Advertisment

ರಾಮ ನವಮಿ ಮೆರವಣಿಗೆ ವೇಳೆ ಸ್ಫೋಟ, ಕಲ್ಲು ತೂರಾಟ.. ಓರ್ವ ಮಹಿಳೆ ಗಂಭೀರ

author-image
AS Harshith
Updated On
ರಾಮ ನವಮಿ ಮೆರವಣಿಗೆ ವೇಳೆ ಸ್ಫೋಟ, ಕಲ್ಲು ತೂರಾಟ.. ಓರ್ವ ಮಹಿಳೆ ಗಂಭೀರ
Advertisment
  • ರಾಮ ನವಮಿಯಂದು ಕಿಡಿಗೇಡಿಗಳಿಂದ ಕಲ್ಲು ತೂರಾಟ
  • ಕಟ್ಟಡದ ಮೇಲಿಂದ ನಿಂತು ಕಲ್ಲು ಬಿಸಾಕಿದ ಕಿಡಿಗೇಡಿಗಳು
  • ಗಲಾಟೆಯನ್ನು ಚದುರಿಸಲು ಲಾಠಿ ಚಾರ್ಜ್​ ಮಾಡಿದ ಪೊಲೀಸರು

ಪಶ್ಚಿಮ ಬಂಗಾಳದ ಮುರ್ಶಿದಾಬಾದ್​ನಲ್ಲಿ ರಾಮ ನವಮಿ ಮೆರವಣಿಗೆ ವೇಳೆ ಸ್ಫೋಟ ಸಂಭವಿಸಿದೆ. ಘಟನೆ ವೇಳೆ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಶಕ್ತಿಪುರ ಪ್ರದೇಶದಲ್ಲಿ ರಾಮನವಮಿ ಹಬ್ಬದಂದು ಕೆಲವು ಕಿಡಿಗೇಡಿಗಳು ಕಟ್ಟಡದ ಮೇಲಿಂದ ಕಲ್ಲು ತೂರಾಟ ನಡೆಸಿದ್ದು, ಘಟನೆ ಬಗ್ಗೆ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು, ಕಲ್ಲು ತೂರಾಟ ಮಾಡಿರುವ ಕಿಡಿಗೇಡಿಗಳಿಗೂ ಸ್ಫೋಟಕ್ಕೂ ಸಂಬಂಧವಿದೆಯಾ ಎಂಬ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದು ಎರಡು ಸಮುದಾಯದ ನಡುವಿನ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್

Advertisment


">April 17, 2024

ಇನ್ನು ರಾಮ ನವಮಿ ರ್ಯಾಲಿ ವೇಳೆ ಕಲ್ಲೂ ತೂರಾಟ ನಡೆದಿದೆ ಎಂದು ಬಂಗಾಳ ಬಿಜೆಪಿ ಘಟಕ ಆರೋಪಿಸಿದೆ. ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಿದೆ.

ಪೊಲೀಸರು ಗಲಾಟೆಯನ್ನು ಚದುರಿಸಲು ಲಾಠಿ ಚಾರ್ಜ್​ ಕೂಡ ಮಾಡಿದ್ದಾರೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಗೊಂಡವರನ್ನು ಬೆಹ್ರಾಂಪುರದ ಮುರ್ಷಿದಾಬಾದ್​ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment