ಎಲ್ಲರೂ ಆಸ್ತಿ ವಿವಾದಗಳಿಂದ ಸ್ವಲ್ಪ ದೂರವಿರಿ ಶುಭವಿದೆ
ಸಾಮಾಜಿಕ ಕಾರ್ಯಕ್ರಮದಲ್ಲಿ ಆಸಕ್ತಿ ಕಡಿಮೆಯಾಗಲಿದೆ
ಆರೋಗ್ಯದ ವಿಚಾರದಲ್ಲಿ ಏರುಪೇರು ಉಂಟಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ
- ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಬೇಡ
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿರುವಂತಹದ್ದು
- ಮನೆಯಲ್ಲಿ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ
- ವಿದ್ಯಾರ್ಥಿಗಳಿಗೆ ಇಂದು ಶುಭವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಮನೆಯಲ್ಲಿ ಅನ್ಯೋನ್ಯತೆ ಇರಬೇಕು
- ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ
- ಕಾರ್ಯಕ್ಷೇತ್ರದಲ್ಲಿ ನಷ್ಟವನ್ನು ಅನುಭವಿಸುತ್ತೀರಿ
- ಸರ್ಕಾರಿ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ
- ಆರ್ಥಿಕವಾಗಿ ತೊಂದರೆಯಿರುವುದಿಲ್ಲ
- ಈಶ್ವರನ ಆರಾಧನೆ ಮಾಡಿ
ಮಿಥುನ
- ವೃತ್ತಿ ಅಥವಾ ನೌಕರಿಯಲ್ಲಿ ಹೊಸ ವಿಚಾರ ಬರಬಹುದು
- ನೀವು ಮಾಡುವ ಕೆಲಸದಲ್ಲಿ, ನಿಮ್ಮ ನಡವಳಿಕೆ, ನಿಮ್ಮ ವರ್ತನೆಯಿಂದ ಮೇಲಾಧಿಕಾರಿಗಳಿಗೆ ಸಂತೋಷ ಆಗಲಿದೆ
- ಇಂದು ಯಶಸ್ಸಿನ ದಿನವಾಗಿರುತ್ತದೆ
- ಕಾನೂನು ತೊಡಕುಗಳು ದೂರವಾಗುವ ದಿನ
- ಹಲವು ವಿಚಾರಗಳು ಮಾತ್ರ ನಿಮ್ಮ ಪರವಾಗಿಯೇ ಕೆಲಸ ಮಾಡುತ್ತದೆ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ
ಕಟಕ
- ವ್ಯಾಪಾರಕ್ಕೆ ಅನುಕೂಲವಾಗುವ ದಿನ
- ನಿಮ್ಮ ಆತ್ಮಸಾಕ್ಷಿಯ ಬಲ ಹೆಚ್ಚಾಗುವಂತಹದ್ದು
- ಸ್ನೇಹಿತರಿಂದ ನಿಮಗೆ ಉತ್ತಮವಾದ ಸಹಾಯ ಆಗಲಿದೆ
- ನಿಮ್ಮ ವಿರೋಧಿಗಳು, ಶತ್ರುಗಳು ನಿರ್ಬಲರಾಗಬಹುದು
- ಹೊಸ ಖರೀದಿಯ ಆಲೋಚನೆ ಮಾಡುತ್ತೀರಿ
- ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಕಠಿಣ ನಿರ್ಧಾರ ಬೇಡ
- ಉದ್ಯೋಗವನ್ನು ಬದಲಾಯಿಸುವ ಆಲೋಚನೆ ಬರುವಂತಹದ್ದು
- ಪ್ರೇಮಿಗಳಿಗೆ ಬಹಳ ಶುಭದಿನ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ಕರ್ತವ್ಯದ ಬಗ್ಗೆ ಮಾತ್ರ ಎಚ್ಚರವಿರಲಿ
- ಇಂದು ಸಮಯೋಚಿತವಾಗಿ ವರ್ತಿಸಿ
- ಈ ದಿನ ವ್ಯಾಪಾರದಲ್ಲಿ ಯಶಸ್ಸಿದೆ
- ವಿದೇಶಿ ವ್ಯವಹಾರದಲ್ಲಿ ಲಾಭವಿದೆ
- 12 ಬಾರಿ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡಿ
ಕನ್ಯಾ
- ಸಾಲದ ವ್ಯವಹಾರಗಳು ಬೇಡ
- ಬೇರೆಯವರ ವಿಚಾರ ನಿಮಗೆ ಬೇಡವೇ ಬೇಡ
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರವಹಿಸಿ
- ಚಿಂತೆಯಿಂದ ನಿದ್ರೆ, ಆರೋಗ್ಯ ಹದಗೆಡುತ್ತದೆ
- ಮಾನಸಿಕ ಅಸ್ವಸ್ಥತೆ ನಿಮ್ಮನ್ನು ಕಾಡುವಂತಹದ್ದು
- ಮನೆಯ ಸಮಸ್ಯೆಯಿಂದ ಮಾನಸಿಕವಾಗಿ ಬಳಲುತ್ತೀರಿ
- ಅನ್ನಪೂಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮಂಗಳ ಕಾರ್ಯಗಳ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಬಹುದು
- ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
- ರಾಜಕೀಯ ವಿಚಾರಕ್ಕೆ ಉತ್ತಮವಾದ ದಿನ
- ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ
- ಅತಿಥಿಗಳ ಆಗಮನ ಆಗಲಿದೆ ಜೊತೆಗೆ ನಿಮ್ಮ ಮನಸ್ಸಿನಲ್ಲಿರುವುದರ ಬಗ್ಗೆ ಚರ್ಚೆ ಮಾಡುತ್ತೀರಿ
- ಹಣದ ಖರ್ಚು ಆಗುವುದರಿಂದ ಬೇಸರ ಆಗಲಿದೆ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಆರೋಗ್ಯದಲ್ಲಿ ಸುಧಾರಣೆ ಹೊಂದುತ್ತೀರಿ
- ವೃತ್ತಿ ಅಥವಾ ನೌಕರಿಯಲ್ಲಿ ರಾಜಕೀಯ ಮನಸ್ಸಿಗೆ ಬೇಸರ ಆಗಲಿದೆ
- ಮಾತು ಮಾತ್ರ ಹಿಡಿತದಲ್ಲಿರಬೇಕು
- ಸಂಚಾರಿ ನಿಯಮಗಳ ಬಗ್ಗೆ ನಿರ್ಲಕ್ಷ್ಯಬೇಡ ದಂಡ ಕಟ್ಟುವ ಸಾಧ್ಯತೆ ಇದೆ
- ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆಯಿರಲಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ
- ಅಧಿಕಾರಿಗಳ ಜೊತೆ ಅವರಿಗೆ ವಿರುದ್ಧವಾದ ಯಾವುದೇ ಚರ್ಚೆ ಮಾಡಬೇಡಿ
- ನಿಮ್ಮ ಆಸಕ್ತಿಗೆ ಆದ್ಯತೆ ನೀಡಿ
- ಪ್ರೇಮ ವಿಚಾರವು ಕೂಡ ಗೊಂದಲವಾಗಿ ತೊಂದರೆಯನ್ನುಂಟು ಮಾಡಲಿದೆ
- ಮಾನಸಿಕವಾಗಿ ನೋವು ಅನುಭವಿಸುತ್ತೀರ
- ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ
ಮಕರ
- ನೀವಂದುಕೊಂಡ ಕೆಲಸ ಯಾವುದು ಇಂದು ಆಗುವುದಿಲ್ಲ
- ಮಾನಸಿಕ ಬೇಸರ ನಿಮ್ಮನ್ನು ತುಂಬಾ ಕಾಡುವಂತಹದ್ದು
- ವಿದ್ಯುತ್ ಉಪಕರಣಗಳಿಂದ ದೂರವಿರುವುದು ಒಳ್ಳೆಯದು
- ನಿಮ್ಮ ತಪ್ಪು ತಿಳುವಳಿಕೆಯನ್ನು ದೂರ ಮಾಡಿ
- ಆರ್ಥಿಕವಾಗಿ ಸ್ವಲ್ಪ ಸಮಸ್ಯೆ ಕಾಡಬಹುದು
- ನವಗ್ರಹರ ಆರಾಧನೆ ಮಾಡಿ
ಕುಂಭ
- ನಿಮ್ಮ ಕಾರ್ಯಶೈಲಿಯನ್ನು ಬದಲಾಯಿಸಲು ಪ್ರಯತ್ನಿಸಿ
- ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ವಿಶೇಷವಾದ ಲಾಭವಿದೆ
- ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಹೊಸ ಆದಾಯದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ
- ವ್ಯಾಪಾರ, ವ್ಯವಹಾರದಲ್ಲಿ ದೊಡ್ಡ ಬದಲಾವಣೆಯ ಸೂಚನೆ ಇದೆ
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯಿರಲಿ
- ಕುಲದೇವತಾ ಆರಾಧನೆ ಮಾಡಿ
ಮೀನ
- ದಾಂಪತ್ಯದಲ್ಲಿ ಕಿರಿಕಿರಿ ಬೇಡ
- ಆಸ್ತಿ ವಿವಾದಗಳಿಂದ ಸ್ವಲ್ಪ ದೂರವಿರಿ ಶುಭವಿದೆ
- ಹಿರಿಯರ ಮಾರ್ಗಸೂಚಿ ಅನುಕೂಲವಾಗಲಿದೆ
- ಸಾಮಾಜಿಕ ಕಾರ್ಯಕ್ರಮದಲ್ಲಿ ಆಸಕ್ತಿ ಕಡಿಮೆಯಾಗಲಿದೆ
- ಆರೋಗ್ಯದ ವಿಚಾರದಲ್ಲಿ ಏರುಪೇರು ಉಂಟಾಗಬಹುದು
- ಹೊಸ ವ್ಯವಹಾರದಲ್ಲಿ ಹಣದ ಸಮಸ್ಯೆ ಉಂಟಾಗಲಿದೆ
- ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ