/newsfirstlive-kannada/media/post_attachments/wp-content/uploads/2025/02/10-STANDARD-GIRL-1.jpg)
ಅವಳು 10ನೇ ಕ್ಲಾಸಿನ ಬಾಲಕಿ. ಎಂದಿನಂತೆ ಶಾಲೆಯ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೊರಟಿದ್ದಳು. ಗುರುವಾರ ಮುಂಜಾನೆ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದ್ದಳು. ಏನಾಯ್ತು ಎಂದು ನೋಡುವಷ್ಟರಲ್ಲಿ 16ರ ಬಾಲೆಗೆ ಹೃದಯಾಘಾತವಾಗಿತ್ತು. ಕೂಡಲೇ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಬಾಲಕಿ ಬದುಕುಳಿಯಲಿಲ್ಲ.
ಇಂತಹ ಒಂದು ದುರಂತ ಘಟನೆ ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಶ್ರೀನಿಧಿ ಎಂಬ ಬಾಲಕ್ಕಿ ರಮಾರೆಡ್ಡಿ ಮಂಡಲ್ನ ಸಿಂಗಾರಪಲ್ಲಿ ಎಂಬ ಗ್ರಾಮದ ಹುಡುಗಿ. ಕಮಾರರೆಡ್ಡಿಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಗುರುವಾರ ಎಂದಿನಂತೆ ಶಾಲೆಗೆ ಬಂದ ಮಗು ಏಕಾಏಕಿ ಕುಸಿದು ಬಿದ್ದಿದ್ದಾಳೆ. ಎದೆ ನೋವು ಕಾಣಿಸಿಕೊಂಡು ಶಾಲೆಯ ಅಂಗಳದಲ್ಲಿಯೇ ಬಿದ್ದುಬಿಟ್ಟಿದ್ದಾಳೆ. ಅದನ್ನು ನೋಡಿದ ಶಾಲಾ ಶಿಕ್ಷಕರು ತಡಮಾಡದೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಸಿಪಿಆರ್ ಮಾಡಿದ್ದಾರೆ, ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಚೆಲ್ಲಿದ್ದಾಳೆ. ವೈದ್ಯರು ಶ್ರೀನಿಧಿ ಅಸುನೀಗಿದ್ದಾಳೆಂದು ಹೇಳಿದ್ದಾರೆ.
ಇದನ್ನೂ ಓದಿ:ರೀಲ್ಸ್ ಮಾಡುತ್ತ ನದಿಗೆ ಜಿಗಿದ ಅನನ್ಯ ರಾವ್ ಯಾರು..? ಓರ್ವ ಶಾಸಕರ ಸಂಬಂಧಿಯೂ ಹೌದು
ಶ್ರೀನಿಧಿಯ ಹಠಾತ್ ನಿಧನಕ್ಕೆ ಇಡೀ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ಹುಡುಗಿಗೆ ಹೃದಾಯಾಘಾತ ಆಗಿದ್ದನ್ನು ಕಂಡ ಅನೇಕ ಆಕೆಯ ಗೆಳೆತಿಯರು ಬೆಚ್ಚಿ ಬಿದ್ದಿದ್ದಾರೆ. ಆಕೆಯ ಸಾವಿನ ಸುದ್ದಿ ಅವರನ್ನು ಶಾಕ್ಗೆ ಒಳಗಾಗುವಂತೆ ಮಾಡಿದೆ. ಕೊನೆಗೆ ಶ್ರೀನಿಧಿಯ ಮೃತದೇಹವನ್ನು ಅವರ ಊರಿಗೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ:ಜಸ್ಟ್ 13.50 ಸೆಕೆಂಡ್.. ಮೆಮೊರಿ ಚಾಂಪಿಯನ್ಶಿಪ್ ಗೆದ್ದ ಭಾರತೀಯ ವಿದ್ಯಾರ್ಥಿ; ಇವನ ನೆನಪಿನ ಶಕ್ತಿ ಅದ್ಭುತ!
ಕೆಲವು ದಿನಗಳ ಹಿಂದಷ್ಟೇ ಆರನೇ ಕ್ಲಾಸ್ ಓದುತ್ತಿದ್ದ ಮೊಹಿತ್ ಚೌದರಿ ಎಂಬ ಪುಟ್ಟ ಬಾಲಕನು ಕೂಡ ಹೀಗೆಯೇ ಅಲಿಘರ್ನ ಸಿರೌಲಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದ. ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದ ದೀಕ್ಷಾ ಎಂಬ 8 ವರ್ಷದ ಬಾಲಕಿಯೂ ಕೂಡ ಕೆಲವು ದಿನಗಳ ಹಿಂದೆ ಹೀಗೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಳು. ಈ ದುರಂತಗಳು ನಡೆದು ಕೆಲವೇ ದಿನಗಳು ಆಗಿವೆ. ಅದರ ಬೆನ್ನಲ್ಲೇ ಈಗ ಶ್ರೀನಿಧಿಯೂ ಅದೇ ರೀತಿ ಸಾವಿನ ಮನೆ ಸೇರಿದ್ದಾಳೆ.
ಆರೋಗ್ಯ ತಜ್ಞರು ಹೇಳುವ ಪ್ರಕಾರ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹೃದಾಯಾಘಾತದ ಸಂಖ್ಯೆ ಶೇಕಡಾ 22 ರಷ್ಟು ಹೆಚ್ಚಾಗಿದೆಯಂತೆ. ತುಂಬಾ ಆರೋಗ್ಯಯುತವಾದ ಮನುಷ್ಯ ಏಕಾಏಕಿ ಮೃತಪಟ್ಟರೆ ಅದನ್ನು ಹೃದಯಸ್ತಂಭನ ಅಥವಾ ಕಾರ್ಡಿಯಕ್ ಅರೆಸ್ಟ್ ಎನ್ನುತ್ತವೆ. ಈ ರೀತಿಯ ಕೇಸ್ಗಳು ಸುಮಾರು ಎರಡು ವರ್ಷದಲ್ಲಿ 22 ಪರ್ಸೆಂಟ್ ಹೆಚ್ಚಿಗೆಯಾಗಿವೆ ಎಂದು ವೈದ್ಯ ತಜ್ಞರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ