Advertisment

ಈ ಭಾರಿಯ ಬಿಗ್‌ ಬಾಸ್ ನಲ್ಲೂ ಮಾಸ್ಕ್ ಮ್ಯಾನ್ ಪ್ರತ್ಯಕ್ಷವಾಗುತ್ತಾನಾ? ಯಾರು ಈ ಬಿಗ್ ಬಾಸ್ ಸ್ಪರ್ಧಿ ಮಾಸ್ಕ್ ಮ್ಯಾನ್‌?

ನಾಡಿದ್ದಿನಿಂದ( ಸೆ. 28) ಈ ಭಾರಿಯ ಕನ್ನಡ ಬಿಗ್ ಬಾಸ್ ಆರಂಭವಾಗುತ್ತಿದೆ. ಬಿಗ್ ಬಾಸ್ ನಲ್ಲಿ ಮಾಸ್ಕ್ ಮ್ಯಾನ್ ಇರುತ್ತಾನಾ ಎಂಬ ಅನುಮಾನ ಬಂದಿದೆ. ಬೆಂಗಳೂರಿನಲ್ಲಿ ಮಾಸ್ಕ್ ಮ್ಯಾನ್ ಒಬ್ಬ ನಾನು ಬಿಗ್ ಬಾಸ್‌ಗೆ ಹೋಗುತ್ತೇನೆ ಎಂದು ಹೇಳಿಕೊಂಡು ಜನರ ಪ್ರತಿಕ್ರಿಯೆಯನ್ನು ರೆಕಾರ್ಡ್ ಮಾಡಿದ್ದಾನೆ. ಯಾರು ಈತ?

author-image
Chandramohan
BIG BOSS COCKROACH SUDHI02

ಬಿಗ್‌ ಬಾಸ್‌ಗೆ ಹೋಗುವ ಈ ಮಾಸ್ಕ್ ಮ್ಯಾನ್ ಯಾರು?

Advertisment
  • ಬಿಗ್ ಬಾಸ್ ಸ್ಪರ್ಧಿ ಆಗುತ್ತಾರಾ ಕಾಕ್ರೋಚ್ ಸುಧೀ?
  • ಮಾಸ್ಕ್ ಹಾಕಿಕೊಂಡು ಜನರ ಪ್ರತಿಕ್ರಿಯೆ ಪಡೆಯುತ್ತಿರುವ ಮಾಸ್ಕ್ ಮ್ಯಾನ್ ಯಾರು?
  • ಬಿಗ್ ಬಾಸ್ ನಲ್ಲೂ ಈ ಭಾರಿ ಮಾಸ್ಕ್ ಮ್ಯಾನ್ ಪ್ರತ್ಯಕ್ಷವಾಗ್ತಾನಾ?

ನಮ್ಮ ಕರ್ನಾಟಕದಲ್ಲಿ ಈ ಭಾರಿ ಅತಿ ಹೆಚ್ಟು ಗಮನ ಸೆಳೆದ ವ್ಯಕ್ತಿ ಅಂದರೇ, ಧರ್ಮಸ್ಥಳದ ಬುರುಡೆ ಗ್ಯಾಂಗ್ ನ ಮಾಸ್ಕ್ ಮ್ಯಾನ್.  ಸುಮಾರು 15 ರಿಂದ 20 ದಿನಗಳ ಕಾಲ ನಿತ್ಯ ಮುಖವನ್ನು ಸಂಪೂರ್ಣವಾಗಿ ಕಾಣದಂತೆ ಫುಲ್ ಮಾಸ್ಕ್ ಹಾಕಿಕೊಂಡು ಬಂದು ಧರ್ಮಸ್ಥಳದ ಬಂಗ್ಲೆಗುಡ್ಡ , ನೇತ್ರಾವತಿ ನದಿ ದಡ ಸೇರಿದಂತೆ ವಿವಿಧೆಡೆ ಇಲ್ಲೆಲ್ಲಾ ಹತ್ತಾರು ಶವ ಹೂತಿದ್ದೇನೆ ಎಂದು ಪೊಲೀಸರಿಗೆ ತೋರಿಸಿದ್ದೇ ಮಾಸ್ಕ್ ಮ್ಯಾನ್‌. ಈ ಮಾಸ್ಕ್ ಮ್ಯಾನ್ ಯಾರು ಎಂಬ ಕುತೂಹಲ ಅಂತೂ ರಾಜ್ಯದ ಜನರಿಗೆ ಇತ್ತು. ಆ ಮಾಸ್ಕ್ ಮ್ಯಾನ್ ಮುಖ ಕೊನೆಗೂ ರಾಜ್ಯದ ಜನರ ಮುಂದೆ ಬಹಿರಂಗವಾಗಿದೆ. 

ಈಗ  ಸೆಪ್ಟೆಂಬರ್ 28 ರಂದು ಆರಂಭವಾಗುವ ಕನ್ನಡ  ಬಿಗ್ ಬಾಸ್ ನಲ್ಲೂ ಮಾಸ್ಕ್ ಮ್ಯಾನ್ ಇರುತ್ತಾನಾ ಎಂಬ ಕುತೂಹಲ ಮೂಢಿದೆ. ಏಕೆಂದರೇ, ಧರ್ಮಸ್ಥಳದ  ಮಾಸ್ಕ್ ಮ್ಯಾನ್ ಮಾದರಿಯಲ್ಲೇ ವ್ಯಕ್ತಿಯೊಬ್ಬ ಸಂಪೂರ್ಣವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಜನರ ಬಳಿಗೆ ಹೋಗಿ ನಾನು ಬಿಗ್ ಬಾಸ್‌ಗೆ ಹೋಗುತ್ತೇನೆ ಎಂದು ಜನರ ಜೊತೆ ಮಾತನಾಡುತ್ತಿದ್ದಾನೆ. ಯಾರು ಈತ?  ಮಾಸ್ಕ್ ಮ್ಯಾನ್ ಚಿನ್ನಯ್ಯ ಅಂತೂ ಅಲ್ಲ.  ಏಕೆಂದರೇ, ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲು ಪಾಲಾಗಿದ್ದಾನೆ. 
ಆದರೇ, ಬೆಂಗಳೂರಿನಲ್ಲಿ ಮಾಸ್ಕ್ ಹಾಕಿಕೊಂಡು ಜನರ ಜೊತೆ ಮಾತನಾಡುತ್ತಿರುವ ಮಾಸ್ಕ್ ಮ್ಯಾನ್ ಕಾಕ್ರೋಚಾ ಎಂಬ ಕುತೂಹಲ, ಅನುಮಾನ ಮೂಢಿದೆ. ಜನರ ಬಳಿ ಹೋಗಿ ಜನರ ಪ್ರತಿಕ್ರಿಯೆಯನ್ನು ಈ ಮಾಸ್ಕ್ ಮ್ಯಾನ್ ರೆಕಾರ್ಡ್ ಮಾಡುತ್ತಿದ್ದಾನೆ. ಈ ಮಾಸ್ಕ್ ಮ್ಯಾನ್ ಕಾಕ್ರೋಚಾ ಸುಧಿ ಆಗಿರಬಹುದು ಎಂಬ ಊಹೆಗಳು ಇವೆ. ಈ ಕಾಕ್ರೋಚಾ ಸುಧಿಯೇ ಈ ಭಾರಿಯ ಬಿಗ್ ಬಾಸ್‌ನ ಮೊದಲ ಕಂಟೆಸ್ಟೆಂಟ್ ಆಗಿರಬಹುದು. 
ಇನ್ನೂ ಬಿಗ್ ಬಾಸ್ ಅಧಿಕೃತವಾಗಿ ಈ  ಭಾರಿಯ ಸ್ಪರ್ಧಿಗಳು ಯಾರೆಂದು ಘೋಷಿಸಿಲ್ಲ.  ಈ ಬಗ್ಗೆ ಸೀಕ್ರೆಟ್ ಕಾಪಾಡಿಕೊಳ್ಳಲಾಗಿದೆ.  ಆದರೇ, ಈ ಭಾರಿಯೂ ನಟ ಸುದೀಪ್ ಅವರೇ ಬಿಗ್ ಬಾಸ್ ಆ್ಯಂಕರಿಂಗ್ ಮಾಡುತ್ತಿದ್ದಾರೆ.  ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಿರುವ ಮಾಸ್ಕ್ ಮ್ಯಾನ್ ವಿಡಿಯೋದ ಇನ್ಸಾಟಾಗ್ರಾಮ್ ಲಿಂಕ್  ಅನ್ನು ಇಲ್ಲಿ ನೀಡಿದ್ದೇವೆ. ನೋಡಿ. 

Advertisment


 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIG BOSS 12 SEASON Bigg Boss Kannada 12
Advertisment
Advertisment
Advertisment