/newsfirstlive-kannada/media/post_attachments/wp-content/uploads/2024/04/UP_CISF_.jpg)
ಲಕ್ನೋ: ರೀಲ್ಸ್​ ಮಾಡುವ ವಿಚಾರಕ್ಕೆ ಸಿಐಎಸ್‌ಎಫ್ ಗಾರ್ಡ್​ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ನಲ್ಲಿ ನಡೆದಿದೆ.
ಯುವತಿಯೊಬ್ಬರು ಪ್ರವಾಸಕ್ಕೆಂದು ಗೆಳೆಯರ ಜೊತೆ ತಾಜ್ ಮಹಲ್​ಗೆ ಬಂದಿದ್ದರು. ಈ ವೇಳೆ ಯುವತಿ ಹಾಗೂ ಸ್ನೇಹಿತರು ರೀಲ್ಸ್​ ಮಾಡಲು ಮುಂದಾಗಿದ್ದರು. ಆಗ ಅಲ್ಲಿ ಕಾವಲಿದ್ದ ಸಿಐಎಸ್‌ಎಫ್ ಗಾರ್ಡ್​ ಯುವತಿಯನ್ನ ರೀಲ್ಸ್​ ಮಾಡದಂತೆ ತಡೆದಿದ್ದಾರೆ. ಇದೇ ವಿಚಾರವಾಗಿ ಸಿಐಎಸ್‌ಎಫ್ ಗಾರ್ಡ್​ ಹಾಗೂ ಯುವತಿ ನಡುವೆ ಬಿರುಸಿನ ವಾಗ್ವಾದ ನಡೆದು ತಾರಕಕ್ಕೇರಿದೆ ಎನ್ನಲಾಗಿದೆ.
आगरा में ताजमहल के सुरक्षाकर्मी ने की गुंडई.
ताज का दीदार करने आई महिला के साथ की विवाद. वीडियो वायरल. pic.twitter.com/LkDNuRMq4X— Priya singh (@priyarajputlive) April 6, 2024
ಬಳಿಕ ಸಿಐಎಸ್‌ಎಫ್ ಸಿಬ್ಬಂದಿ​ ಯುವತಿಗೆ ಕಪಾಳ ಮೋಕ್ಷ ಮಾಡಿ, ಮನಬಂದಂತೆ ಥಳಿಸಿದ್ದಾನೆ. ವಿಡಿಯೋದಲ್ಲಿ ಸಿಬ್ಬಂದಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಐಎಸ್‌ಎಫ್ ಗಾರ್ಡ್​ನ ವರ್ತನೆಗೆ ಆಕ್ರೋಶ ವ್ಯಕ್ತವಾಗ್ತಿದೆ. ಈ ಸಂಬಂಧ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us