R ಅಶ್ವಿನ್​​ ನಿವೃತ್ತಿಗೆ ಟೀಮ್​ ಇಂಡಿಯಾ ಕೋಚ್​ ಗಂಭೀರ್​ ಕಾರಣ; ಇಬ್ಬರ ಮಧ್ಯೆ ಆಗಿದ್ದೇನು?

author-image
Ganesh Nachikethu
Updated On
ಕ್ಯಾಪ್ಟನ್​ ರೋಹಿತ್ ಇಲ್ಲದಿದ್ದಾಗ ಭಾರೀ ಅವಮಾನ.. R ಅಶ್ವಿನ್​ಗೆ ಹೀಗೆ ಮಾಡಬಹುದಿತ್ತಾ?
Advertisment
  • ಬಿಸಿಸಿಐಗೆ ಎಚ್ಚರಿಕೆ ನೀಡಿದ್ದ ಹೆಡ್​ ಕೋಚ್​ ಗೌತಮ್​ ಗಂಭೀರ್​
  • ಮುಖ್ಯ ಕೋಚ್​​ ಗಂಭೀರ್​​, ಆರ್​​. ಅಶ್ವಿನ್​ ಮಧ್ಯೆ ಆಗಿದ್ದೇನು..?
  • ಅಶ್ವಿನ್​​ ದಿಢೀರ್​​ ನಿವೃತ್ತಿ ಘೋಷಣೆ ಮುನ್ನ ಏನಾಗಿತ್ತು ಗೊತ್ತಾ?

ಬಾರ್ಡರ್‌ ಗವಾಸ್ಕರ್‌ ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾದ ಸ್ಟಾರ್​​​ ಪ್ಲೇಯರ್‌ ಒಬ್ಬರು ರಿಟೈರ್​ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಇನ್ನೂ 2 ಟೆಸ್ಟ್ ಪಂದ್ಯಗಳು ಬಾಕಿ ಇರುವಂತೆ ನಿವೃತ್ತಿ ಘೋಷಿಸಬಹುದು ಎಂದ ಯಾರು ಊಹಿಸಿರಲಿಲ್ಲ. ಸ್ಟಾರ್​​ ಪ್ಲೇಯರ್​ ಒಬ್ಬರು ನಿವೃತ್ತಿ ಘೋಷಿಸಿದ್ದು ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಹೊಸ ತಂಡ ಕಟ್ಟಲು ಮುಂದಾದ ಗಂಭೀರ್​​

ರಾಹುಲ್​ ದ್ರಾವಿಡ್​ ನಂತರ ಗೌತಮ್​ ಗಂಭೀರ್​​ ಟೀಮ್​ ಇಂಡಿಯಾದ ಹೊಸ ಕೋಚ್​​ ಆಗಿದ್ದಾರೆ. ಕೋಚ್​ ಆದ ಬೆನ್ನಲ್ಲೇ ಗಂಭೀರ್​​ ಅವರು ತಮ್ಮ ಕನಸಿನ ತಂಡವನ್ನು ಕಟ್ಟುವಲ್ಲಿ ನಿರತರಾಗಿದ್ದಾರೆ. ಹಾಗಾಗಿಯೇ ಇವರು ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಾ ಅನುಭವಿಗಳನ್ನು ಸೈಡ್​ಲೈನ್​ ಮಾಡುತ್ತಿದ್ದಾರೆ.

ಹಿರಿಯರ ಸೈಡ್​ಲೈನ್​ ಏಕೆ?

ಗಂಭೀರ್ ಕೋಚ್‌ ಆಗೋ ಮುನ್ನವೇ ಹಲವು ಕಂಡೀಷನ್ಸ್​ ಹಾಕಿದ್ದರು. ಆ ಷರತ್ತಿಗೆ ಬಿಸಿಸಿಐ ಒಪ್ಪಿಗೆ ನೀಡಿದ ಮೇಲೆಯೇ ಕೋಚ್​ ಆದರು. ಅದರಂತೆ ಫಾರ್ಮ್‌ನಲ್ಲಿ ಇಲ್ಲದ ಆಟಗಾರರನ್ನು ಹೆಚ್ಚು ದಿನ ತಂಡದಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಎಂದಿದ್ದರು ಗಂಭೀರ್​​.

ಅಶ್ವಿನ್​​​ ನಿವೃತ್ತಿಗೆ ಗಂಭೀರ್​ ಕಾರಣ

ಇತ್ತೀಚೆಗೆ ಆರ್​​. ಅಶ್ವಿನ್ ಫಾರ್ಮ್​ನಲ್ಲಿ ಇರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಇವರಿಗೆ ಸ್ಥಾನ ಸಿಕ್ಕಿರಲಿಲ್ಲ. ಇದೇ ಕಾರಣದಿಂದಲೇ ಬೇಸರಗೊಂಡ ಅಶ್ವಿನ್​​ ಕ್ರಿಕೆಟ್​ಗೆ ವಿದಾಯ ಹೇಳಿದ್ರು.

3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಡ್ರಾ ಸಾಧಿಸಿದವು. ಪಂದ್ಯ ಮುಗಿದ ಬೆನ್ನಲ್ಲೇ ಅಶ್ವಿನ್‌ ನಿವೃತ್ತಿ ಘೋಷಿಸಿದರು. ಇವರು ವಿದಾಯ ಹೇಳಿದ ರೀತಿ ಈಗ ಭಾರೀ ಚರ್ಚೆಗೆ ಒಳಗಾಗಿದೆ. ತನಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಬೇಸರಗೊಂಡು ಅಶ್ವಿನ್ ಹೊರ ನಡೆದರು.

ಅಶ್ವಿನ್​​ ಏನಂದ್ರು?

ನಿವೃತ್ತಿ ಘೋಷಿಸಿ ಮಾತಾಡಿದ ಆರ್​. ಅಶ್ವಿನ್​ ಅವರು, ತಮ್ಮಲ್ಲಿ ಇನ್ನೂ ಕ್ರಿಕೆಟ್​ ಇದೆ ಎಂದಿದ್ದಾರೆ. ತನ್ನಲ್ಲಿ ಇರೋ ಕ್ರಿಕೆಟ್​​ ಅನ್ನು ಕ್ಲಬ್‌ ಮಟ್ಟದ ಟೂರ್ನಮೆಂಟ್​ ಮತ್ತು ಐಪಿಎಲ್‌ನಲ್ಲಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೇಳಿಕೆಯೇ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ಮನ್ನಣೆ ಇಲ್ಲ ಎಂಬುದು ಹೇಳುತ್ತಿದೆ.

ಇದನ್ನೂ ಓದಿ: R. ಅಶ್ವಿನ್‌ ನಿವೃತ್ತಿಗೆ ಅಸಲಿ ಕಾರಣ ಬಹಿರಂಗ; ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment