/newsfirstlive-kannada/media/post_attachments/wp-content/uploads/2025/03/TN_PUC_STUDENT_NEW.jpg)
ಚೆನ್ನೈ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಗೆ ನಿಲ್ದಾಣದಲ್ಲಿ ಸರ್ಕಾರಿ ಬಸ್ ನಿಲ್ಲಿಸದಿದ್ದಕ್ಕೆ ಡ್ರೈವರ್ ಹಾಗೂ ಕಂಡಕ್ಟರನ್ನು ಅಮಾನತು ಮಾಡಲಾಗಿದೆ. ಈ ಘಟನೆಯು ತಮಿಳುನಾಡಿನ ವಾಣಿಯಂಬಾಡಿ ಪಟ್ಟಣದ ಕೊಥಕೋಟೈ ಬಸ್ ನಿಲ್ದಾಣದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಳು. ಇದಕ್ಕಾಗಿ ಕೊಥಕೋಟೈ ಬಸ್ ನಿಲ್ದಾಣಕ್ಕೆ ಬಂದು ಸರ್ಕಾರಿ ಬಸ್ಗಾಗಿ ಕಾಯುತ್ತಿದ್ದಳು. ಈ ವೇಳೆ ತಿರುಪತ್ತೂರು-ಅಲಂಗಾಯಂ ನಡುವೆ ಸಂಚಾರ ಮಾಡುವ ಸರ್ಕಾರಿ ಬಸ್ ಬಂದಿದೆ. ಆದರೆ ವಿದ್ಯಾರ್ಥಿನಿಯನ್ನು ನೋಡಿ, ಡ್ರೈವರ್ ನಿಲ್ಲಿಸದೇ ಬಸ್ ಅನ್ನು ಒಂದೇ ವೇಗದಲ್ಲೇ ಚಾಲನೆ ಮಾಡಿಕೊಂಡು ಹೋಗಿರುವುದು ವಿಡಿಯೋದಿಂದ ಗೊತ್ತಾಗುತ್ತಿದೆ.
ಇದನ್ನೂ ಓದಿ:ಗ್ರೇಟ್ ಫಿನಿಶರ್ ಅಶುತೋಷ್ ಶರ್ಮಾರನ್ನ ಮಿಸ್ ಮಾಡಿಕೊಂಡ RCB.. ಹೇಗೆ ಗೊತ್ತಾ?
ಬೋರ್ಡ್ ಪರೀಕ್ಷೆ ಇರುವ ಕಾರಣ ಬಸ್ ಮಿಸ್ ಆಗುತ್ತೆಂದು ಅದರ ಹಿಂದೆ ಹಾಗೇ ಜೀವದ ಹಂಗು ತೊರೆದು ವಿದ್ಯಾರ್ಥಿನಿ ಓಡಿದ್ದಾಳೆ. ಬಳಿಕ ಸ್ವಲ್ಪ ದೂರಕ್ಕೆ ಹೋಗಿ ನಿಲ್ಲಿಸಿದಾಗ ಬಸ್ಹತ್ತಿಕೊಂಡು ವಿದ್ಯಾರ್ಥಿನಿ ಪರೀಕ್ಷೆಗೆ ಹೋಗಿರುವುದು ಗೊತ್ತಾಗಿದೆ. ಈ ವಿಡಿಯೋವನ್ನು ಬಸ್ ನಿಲ್ದಾಣದ ಬಳಿ ನಿಂತಿದ್ದ ಬೈಕ್ ಸವಾರನೊಬ್ಬ ಸೆರೆ ಹಿಡಿದಿದ್ದಾನೆ ಎಂದು ಹೇಳಲಾಗಿದೆ.
ಸದ್ಯ ಈ ಘಟನೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಚಾಲಕ ಮುನಿರಾಜ್ನನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕಂಡಕ್ಟರ್ ಅಶೋಕ್ ಕುಮಾರ್ ಅವರನ್ನು ತೆಗೆದು ಹಾಕಲಾಗಿದೆ ಎಂದು ಹೇಳಲಾಗಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ನೆಟ್ಟಿಗರಿಂದ ಚಾಲಕ ಹಾಗೂ ನಿರ್ವಾಹಕ ಇಬ್ಬರ ವಿರುದ್ಧವೂ ಆಕ್ರೋಶ ಕೇಳಿ ಬಂದಿದೆ.
நிற்காமல் சென்ற பேருந்து | பதறி அடித்து ஓடிய பள்ளி மாணவி
வாணியம்பாடி அருகே கொத்தக்கோட்டையில் பேருந்திற்காக காத்திருந்த பன்னிரெண்டாம் வகுப்பு மாணவி.
பேருந்து நிற்காமல் சென்றதால் பதறி அடித்துக்கொண்டு பேருந்தை பின் தொடர்ந்து ஓடி ஏறி, பரீட்சைக்கு சென்றார்.#Thiruppathur… pic.twitter.com/hDpslfbh3z
— ABP Nadu (@abpnadu)
நிற்காமல் சென்ற பேருந்து | பதறி அடித்து ஓடிய பள்ளி மாணவி
வாணியம்பாடி அருகே கொத்தக்கோட்டையில் பேருந்திற்காக காத்திருந்த பன்னிரெண்டாம் வகுப்பு மாணவி.
பேருந்து நிற்காமல் சென்றதால் பதறி அடித்துக்கொண்டு பேருந்தை பின் தொடர்ந்து ஓடி ஏறி, பரீட்சைக்கு சென்றார்.#Thiruppathur… pic.twitter.com/hDpslfbh3z— ABP Nadu (@abpnadu) March 25, 2025
">March 25, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ