ಕೇಶ ಕೊಟ್ಟು ಸ್ಫೂರ್ತಿಯಾದ ನಟಿಯರು ಯಾರಾರು? ವಿಗ್‌ ಮಾಡುವ ಎನ್‌ಜಿಓ ಗಳಿಗೆ ಮಾತ್ರ ಕೂದಲು ದಾನ ಮಾಡಿ

ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಮಂದಿ ನಟಿಯರು, ಸೆಲೆಬ್ರೆಟಿಗಳು ಕ್ಯಾನ್ಸರ್ ಗೆ ತುತ್ತಾದವರಿಗೆ ವಿಗ್ ಮಾಡಲೆಂದು ತಮ್ಮ ಕೇಶ ದಾನ ಮಾಡಿದ್ದಾರೆ. ಕೇಶ ದಾನ ಮಾಡಿ ಬೇರೆಯವರಿಗೆ ಸ್ಪೂರ್ತಿಯಾಗಿದ್ದಾರೆ. ಆದರೇ, ವಿಗ್ ಮಾಡುವ ಎನ್‌ಜಿಓ ಗಳಿಗೆ ಮಾತ್ರ ಕೂದಲು ದಾನ ಮಾಡಿದರೇ, ಕ್ಯಾನ್ಸರ್ ರೋಗಿಗಿಗಳಿಗೆ ಅನುಕೂಲವಾಗುತ್ತೆ.

author-image
Chandramohan
Hair donation to cancer patients (2)

ಶ್ವೇತಾ ಪ್ರಸಾದ್ ಹಾಗೂ ಅಮೃತಾ ಪ್ರೇಮ್ ರಿಂದ ಕೇಶ ದಾನ

Advertisment

ಕ್ಯಾನ್ಸರ್ ಚಿಕಿತ್ಸೆಯ ಹಂತಗಳಲ್ಲಿ ಕಂಡುಬರುವ ಕೂದಲು ಉದುರುವಿಕೆಗೆ ಎಷ್ಟೋ ಬಾಧಿತರ ಆತ್ಮಸ್ಥೆರ್ಯ ಕುಗ್ಗುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಚಂದದ ವಿಗ್ ಮಾಡಿ ಕೊಡಲು ಸಾಕಷ್ಟು ಜನರು ಕೂದಲು ದಾನ ಮಾಡುತ್ತಾರೆ. ಹೀಗೆ ಕೂದಲು ದಾನ ಮಾಡಿದವರಲ್ಲಿ ಕನ್ನಡದ ನಟಿಯರೂ ಇದ್ದಾರೆ ಗೊತ್ತಾ? ಹೌದು,  ನಟಿಯರು ತಮ್ಮ ಕೂದಲು, ಮುಖ, ತ್ವಚೆ, ದೇಹವನ್ನು ನಾಜೂಕಾಗಿ ಜೋಪಾನ ಮಾಡುತ್ತಾರೆ. ಅವು ಅವರ ಸಿನಿಮಾ ಕರಿಯರ್‌ಗೆ ತುಂಬಾ ಮುಖ್ಯ. ಆದರೆ ಅದರಷ್ಟೇ ಮುಖ್ಯ ಸಾಮಾಜಿಕ ಜವಾಬ್ದಾರಿ. ಅದ್ರಂತೆ ಕೂದಲಿನಿಂದ ಹೊಸ ಆತ್ಮವಿಶ್ವಾಸ ಹಾಗೂ ಮನುಷ್ಯತ್ವ, ಕ್ಯಾನ್ಸರ್ ಬಾಧಿತರಿಗೆ ನಟಿಯರು ಕೂದಲು ದಾನ ಮಾಡುವುದರಿಂದ ಅವರಿಂದ ಇನ್ನಷ್ಟು ಜನರು ಸ್ಫೂರ್ತಿಗೊಳ್ಳುತ್ತಾರೆ. ಇಂಥ ಒಳ್ಳೆಯ ಉದ್ದೇಶದೊಂದಿಗೆ ಕೇಶ ದಾನ ಮಾಡಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಕೆಲವು ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಸುಕೃತಾ ವಾಗ್ಲೆ , ಶ್ವೇತಾ ಪ್ರಸಾದ್, ಅಮೃತಾ ಪ್ರೇಮ್, ಕಾರುಣ್ಯಾ ರಾಮ್​ ಅವರು ಕ್ಯಾನ್ಸರ್​ ರೋಗಿಗಳಿಗಾಗಿ ತಮ್ಮ ಕೇಳದಾನ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಟಿ ಸುಕೃತಾ ವಾಗ್ಲೆ, ನಾಲ್ಕು ಬಾರಿ ಕೇಶ ದಾನ ಮಾಡಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ಹೆಡ್ ಶೇವ್ ಮಾಡಿ ಪರಿಚಯದವರಿಗೆ ಕೂದಲು ನೀಡಿದ್ರಂತೆ. ನಂತರ ಮೂರು ಬಾರಿ ಕೂದಲು ದಾನ ಮಾಡಿದ್ದಾರಂತೆ. ಅಷ್ಟೇ ಅಲ್ಲ ಕೇಶ ದಾನ ಮಾಡಲು 12 ಇಂಚು ಕೂದಲು ಇದ್ದರೆ ಸಾಕು. ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡ ಮಕ್ಕಳ ಪರಿಸ್ಥಿತಿ, ಮನಸ್ಥಿತಿ ಯೋಚನೆ ಮಾಡಿ. ಅವರೊಂದು ವಿಗ್ ಖರೀದಿಸಲು 20ರಿಂದ 40 ಸಾವಿರ ರೂ.ವೆಚ್ಚವಾಗುತ್ತದೆ. ಇದನ್ನು ಎನ್‌ ಜಿಒಗಳು ಉಚಿತವಾಗಿ ನೀಡುತ್ತವೆ. ಇದೇ ರೀತಿ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಕುರಿತಾದ ಜಾಗೃತಿ ಕಾರ್ಯಕ್ರಮಗಳು ಕೂಡ ನಡೆಯಬೇಕಿದೆ ಅಂತ ಸುಕೃತಾ ಹೇಳಿಕೊಂಡಿದ್ದಾರೆ. 
ಇನ್ನು ನಟಿ ಶ್ವೇತಾ ಪ್ರಸಾದ್​ ಕ್ಯಾನ್ಸರ್ ಬಾಧಿತರಿಗೆ ಕೂದಲು ದಾನ ಮಾಡಲೆಂದೇ ಉದ್ದ ಕೂದಲು ಬಿಟ್ಟಿದ್ದೆ ಅಂತ ಹೇಳಿಕೊಂಡಿದ್ದಾರೆ. ನಾನು ಕೇಶ ದಾನ ಮಾಡಿದ ಮೇಲೆ ತುಂಬಾ ಜನರು ನನ್ನ ಬಳಿ ವಿಚಾರಿಸಿ ಕೂದಲು ದಾನ ಮಾಡಿದ್ದಾರೆ. ಕೂದಲಿನಿಂದ ವಿಗ್ ಮಾಡುವ ಎನ್‌ಜಿಒಗಳಿಗೆ ದಾನ ಮಾಡಿದರೆ ಮಾತ್ರ ಉಪಯೋಗವಾಗುತ್ತದೆ. ವಿಗ್ ಮಾಡಲು ಅವರಿಗೂ ಒಂದಷ್ಟು ವೆಚ್ಚವಾಗುತ್ತದೆ. ಇದಕ್ಕೂ ಮುನ್ನ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವ, ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳ ಕುರಿತು ಮಾಹಿತಿ ಅವಶ್ಯವಿದೆ ಅಂತ ನಟಿ ಶ್ವೇತಾ ಪ್ರಸಾದ್ ಹೇಳಿದ್ದಾರೆ.


ಇನ್ನು ಈಗಷ್ಟೇ ಸ್ಯಾಂಡಲ್​ವುಡ್​ನಲ್ಲಿ ಅರಳುತ್ತಿರುವ ಹೂವು ಅಂದ್ರೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್​. ಅವರೂ ಕೂಡಾ ಕ್ಯಾನ್ಸರ್​ ಬಾಧಿತರಿಗೆ ಕೂದಲು ದಾನ ಮಾಡಿದ್ದಾರೆ. ಅದು ಯಾವಾಗ್ಲೋ ಅಲ್ಲ.. ಟಗರು ಪಲ್ಯ ಸಿನಿಮಾ ಆದ ಮೇಲೆ. ತಾಯಿ ಹೇಳಿದಂತೆ ನನ್ನ ಕೂದಲನ್ನು ಕ್ಯಾನ್ಸರ್ ಬಾಧಿತರಿಗೆ ದಾನ ಮಾಡಿದ್ದೇನೆ ಅಂತ ಅಮೃತಾ ಹೇಳಿಕೊಂಡಿದ್ದಾರೆ. ನಾವು ಹೇರ್ ಕಟ್ ಮಾಡಿಸುವಾಗ ಸಾಕಷ್ಟು ಕೂದಲು ನಷ್ಟವಾಗುತ್ತದೆ. ಇದೇ ಕೂದಲೆಳೆಗಳು ಕ್ಯಾನ್ಸರ್ ಪೀಡಿತರ ಮುಖದಲ್ಲಿ ಒಂದು ಸಣ್ಣ ನಗು ತಂದರೆ ಅದಕ್ಕಿಂತ ಖುಷಿ ಇನ್ನೇನಿದೆ? ಅಂತ ಅಮೃತಾ ಪ್ರೇಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕಾರುಣ್ಯಾ ರಾಮ್​ ಈವರೆಗೆ ಎರಡು ಬಾರಿ ಕ್ಯಾನ್ಸರ್ ಬಾಧಿತರಿಗೆ ಕೂದಲು ದಾನ ಮಾಡಿದ್ದಾರಂತೆ. ಒಮ್ಮೆ ಕೋವಿಡ್ ಸಮಯದಲ್ಲಿ ಹಾಗೂ ಇತ್ತೀಚೆಗಷ್ಟೇ ಮತ್ತೆ ಕೇಶ ದಾನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಒಮ್ಮೆ 13 ಇಂಚು ಕೂದಲು ನೀಡಿದ ಮೇಲೆ ಮತ್ತೆ ಅಷ್ಟೇ ಕೂದಲು ಬೆಳೆಯಲು ಒಂದೆರಡು ವರ್ಷಗಳೇ ಬೇಕಾಗುತ್ತವೆ. ನಟಿಯರು ತಮ್ಮ ಎಂದಿನ ಶೂಟಿಂಗ್ ಹಾಗೂ ಅದರ ಲುಕ್‌ಗಳಿಗಾಗಿ ಹೇರ್ ಸ್ಟೈಲ್ ಮೆಂಟೇನ್ ಮಾಡಲೇಬೇಕಾಗುತ್ತದೆ. ಆದರೆ ಅವಕಾಶ ಸಿಕ್ಕಾಗ ಹೀಗೆ ಒಳ್ಳೆಯ ಉದ್ದೇಶಕ್ಕೆ ಕೂದಲು ದಾನ ಮಾಡಿದರೆ ಇನ್ನಷ್ಟು ಜನರು ಪ್ರೇರಿತರಾಗುತ್ತಾರೆ ಅನ್ನೋದು ನಟಿ ಕಾರುಣ್ಯಾ ರಾಮ್ ಅಭಿಪ್ರಾಯ. 

Hair donation to cancer patients (3)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

actress karunya ram Hair donation to cancer patients
Advertisment