/newsfirstlive-kannada/media/media_files/2025/08/14/darshan_pavitra-2025-08-14-13-36-18.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿದಂತೆ 7 ಜನರಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇವತ್ತು ರದ್ದು ಮಾಡಿದೆ. ನ್ಯಾಯಾಲಯದ ತೀರ್ಪು ಬೆನ್ನಲ್ಲೇ ಆರೋಪಿಗಳು ಮತ್ತೆ ಜೈಲಿಗೆ ಹೋಗಬೇಕಿದೆ. ಆರೋಪಿಗಳು ಯಾರು ಯಾರು ಎನ್ನುವುದು ಈ ಫೋಟೋದಲ್ಲಿ ಕೆಂಪು, ಹಳದಿ ಬಣ್ಣದಿಂದ ಗುರುತು ಮಾಡಲಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳು ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರ ಬಂದಿದ್ದರು. ಇದಾದ ಮೇಲೆ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರು. ಇತ್ತ ಪವಿತ್ರಾ ಗೌಡ ಅವರು ತಮ್ಮ ಬ್ಯುಸಿನೆಸ್ ಕಡೆ ಚಿತ್ತ ಹರಿಸಿದ್ದರು.
ಸುಪ್ರೀಂ ಕೋರ್ಟ್ ತಕ್ಷಣದಿಂದಲೇ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ನಿಗಾವಹಿಸಿದ್ದು ಸದ್ಯದಲ್ಲೇ ಅವರನ್ನು ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಪ್ರದೋಶ್ ಮತ್ತೆ ಜೈಲಿಗೆ ಹೋಗಬೇಕಾದವರು.
ಇದನ್ನೂ ಓದಿ:ಅಜ್ಞಾತ ಸ್ಥಳದಲ್ಲಿ ದರ್ಶನ್.. ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ನಟ ಹೋಗಿದ್ದು ಎಲ್ಲಿಗೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ 2024ರ ಜೂನ್ 11ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳು ಅರೆಸ್ಟ್ ಆಗಿದ್ದರು. ಈ ಆರೋಪ ಹೊತ್ತ ನಟ ದರ್ಶನ್ ಮತ್ತು ಅವರ ಸಹಚರರು ಕೆಲ ತಿಂಗಳು ಜೈಲಿನಲ್ಲಿ ಇದ್ದರು. ನಂತರ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿದ್ದರು. ಇದಾದ ಮೇಲೆ ಹೈಕೊರ್ಟ್ನಿಂದ ರೆಗ್ಯೂಲರ್ ಬೇಲ್ ಮೇಲೆ ಹೊರ ಬಂದಿದ್ದರು. ಇದನ್ನು ಪ್ರಶ್ನೆ ಮಾಡಿದ್ದ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು ತೀರ್ಪು ಪ್ರಕಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ