/newsfirstlive-kannada/media/post_attachments/wp-content/uploads/2025/07/DY-CHANDRACHUD.jpg)
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ.ಚಂದ್ರಚೂಡ್ (DY Chandrachud) ಎಂಟು ತಿಂಗಳ ನಿವೃತ್ತಿಯ ನಂತರವೂ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್ (Supreme Court) ಅವರಿಗೆ ಪತ್ರ ಬರೆದು ದೆಹಲಿಯ ಲುಟಿಯೆನ್ಸ್‌ನ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 5 ಅನ್ನು ಖಾಲಿ ಮಾಡುವಂತೆ ಕೇಳಿದೆ.
ಇದನ್ನೂ ಓದಿ: 14 ದೇಶಗಳ ಮೇಲೆ ಟ್ರಂಪ್ ಮತ್ತೆ ಸುಂಕ ಯುದ್ಧ.. ಪ್ರತೀಕಾರ ತೀರಿಸಿಕೊಂಡ್ರೆ ಸುಮ್ನಿರಲ್ಲ ಎಂದು ಎಚ್ಚರಿಕೆ
ನಿವೃತ್ತ ಜಸ್ಟೀಸ್ ಚಂದ್ರಚೂಡ್ ನವೆಂಬರ್, 2024ರಲ್ಲಿ ಹುದ್ದೆಯಿಂದ ನಿವೃತ್ತರಾದರು. ಮಾಜಿ ಸಿಜೆಐ ಅವರಿಗೆ ಸರ್ಕಾರದಿಂದ ಹಂಚಿಕೆಯಾದ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದೆ. ಇದು ಎರಡರಿಂದ ಮೂರು ವಾರ ತೆಗೆದುಕೊಳ್ಳಲಿದೆ. ಹೀಗಾಗಿ ಅವರು ಇನ್ನೂ ಟೈಪ್ VIII ಬಂಗಲೆಯಲ್ಲೇ ವಾಸಿಸುತ್ತಿದ್ದಾರೆ.
ನಿವೃತ್ತಿಯ ನಂತರ ಸಿಜೆಐಗೆ ಬಂಗಲೆ ನಿಯಮ
ಜುಲೈ 1 ರಂದು ಸುಪ್ರೀಂ ಕೋರ್ಟ್ನ ಆಡಳಿತವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಬಂಗಲೆ ಸಂಖ್ಯೆ 5ರ ಅಗತ್ಯವಿದೆ ಎಂದಿದೆ. ನಿಯಮಗಳ ಪ್ರಕಾರ, ಸಿಜೆಐ ನಿವೃತ್ತಿಯ ನಂತರ ಆರು ತಿಂಗಳು ಮಾತ್ರ ಸರ್ಕಾರಿ ಬಂಗಲೆಯಲ್ಲಿ ಉಳಿಯಬಹುದು. ಅಧಿಕೃತ ನಿಯಮಗಳ ಪ್ರಕಾರ, ಅವರು ಮೊದಲೇ ಬಂಗಲೆಯನ್ನು ಖಾಲಿ ಮಾಡಬೇಕಾಗಿತ್ತು. ನಿವೃತ್ತಿಯ ನಂತರ ಚಂದ್ರಚೂಡ್ ಅವರು ಇನ್ನೂ ಕೆಲವು ದಿನಗಳವರೆಗೆ ಬಂಗಲೆಯಲ್ಲಿ ಉಳಿಯಲು ಸಿಜೆಐ ಬಳಿ ಅನುಮತಿ ಕೋರಿದ್ದರು. ನಿವೃತ್ತ ಜಸ್ಟೀಸ್ ಚಂದ್ರಚೂಡ್ ಅವರ ವಿನಂತಿಯನ್ನು ಸಿಜೆಐ ಸ್ವೀಕರಿಸಿದ್ದರು ಎಂದು ಹೇಳಲಾಗಿದೆ. ಈಗ ಅವರಿಗೆ ಯಾವುದೇ ವಿನಾಯಿತಿ ಇರುವುದಿಲ್ಲ.
ನಿವೃತ್ತಿಯ ನಂತರ CJI ಎಲ್ಲಿ ವಾಸಿಸಬಹುದು?
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ (ತಿದ್ದುಪಡಿ) ನಿಯಮಗಳು-2022 ರ ಪ್ರಕಾರ, ಸಿಜೆಐ ಬಯಸಿದರೆ ನಿವೃತ್ತಿ ಪಡೆದು 6 ತಿಂಗಳವರೆಗೆ ಟೈಪ್ VII ಬಂಗಲೆಯಲ್ಲಿ ವಾಸಿಸಬಹುದು. ಪ್ರಸ್ತುತ ವಾಸಿಸುತ್ತಿರುವ ಬಂಗಲೆ ಒಂದು ಹಂತಕ್ಕಿಂತ ಮೇಲಿರುತ್ತದೆ. ನಿವೃತ್ತ ನ್ಯಾಯಮೂರ್ತಿ ಚಂದ್ರಚೂಡ್ ಅವರ ಸರ್ಕಾರಿ ಬಂಗಲೆಯಲ್ಲಿ ಉಳಿಯುವ ಅವಧಿ ಮೇ 10 ರಂದು ಕೊನೆಗೊಂಡಿದೆ.
ಅಂತಹ ಪರಿಸ್ಥಿತಿಯಲ್ಲಿ ಸಚಿವಾಲಯವು ನಿವೃತ್ತ ನ್ಯಾಯಮೂರ್ತಿ ಚಂದ್ರಚೂಡ್ಗೆ 5430 ರೂ. ಪರವಾನಗಿ ಶುಲ್ಕ ತೆಗೆದುಕೊಳ್ಳುವ ಮೂಲಕ 11 ಡಿಸೆಂಬರ್ 2024 ರಿಂದ 30 ಏಪ್ರಿಲ್ 2025 ರವರೆಗೆ ಟೈಪ್ VIII ಬಂಗಲೆಯನ್ನು ಮಂಜೂರು ಮಾಡಿದೆ. ಸದ್ಯ ನಾನು ಈಗಾಗಲೇ ಪಡೆದಿರುವ ಸರ್ಕಾರಿ ನಿವಾಸ ನವೀಕರಣಗೊಳ್ಳುತ್ತಿದೆ. ಅದು ಪೂರ್ಣಗೊಳ್ಳಲು ಕಾಯುತ್ತಿದ್ದೇನೆ. ಆ ಕೆಲಸ ಮುಗಿದ ತಕ್ಷಣ ಅಲ್ಲಿಗೆ ಸ್ಥಳಾಂತರಗೊಳ್ಳುವುದಾಗಿ ನಿವೃತ್ತ ಸಿಜೆಐ ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬರು ಕನ್ನಡಿಗರಿಗೆ ಪ್ಲೇಯಿಂಗ್-11ನಿಂದ ಗೇಟ್ಪಾಸ್? ಲಾರ್ಡ್ಸ್ ಟೆಸ್ಟ್ನಲ್ಲಿ ಒಟ್ಟು 4 ಮೇಜರ್ ಸರ್ಜರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ