/newsfirstlive-kannada/media/post_attachments/wp-content/uploads/2024/11/JOB_BANK-1.jpg)
ಹುದ್ದೆಗಳ ಭರ್ತಿಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇಂದಿನಿಂದಲೇ ಈ ಅರ್ಜಿಗಳು ಆರಂಭವಾಗಿದ್ದು 30 ದಿನಗಳವರೆಗೆ ಅವಕಾಶ ನೀಡಲಾಗಿದೆ. ಆಸಕ್ತ ಉದ್ಯೋಗ ಆಕಾಂಕ್ಷಿಗಳು ಅಪ್ಲೇ ಮಾಡಬಹುದಾಗಿದೆ. ಕೆಲ ಪರೀಕ್ಷೆಗಳನ್ನು ನಡೆಸುವ ಮೂಲಕ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ.
2025ರ CISF ಕಾನ್ಸ್‌ಟೇಬಲ್ ಹುದ್ದೆಗಳ ಅಧಿಸೂಚನೆಯನ್ನು 21 ಜನವರಿಯಂದೇ ಪ್ರಕಟಿಸಲಾಗಿದ್ದು ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿ ಇದರಲ್ಲಿ ಕೊಡಲಾಗಿದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ನಮೂನೆ ಇತ್ಯಾದಿ ವಿವರ ಇಲ್ಲಿ ನೀಡಲಾಗಿದೆ. ಹುದ್ದೆಗಳನ್ನು ವರ್ಗಿಕರಿಸಲಾಗಿದ್ದು ಜನರಲ್-460, ಎಸ್ಸಿ-167, ಎಸ್ಟಿ-83, ಒಬಿಸಿ-303, ಇಡಬ್ಲುಎಸ್-111 ಇವೆ.
ಸಿಐಎಸ್ಎಫ್ ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ಲೆವೆಲ್-3 ರಲ್ಲಿ ಈ ಕೆಲಸಗಳು ಬರುತ್ತವೆ. ಈ ಉದ್ಯೋಗಗಳಿಗೆ ಲಿಖಿತ ಪರೀಕ್ಷೆ ಕೂಡ ಇರುತ್ತದೆ. ಇದರಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. 120 ನಿಮಿಷಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗಿರುತ್ತದೆ.
ಯಾವ್ಯಾವ ಉದ್ಯೋಗಗಳು;
ಕಾನ್ಸ್‌ಟೇಬಲ್, ಡ್ರೈವರ್ ಮತ್ತು ಕಾನ್ಸ್‌ಟೇಬಲ್- 845 ಹುದ್ದೆಗಳು
ಡ್ರೈವರ್ ಕಮ್ ಪಂಪ್ ಆಪರೇಟರ್ (ಅಗ್ನಿಶಾಮಕ ಸೇವೆಗಳ ಚಾಲಕ)- 279 ಹುದ್ದೆಗಳು
ಒಟ್ಟು ಹುದ್ದೆಗಳು; 1124
ಮಾಸಿಕ ವೇತನ ಶ್ರೇಣಿ ಎಷ್ಟು ಇದೆ?.
21,700 ದಿಂದ 69,100 ರೂಪಾಯಿ
ಇದನ್ನೂ ಓದಿ:BELನಲ್ಲಿ ಡೆಪ್ಯುಟಿ ಇಂಜಿನಿಯರ್ ಹುದ್ದೆಗಳ ನೇಮಕಾತಿ.. ಆಯ್ಕೆ ಆದ್ರೆ ಈ ನಗರಗಳಲ್ಲಿ ಉದ್ಯೋಗಕ್ಕೆ ನೇಮಕ
ಶೈಕ್ಷಣಿಕ ವಿದ್ಯಾರ್ಹತೆ
10ನೇ ತರಗತಿ ಅಥವಾ ಪಿಯುಸಿ ಪೂರ್ಣಗೊಳಿಸಿರಬೇಕು
ವಾಹನಗಳನ್ನು ಚಲಾಯಿಸುವುದು ಗೊತ್ತಿರಬೇಕು
ಅಪ್ಲಿಕೇಶನ್ ಫೀ;
ಜನರಲ್, ಒಬಿಸಿ, ಇಡಬ್ಲುಎಸ್- 100 ರೂಪಾಯಿ
ಎಸ್ಸಿ, ಎಸ್ಟಿ, ಮಾಜಿ ಸೈನಿಕ- ವಿನಾಯತಿ ಇದೆ
ವಯೋಮಿತಿ
21 ರಿಂದ 27 ವರ್ಷಗಳು
ಆಯ್ಕೆ ಪ್ರಕ್ರಿಯೆ ಹೇಗೆ ಇದೆ?.
- ಲಿಖಿತ ಪರೀಕ್ಷೆ
- ದೈಹಿಕ ದಕ್ಷತೆ ಮತ್ತು ಪ್ರಮಾಣಿತ ಪರೀಕ್ಷೆ (Physical Efficiency and Standard Test)
- ಟ್ರೇಡ್ ಟೆಸ್ಟ್ (Trade Test) ದೈಹಿಕ ಪರೀಕ್ಷೆ ಉತ್ತೀರ್ಣ ಆದವರಿಗೆ ಈ ಟೆಸ್ಟ್ ಇರುತ್ತದೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆಗೆ ಲಿಂಕ್ ಇಲ್ಲಿದೆ-https://cisfrectt.cisf.gov.in/index.php
ಈ ಕೆಲಸಕ್ಕೆ ಸಂಬಂಧಿಸಿದ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ- 03 ಫೆಬ್ರುವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 04 ಮಾರ್ಚ್ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ