newsfirstkannada.com

ಎಲೆಕ್ಷನ್​​ ಹೊತ್ತಲ್ಲೇ ರೋಹಿತ್‌ ವೇಮುಲಾ ಕೇಸಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕ್ಲೀನ್​ ಚಿಟ್​​!

Share :

Published May 3, 2024 at 8:13pm

Update May 3, 2024 at 8:15pm

    ತೆಲಂಗಾಣದಲ್ಲಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣಾ ಕಾವು ಜೋರು

    17 ಲೋಕಸಭಾ ಕ್ಷೇತ್ರಗಳಿಗೆ ಇದೇ ತಿಂಗಳು ಮೇ 13ನೇ ತಾರೀಕು ಮತದಾನ..!

    ಚುನಾವಣೆ ಹೊತ್ತಲ್ಲೇ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಕೇಸ್ ಮುನ್ನಲೆಗೆ

ಹೈದರಾಬಾದ್​​: ಕರ್ನಾಟಕದ ನೆರೆರಾಷ್ಟ್ರ ತೆಲಂಗಾಣದಲ್ಲಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಇದೇ ತಿಂಗಳು ಮೇ 13ನೇ ತಾರೀಕು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಹೇಗಾದ್ರೂ ಗೆಲ್ಲಲೇಬೇಕು ಎಂದು ಸಿಎಂ ರೇವಂತ್​ ರೆಡ್ಡಿ ನೇತೃತ್ವದ ಕಾಂಗ್ರೆಸ್​​​, ಮಾಜಿ ಸಿಎಂ ಕೆಸಿಆರ್​ ನೇತೃತ್ವದ ಟಿಆರ್​ಎಸ್​ ಹಾಗೂ ಬಿಜೆಪಿ ಪಕ್ಷ ಭಾರೀ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಕೇಸ್​​ ಮತ್ತೆ ಮುನ್ನಲೆಗೆ ಬಂದಿದೆ.

ಹೌದು, ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ವಯಕ್ತಿಕ ಸಮಸ್ಯೆಗಳೇ ಕಾರಣ ಎಂದು ತೆಲಂಗಾಣ ಪೊಲೀಸ್ರು ಹೈಕೋರ್ಟ್​​ ಅಂತಿಮ ವರದಿ ಸಲ್ಲಿಸಿದ್ದಾರೆ. ತೆಲಂಗಾಣ ಹೈಕೋರ್ಟ್​ಗೆ ಸಲ್ಲಿಸಿರೋ ವರದಿಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ತನ್ನ ನಕಲಿ ಜಾತಿ ಪ್ರಮಾಣ ಪತ್ರವೇ ಕಾರಣ ಎಂದು ತಿಳಿಸಿದೆ.

ತೆಲಂಗಾಣ ಪೊಲೀಸ್ರು ಸಲ್ಲಿಸಿದ ವರದಲ್ಲೇನಿದೆ?

ರೋಹಿತ್ ವೇಮುಲಾ ಹಾಸ್ಟೆಲ್​ನಿಂದ ಹೊರಹಾಕಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಹಲವಾರು ಕಾರಣಗಳಿಂದ ಅಸಮಾಧಾನಗೊಂಡಿದ್ದ. ರೋಹಿತ್​ ವೇಮುಲಾ ದಲಿತ ಸಮುದಾಯಕ್ಕೆ ಸೇರಿಲ್ಲ. ಇವರು ಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ರೋಹಿತ್​ ವೇಮುಲಾ ತಾಯಿ ಅವರೇ ಖುದ್ದು ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದರು. ಇವರು ಪಿಎಚ್​​​​ಡಿ ಸೇರಿದ ಬಳಿಕ ವಿದ್ಯಾರ್ಥಿ ಸಂಘಟನೆಯಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ರಾಜಕೀಯದಲ್ಲೇ ಹೆಚ್ಚು ಭಾಗಿಯಾದ ಕಾರಣ ತನ್ನ ಪಿಎಚ್​​​​ಡಿ ಕಡೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪಿಎಚ್​​ಡಿ ಸೇರಿದ 2ನೇ ವರ್ಷಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ್ರು. ಎಲ್ಲಿ ತನ್ನ ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಸೋರಿಕೆ ಆಗುತ್ತೋ ಎಂದು ಹೆದರಿ ರೋಹಿತ್​ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತೆಲಂಗಾಣ ಪೊಲೀಸ್ರು ಉಲ್ಲೇಖಿಸಿದ್ದಾರೆ. ಈ ಮೂಲಕ ರೋಹಿತ್​ ವೇಮುಲಾ ಕೇಸ್​ನಲ್ಲಿ ಆರೋಪಿಗಳು ಆಗಿರೋ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಸೇರಿದಂತೆ ಹಲವರಿಗೆ ಕ್ಲೀನ್​ ಚಿಟ್​ ನೀಡಲಾಗಿದೆ.

ಏನಿದು ಕೇಸ್​​?

2016ರ ಜನವರಿಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಕೇಸ್​​ ಬಗ್ಗೆ ತನಿಖೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜಸ್ಟೀಸ್ ರೂಪಾನ್ವಾಲ್ ಆಯೋಗ ರಚಿಸಿತ್ತು. ವೇಮುಲಾ ಸಾವಿಗೆ ವಿವಿ ಆಡಳಿತ ಮಂಡಳಿಯೆ ಕಾರಣ ಎಂದು ಹಲವರು ಆರೋಪಿಸಿದ್ದರು. ಆದರೆ ರೋಹಿತ್ ಆತ್ಮಹತ್ಯೆಗೂ ವಿವಿ ಆಡಳಿತ ಮಂಡಳಿಗೂ ಯಾವುದೇ ಸಂಬಂಧ ವಿಲ್ಲ ಎಂದು ಹೇಳುವ ಮೂಲಕ ತೆಲಂಗಾಣ ಪೊಲೀಸ್ರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಯಾರು ಈ ರೋಹಿತ್​ ವೇಮುಲಾ?

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿ ಆಗಬೇಕೆಂದು ಕನಸು ಕಾಣುತ್ತಿದ್ದ ದಲಿತ ಸಂಶೋಧಕ ರೋಹಿತ್​ ವೇಮುಲಾ. ರೋಹಿತ್​​ ವೇಮುಲಾ ಸಾವಿಗೆ ಜಾತಿ, ಧರ್ಮವೆಂಬ ಗೋಡೆಗಳನ್ನು ದಾಟಿ ಭಾರತದ ಯುವ ಸಮೂಹ ಕಣ್ಣೀರಿಟ್ಟಿತು. ರೋಹಿತ್ ವೇಮುಲ ರಾಧಿಕ ವೇಮುಲ ಎಂಬ ದಲಿತೆಯ ಮಗ ಆಗಿದ್ದ. ರಾಧಿಕಾ ವೇಮುಲ ಕಷ್ಟಪಟ್ಟು ತನ್ನ ಮಗ ರೋಹಿತ್​​ನನ್ನು ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಇದರ ಪರಿಣಾಮ ರೋಹಿತ್ ವೇಮುಲ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ರೋಹಿತ್​ ಅಂಬೇಡ್ಕರರು ಅವರಿಂದ ಪ್ರಭಾವಕ್ಕೆ ಒಳಗಾಗಿದ್ದ. ವಿ. ವಿಯಲ್ಲಿದ್ದ ’ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್’ನ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಸಕ್ರಿಯ ಕಾರ್ಯಕರ್ತನಾದನು. ಕೇವಲ ಎರಡು ವರ್ಷಗಳಲ್ಲಿ ಸಂಘಟನೆಯ ಪ್ರಮುಖ ತೀರ್ಮಾನಗಳನ್ನು ತೀರ್ಮಾನಿಸುವ ಸದಸ್ಯರಲ್ಲಿ ಒಬ್ಬನಾಗಿದ್ದ.

ಇದನ್ನೂ ಓದಿ: ನಾಳೆ ಬೆಂಗಳೂರು, ಗುಜರಾತ್​ ಮಧ್ಯೆ ರೋಚಕ ಪಂದ್ಯ.. ಆರ್​​​ಸಿಬಿಗೆ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎಲೆಕ್ಷನ್​​ ಹೊತ್ತಲ್ಲೇ ರೋಹಿತ್‌ ವೇಮುಲಾ ಕೇಸಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕ್ಲೀನ್​ ಚಿಟ್​​!

https://newsfirstlive.com/wp-content/uploads/2024/05/Rohit-Vemula_Smriti-Irani.jpg

Load More