತನಾಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇಲ್ಲ, ಸಿದ್ದರಾಮಯ್ಯ ಅವರು.. ಪಾಪ ಅವರಿಗೆ ಅವರದ್ದೇ ತಲೆನೋವು ತುಂಬಾನೇ ಇದೆ. ನನ್ನನ್ನ ಯಾಕೆ ಅದಕ್ಕೆಲ್ಲ ಸೇರಿಸಿಕೊಳ್ಳಬೇಕು. ಸಿದ್ದರಾಮಯ್ಯರ ಅವರಿಗೆ ನಾನು ಮೊದಲೇ ಹೇಳಿದ್ದೇನೆ. ನನಗೆ ಅವರ ಮೇಲೆ ಅಪಾರ ಗೌರವ ಇದೆ. ಕಾರಣ ಏನು ಅಂದ್ರೆ, ನಾನು ಬೇರೆ ಯಾವ ಕೆಲಸಕ್ಕೂ ಅವರ ಬಳಿ ಹೋಗಿಲ್ಲ. 

ಇದನ್ನೂ ಓದಿ:ಸಚಿವ ಜಮೀರ್​ಗೆ 2 ಕೋಟಿ ಹಣ.. ಲೋಕಾಯುಕ್ತ ವಿಚಾರಣೆಯಲ್ಲಿ ನಟಿ ರಾಧಿಕಾ ಹೇಳಿದ್ದೇನು?

Advertisment

Kiccha Sudeep

ಯಾವುದೋ ಚಿಕ್ಕ ಕಾರ್ಯಕ್ರಮ ಇರಲಿ. ಅದನ್ನು ಮಾಡಲು ಮುಂದೆ ನಿಂತಾಗ ಅಲ್ಲಿಗೆ ಬಂದು ಫ್ಲಾಗ್​ ಹಾಸ್ಟ್​ ಮಾಡಿಕೊಡ್ತಾರೆ. ಯಾವಾಗ ಅವರ ಮನೆಗೆ ಹೋದಾಗ, ಕರೆದು ಗೌರವ ನೀಡುತ್ತಾರೆ. ಗೌರವ ಕೊಟ್ಟು ಮಾತನ್ನಾಡಿಸುತ್ತಾರೆ ಅಂದಾಗ ಆ ವ್ಯಕ್ತಿಯ ಮೇಲೆ ನನಗೆ ಗೌರವ ಇದೆ. ನನಗೆ ಅವರು ವೈಯಕ್ತಿಕವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಅಂತಲ್ಲ. ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನ್ನಾಡಿಸುತ್ತಾರೆ. ಅದನ್ನೇ ಮಾತಾಡ್ತೀವಿ..

ಇದನ್ನೂ ಓದಿ: ಕಿಚ್ಚನ ಕರೆದು ಮಾತಾಡಿದ ಸಿಎಂ ಸಿದ್ದರಾಮಯ್ಯ - VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep
Advertisment
Advertisment
Advertisment