/newsfirstlive-kannada/media/post_attachments/wp-content/uploads/2025/07/EXAMS_1.jpg)
ಬೆಂಗಳೂರು: ಇನ್ನು ಮುಂದೆ 10ನೇ ತರಗತಿ ಪರೀಕ್ಷೆಗಳಲ್ಲಿ ಪ್ರತಿ ವಿಷಯದಲ್ಲಿ 33 ಅಂಕಗಳನ್ನು ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಈ ಸಂಬಂಧ ಪಾಸ್ ಆಗಲು ಬೇಕಾದ ಅಂಕಗಳನ್ನ 35 ರಿಂದ 33 ಅಂಕಗಳಿಗೆ ಕಡಿತ ಮಾಡಲು ಸರ್ಕಾರ ಮುಂದಾಗಿದೆ.
ಎಸ್ಎಸ್ಎಸ್ಎಲ್ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಪ್ರತಿ ವಿಷಯದಲ್ಲಿ 33 ಅಂಕ ಪಡೆದರೆ ಉತ್ತೀರ್ಣರಾಗುತ್ತಾರೆ. ಈ ಮೊದಲು 35 ಅಂಕಗಳನ್ನು ಪಡೆದರೆ ವಿದ್ಯಾರ್ಥಿಗಳು ಪಾಸ್ ಮಾಡಲಾಗುತ್ತಿತ್ತು. ಆದರೆ ಈಗ ಇದರಲ್ಲಿ 2 ಅಂಕ ಕಡಿತ ಮಾಡಲಾಗುತ್ತಿದ್ದು ಪ್ರತಿ ವಿಷಯದಲ್ಲಿ 33 ಮಾರ್ಕ್ಸ್ ಪಡೆದರೆ ವಿದ್ಯಾರ್ಥಿಗಳು ಪಾಸ್ ಆಗುತ್ತಾರೆ.
ಇದನ್ನೂ ಓದಿ: BHEL ಅಲ್ಲಿ 500ಕ್ಕೂ ಅಧಿಕ ಉದ್ಯೋಗಗಳು.. 10th, ಐಟಿಐ ಪಾಸ್ ಆಗಿದ್ರೆ ಅಪ್ಲೇ ಮಾಡಬಹುದು
ಓವರ್ ಅಲ್ ಅಗ್ರಿಗೇಟ್ ಶೇ.33 ಪಾಸಿಂಗ್ ಅಂಕಕ್ಕೆ ಕಡಿತ ಮಾಡಿರುವ ಸರ್ಕಾರ 625ಕ್ಕೆ 206 ಅಂಕ ಪಡೆದರೆ ಉತ್ತೀರ್ಣರಾಗುತ್ತಾರೆ. ಈ ಹಿಂದೆ ಓವರ್ ಅಲ್ ಪಾಸಿಂಗ್ ಶೇ.35 ಇತ್ತು. ಪ್ರತಿ ವಿಷಯದಲ್ಲಿ 35 ಮಾರ್ಕ್ಸ್ ಪಡೆಯಬೇಕಿತ್ತು. ಆದರೆ ಈಗ ಪ್ರತಿ ವಿಷಯದಲ್ಲಿ 33 ಅಂಕ ಪಡೆದ್ರೆ ಉತೀರ್ಣರಾಗುತ್ತಾರೆ. ಪಾಸಿಂಗ್ ಅಗ್ರಿಗೇಟ್ ಶೇ.33 ಬರಬೇಕು. ಸಿಬಿಎಸ್ಇ ಮಾಡಲ್ನಲ್ಲಿ ಇದೇ ಮಾದರಿ ಇದೆ. ಈ ಬಗ್ಗೆ ಅಕ್ಷಪಣೆ ಪಡೆಯಲು ಸರ್ಕಾರ ಮಂದಾಗಿದೆ. ಜನರು ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಲು 15 ದಿನ ಕಾಲಾವಕಾಶ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ