newsfirstkannada.com

ತಾಜ್​ ಮಹಲ್ ಮುಂದೆ ರೀಲ್ಸ್​ಗಾಗಿ​ ಗಲಾಟೆ.. ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ CISF ಸಿಬ್ಬಂದಿ ​

Share :

Published April 7, 2024 at 8:19am

Update April 7, 2024 at 11:14am

    ಮೊಬೈಲ್​ನಲ್ಲಿ ರೀಲ್ಸ್ ಮಾಡದಂತೆ ಹೇಳಿದ್ದ ಸಿಐಎಸ್​ಎಫ್​ ಸಿಬ್ಬಂದಿ

    ಪ್ರವಾಸಕ್ಕೆ ಸ್ನೇಹಿತರ ಜೊತೆ ಬಂದಿದ್ದ ಯುವತಿ ಮೇಲೆ ಸಿಬ್ಬಂದಿ ಹಲ್ಲೆ

    ಸಿಐಎಸ್‌ಎಫ್ ಗಾರ್ಡ್​ ಹಾಗೂ ಯುವತಿ ನಡುವೆ ಬಿರುಸಿನ ವಾಗ್ವಾದ

ಲಕ್ನೋ: ರೀಲ್ಸ್​ ಮಾಡುವ ವಿಚಾರಕ್ಕೆ ಸಿಐಎಸ್‌ಎಫ್ ಗಾರ್ಡ್​ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ನಲ್ಲಿ ನಡೆದಿದೆ.

ಯುವತಿಯೊಬ್ಬರು ಪ್ರವಾಸಕ್ಕೆಂದು ಗೆಳೆಯರ ಜೊತೆ ತಾಜ್ ಮಹಲ್​ಗೆ ಬಂದಿದ್ದರು. ಈ ವೇಳೆ ಯುವತಿ ಹಾಗೂ ಸ್ನೇಹಿತರು ರೀಲ್ಸ್​ ಮಾಡಲು ಮುಂದಾಗಿದ್ದರು. ಆಗ ಅಲ್ಲಿ ಕಾವಲಿದ್ದ ಸಿಐಎಸ್‌ಎಫ್ ಗಾರ್ಡ್​ ಯುವತಿಯನ್ನ ರೀಲ್ಸ್​ ಮಾಡದಂತೆ ತಡೆದಿದ್ದಾರೆ. ಇದೇ ವಿಚಾರವಾಗಿ ಸಿಐಎಸ್‌ಎಫ್ ಗಾರ್ಡ್​ ಹಾಗೂ ಯುವತಿ ನಡುವೆ ಬಿರುಸಿನ ವಾಗ್ವಾದ ನಡೆದು ತಾರಕಕ್ಕೇರಿದೆ ಎನ್ನಲಾಗಿದೆ.

ಬಳಿಕ ಸಿಐಎಸ್‌ಎಫ್ ಸಿಬ್ಬಂದಿ​ ಯುವತಿಗೆ ಕಪಾಳ ಮೋಕ್ಷ ಮಾಡಿ, ಮನಬಂದಂತೆ ಥಳಿಸಿದ್ದಾನೆ. ವಿಡಿಯೋದಲ್ಲಿ ಸಿಬ್ಬಂದಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಐಎಸ್‌ಎಫ್ ಗಾರ್ಡ್​ನ ವರ್ತನೆಗೆ ಆಕ್ರೋಶ ವ್ಯಕ್ತವಾಗ್ತಿದೆ. ಈ ಸಂಬಂಧ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಜ್​ ಮಹಲ್ ಮುಂದೆ ರೀಲ್ಸ್​ಗಾಗಿ​ ಗಲಾಟೆ.. ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ CISF ಸಿಬ್ಬಂದಿ ​

https://newsfirstlive.com/wp-content/uploads/2024/04/UP_CISF_.jpg

Load More