CISF ನಲ್ಲಿ 1,161 ಉದ್ಯೋಗಗಳು.. SSLC ಪಾಸ್ ಆಗಿದ್ರೆ ಈ ಖಾಲಿ ಹುದ್ದೆಗಳಿಗೆ ಪ್ರಯತ್ನಿಸಿ

author-image
Bheemappa
Updated On
CISF ನಲ್ಲಿ 1,161 ಉದ್ಯೋಗಗಳು.. SSLC ಪಾಸ್ ಆಗಿದ್ರೆ ಈ  ಖಾಲಿ ಹುದ್ದೆಗಳಿಗೆ ಪ್ರಯತ್ನಿಸಿ
Advertisment
  • ಆನ್​ಲೈನ್ ಮೂಲಕ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು
  • ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿರುವ ಸಿಐಎಸ್ಎಫ್
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಯಾವುದು..?

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯು ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ಕಾನ್ಸ್‌ಟೇಬಲ್/ಟ್ರೇಡ್ಸ್‌ಮೆನ್ ಹುದ್ದೆಗಳ ನೇಮಕಾತಿ ನೋಟಿಫಿಕೇಶನ್ ರಿಲೀಸ್ ಮಾಡಿದೆ. ಹೀಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಸಿಐಎಸ್ಎಫ್ ಯಾವ ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ ಎಂಬುದರ ಮಾಹಿತಿ ಇಲ್ಲಿದೆ. ಅಲ್ಲದೇ ಈ ಹುದ್ದೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳಿವೆ. ಹೀಗಾಗಿ ಅಭ್ಯರ್ಥಿಗಳು ಎಲ್ಲವನ್ನೂ ಸರಿಯಾಗಿ ಗಮನಿಸಬೇಕು. ಭಾರತದಲ್ಲಿ ಎಲ್ಲೇ ಇದ್ದರೂ ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದ ಭದ್ರತಾ ಸಂಸ್ಥೆಯಡಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಇದೊಂದು ಸುವರ್ಣವಕಾಶವಾಗಿದೆ. ಆಯ್ಕೆ ಆದ ಅಭ್ಯರ್ಥಿಗಳಿಗೆ ಕೆಲಸ ಕೂಡ ದೇಶದ್ಯಾಂತ ಇರುತ್ತದೆ.

ಉದ್ಯೋಗದ ಹೆಸರು- ಕಾನ್‌ಸ್ಟೆಬಲ್ (ಟ್ರೇಡ್ಸ್‌ಮನ್)

ಉದ್ಯೋಗಗಳ ಸಂಖ್ಯೆ- 1,161

ಶೈಕ್ಷಣಿಕ ಅರ್ಹತೆ-
10ನೇ ತರಗತಿ ಪಾಸ್ ಆಗಿರಬೇಕು

ಕೆಲಸದ ಸ್ಥಳ-
ಭಾರತದಾದ್ಯಂತ

ಇದನ್ನೂ ಓದಿ:NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?

publive-image

ಮಾಸಿಕ ಸಂಬಳ
21,700 ದಿಂದ 69,100 ರೂಪಾಯಿ

ವಯಸ್ಸಿನ ಮಿತಿ
18 ರಿಂದ 28 ವರ್ಷಗಳು

ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 100 ರೂಪಾಯಿ
ಎಸ್​​ಸಿ, ಎಸ್​ಟಿ, ಮಹಿಳಾ ಅಭ್ಯರ್ಥಿಗಳು- ಶುಲ್ಕ ವಿನಾಯತಿ ಇದೆ

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ- 05 ಮಾರ್ಚ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 03 ಏಪ್ರಿಲ್

ಅಧಿಸೂಚನೆಯ ಲಿಂಕ್-https://cisfrectt.cisf.gov.in/file_open.php?fnm=TJWLVRED20N4P74hbL7QaiBsCnCwcEc8XCekOQExUIYgM4vRHuslt1ebinD861IH0ZD80miud66l43IvnNTzRRE3kFo7Spz5lg2ZQO8c-Xc

ಮಾಹಿತಿಗಾಗಿ ಲಿಂಕ್-https://cisfrectt.cisf.gov.in/

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment