ಪಾಕಿಸ್ತಾನದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ; ವಿಡಿಯೋ ವೈರಲ್ ಆದ ಮೇಲೆ ಏನಂದ್ರು?

author-image
admin
Updated On
ಪಾಕಿಸ್ತಾನದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ; ವಿಡಿಯೋ ವೈರಲ್ ಆದ ಮೇಲೆ ಏನಂದ್ರು?
Advertisment
  • ಪಾಕಿಸ್ತಾನದ ಸುದ್ದಿವಾಹಿನಿಯಲ್ಲಿ ಸಿಎಂ ಹೇಳಿಕೆಯಿಂದ ಸಂಚಲನ
  • ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ
  • ಸಿದ್ದರಾಮಯ್ಯಗೆ ಪಾಕ್ ಮೇಲೆ ಪ್ರೀತಿ ಅನ್ನೋ ಟ್ರೋಲ್​, ಆರೋಪ!

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಪಾಕಿಸ್ತಾನದ ಸುದ್ದಿ ವಾಹಿನಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಸಾರವಾಗಿತ್ತು. ವೈರಲ್ ಆದ ವಿಡಿಯೋ ನೋಡಿದ ಬಿಜೆಪಿ ನಾಯಕರಂತೂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದರು.

ಪಾಕಿಸ್ತಾನದ ಸುದ್ದಿವಾಹಿನಿಯಲ್ಲಿ ತಮ್ಮ ಹೇಳಿಕೆ ಸಂಚಲನ ಸೃಷ್ಟಿಸಿದ ಮೇಲೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಬ್ರೇಕಿಂಗ್ ನ್ಯೂಸ್ ಆದ ಸಿಎಂ ಸಿದ್ದರಾಮಯ್ಯ ಹೇಳಿಕೆ; ವಿಡಿಯೋ ಫುಲ್‌ ವೈರಲ್‌!  

ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ನಾನು ಹೇಳಿಲ್ಲ. ಪಹಲ್ಗಾಮ್‌ ಭದ್ರತೆಯ ಬಗ್ಗೆ ನಾನು ಮಾತನಾಡಿದ್ದೆ. ಉಗ್ರರ ದಾಳಿಯಲ್ಲಿ ಭದ್ರತಾ ವೈಫಲ್ಯ ಆಗಿದೆ. ಯುದ್ಧ ಅನಿವಾರ್ಯ ಆದ್ರೆ ಮಾಡಲಿ. ನಾನು ಪಾಕಿಸ್ತಾನದ ಮೇಲೆ ಯುದ್ಧ ಬೇಡ ಅಂತ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿತ್ತು. ಪಾಕಿಸ್ತಾನ, ಭಾರತದಲ್ಲೇ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ ಅನ್ನೋ ಅಪಪ್ರಚಾರ ಮಾಡಿದೆ. ಸಿದ್ದರಾಮಯ್ಯಗೆ ಪಾಕ್ ಮೇಲೆ ಪ್ರೀತಿ ಅಂತಲೂ ಟ್ರೋಲ್​ ಮಾಡಲಾಗುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment