ಮೇ 15ವರೆಗೆ ದೇಶದ 32 ಏರ್​​ಪೋರ್ಟ್​​ಗಳಲ್ಲಿ ವಿಮಾನ ಹಾರಾಟ ಬಂದ್! ಎಲ್ಲೆಲ್ಲಿ..?

author-image
Veena Gangani
Updated On
New Airport: ನೆಲಮಂಗಲದಲ್ಲಿ ಹೊಸ ವಿಮಾನ ನಿಲ್ದಾಣ  ಬಹುತೇಕ ಅಂತಿಮ; 10 ಲಾಭಗಳು ಇಲ್ಲಿವೆ!
Advertisment
  • ಭಾರತ, ಪಾಕ್​ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣ
  • ಯಾವೆಲ್ಲಾ ಪ್ರದೇಶಗಳಲ್ಲಿ ವಿಮಾನ ಹಾರಾಟ ಸ್ಥಗಿತ?
  • ನಾಗರಿಕ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗಡಿಯಲ್ಲಿ ಗುಂಡಿನ ಶಬ್ಧ ಕೇಳಿ ಬರುತ್ತಿವೆ. ಮೇ 7 ರಂದು ಭಾರತೀಯ ಸೇನೆ ಆಪರೇಷನ್ ಸಿಂಧೂರ್​​ ಕಾರ್ಯಾಚರಣೆ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿದ ಬಳಿಕ ಪಾಕಿಸ್ತಾನ ಗಲಿಬಿಲಿಗೊಂಡಿದೆ.

ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?

publive-image

ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ಕೆರಳಿರುವ ಪಾಕಿಸ್ತಾನ, ಗಡಿಯಲ್ಲಿ ಭಾರತೀಯ ನಾಗರಿಕರ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸ್ತಿದೆ. ಇದೀಗ ಪಾಕ್​ನಿಂದ ಮತ್ತೆ ದಾಳಿಯ ಮುನ್ಸೂಚನೆ ಹಿನ್ನೆಲೆಯಲ್ಲಿ  ಮುನ್ನೆಚ್ಚರಿಕಾ ಕ್ರಮವಾಗಿ ಮೇ 15ರವರೆಗೆ ನಾಗರಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ.

ಎಲ್ಲೆಲ್ಲಿ ಹಾರಾಟ ಸ್ಥಗಿತ..?

ಪಾಕಿಸ್ತಾನದಿಂದ ಮಿಸೈಲ್​ ದಾಳಿ ಹಿನ್ನೆಲೆಯಲ್ಲಿ ನಾಗರಿಕ ಸುರಕ್ಷತಾ ದೃಷ್ಟಿಯಿಂದ, ಶ್ರೀನಗರ ಮತ್ತು ಅಮೃತಸರ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ 32 ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಮೇ 15ರವರೆಗೆ ಶ್ರೀನಗರ ಮತ್ತು ಅಮೃತಸರ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಾಗಿದೆ. ಅಧಮ್‌ಪುರ್, ಅಂಬಾಲಾ, ಅಮೃತಸರ, ಅವಂತಿಪುರ, ಬಟಿಂಡಾ, ಭುಜ್, ಬಿಕಾನೇರ್, ಚಂಡೀಗಢ, ಹಲ್ವಾರಾ, ಹಿಂಡನ್, ಜಮ್ಮು, ಜೈಸಲ್ಮೇರ್, ಜಾಮ್‌ನಗರ, ಜೋಧ್‌ಪುರ, ಕಾಂಡ್ಲಾ, ಕಂಗ್ರಾ (ಗಗ್ಗಲ್), ಕೆಶೋದ್, ಕಿಶನ್‌ಗಢ್, ಕುಲು ಮನಾಲಿ (ಭುಂಟರ್), ಲೇಹ್, ಲೂಧಿಯಾನಾ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್ ಮತ್ತು ಉತ್ತರಲೈ.

32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಸಂಬಂಧಿತ ವಾಯುಯಾನ ಅಧಿಕಾರಿಗಳು ಮಾಹಿತಿ ನೀಡಿದ್ದು, ನಾಗರಿಕ ಸುರಕ್ಷತೆ ದೃಷ್ಟಿಯಿಂದ ವಿಮಾನ ಹಾರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment