/newsfirstlive-kannada/media/post_attachments/wp-content/uploads/2025/07/new-show.jpg)
ವೀಕೆಂಡ್​ಗೆ ಜಬರ್ದಸ್ತ್ ಮನರಂಜನೆ ನೀಡಿಕೋ ಹೊಸ ಶೋ ಬರ್ತಿದೆ. ರಿಯಾಲಿಟಿ ಶೋಗಳ ನಿರೂಪಣೆಗೆ ಫೇಮಸ್​ ಆಗಿರೋ ಅಕುಲ್​ ಬಾಲಾಜಿ ಅವರು ಅದೇ ಹಳೆ ಗತ್ತು ಗಮ್ಮತ್ತಲ್ಲಿ ಮರಳುತ್ತಿದ್ದಾರೆ.
ಹಳ್ಳಿ ಹೈದ ಪ್ಯಾಟೇಗ್​ ಬಂದ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ಇಂಡಿಯನ್​ ಸೇರಿದಂತೆ ಹತ್ತು ಹಲವು ಸೂಪರ್​ ಹಿಟ್​ ಶೋಗಳ ನಿರೂಪಣೆ ಮಾಡಿದ್ರು ಅಕುಲ್ ಬಾಲಾಜಿ​. ಇದೇ ಮಾದರಿಯಲ್ಲಿ ಹೊಸ ಶೋ ಬರೋದಕ್ಕೆ ಸಜ್ಜಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ ಈ ಶೋ.
2 ಪ್ರೊಮೋಗಳು ಗಮನ ಸೇಳಿತಿವೆ. ನಮ್ಮವರ ಭಾವನೆಗಳಿಗೆ ಬೆಲೆ ಕೋಡಿ ಎಂಬ ಮಾದರಿಯಲ್ಲಿ ರಿಲೀಸ್​ ಆಗಿರೋ ನಾವು ನಮ್ಮವರು ಟೈಟಲ್​ಗೆ ವೀಕ್ಷಕರು ಫಿದಾ ಆಗಿದ್ದಾರೆ. ಹಳ್ಳಿ ಬದುಕಿನ ಬವಣೆಗಳನ್ನ ಸಿಟಿ ಯುವತಿಯರಿಗೆ ಪರಿಚಯಿಸೋ ಶೋ ಇದಾಗಿದ್ದು, ಹತ್ತು ಹಲವು ವಿಶೇಷತೆಗಳ ಜೊತೆಗೆ ತೆರೆ ಮೇಲೆ ತರೋ ಪ್ಲ್ಯಾನ್​ ಮಾಡ್ತಿದೆ ತಂಡ.
View this post on Instagram
ಈಗಾಗಲೇ ಆಡಿಷನ್​ಗೆ ಕರೆ ಕೊಟ್ಟಿದ್ದು, ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್​ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಭಾಗವಹಿಸಬಹುದಾಗಿದೆ. ಇದರ ಜೊತೆಗೆ ತಪ್ಪದೇ ಆಧಾರ್ ಕಾರ್ಡ್ ಮತ್ತು ಪಾಸ್​ ಪೋರ್ಟ್​ ಸೈಜ್ ಫೋಟೋ ಜೊತೆಗೆ ತೆಗೆದುಕೊಂಡು ಹೋಗಬೇಕು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ