ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು
ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ..!
ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ಮಾದರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ-ಅಷ್ಟಮಿ ತಿಥಿ, ಪೂರ್ವಾಷಾಡ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸುವಿರಿ ಆದರೆ ಸಾಧ್ಯವಿಲ್ಲ
- ನಿಮಗೆ ಬೇಕಾದಷ್ಟು ವಿರಾಮದ ಸಮಯ ಇದ್ದರೂ ವ್ಯರ್ಥ
- ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬಹುದು ಆದರೆ ಮಾಡುವುದಿಲ್ಲ
- ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದು ಹಾಕಬಹುದು
- ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿರಲಿದೆ ಉದ್ದೇಶ ಪೂರ್ವಕವಾಗಿ ಮಾಡುತ್ತೀರಿ
- ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸದಿರುವುದು ಒಳ್ಳೆಯದು
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಸರ್ಕಾರಿ ಕೆಲಸಗಳಿದ್ದಲ್ಲಿ ಪೂರ್ಣವಾಗುತ್ತವೆ
- ಸಾಮಾಜಿಕ ವಲಯವು ಹೆಚ್ಚಾಗುತ್ತದೆ
- ಸ್ನೇಹಿತರು ಬಂಧುಗಳಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
- ಶತ್ರುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ
- ನಿಮ್ಮ ಉದಾರ ವರ್ತನೆ ನಿಮಗೆ ಅನುಕೂಲಕರವಾಗಿರಬಹುದು
- ಶ್ರೀರಾಮನನ್ನು ಅರ್ಚನೆ ಮಾಡಿ
ಮಿಥುನ
- ಬೇರೆಯವರ ತಪ್ಪುಗಳನ್ನ ಹೇಳುವ ಬದಲು ಸೂಕ್ತ ಸಲಹೆ ಕೊಡಬಹುದು
- ನಿಮ್ಮ ಹತ್ತಿರದವರ ಬಗ್ಗೆ ಕಾಳಜಿವಹಿಸಿ
- ಉದ್ಯೋಗ ಬದಲಾವಣೆಗೆ ಅವಕಾಶವಿದೆ
- ಸ್ಥಾನಪಲ್ಲಟಕ್ಕೂ ಅವಕಾಶವಿದೆ
- ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
- ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬರಬಹುದು ಆದರೆ ನಿಭಾಯಿಸುತ್ತೀರಿ
- ಲಲಿತಾ ಪರಮೇಶ್ವರಿಯನ್ನು ಅರ್ಚನೆ ಮಾಡಿ
ಕಟಕ
- ವಿದ್ಯಾರ್ಥಿಗಳು, ನೌಕರರು ತುಂಬಾ ಪರಿಶ್ರಮ ಪಡಬೇಕಾದ ದಿನ
- ನಿರೀಕ್ಷಿಸಿದಷ್ಟು ಫಲ ಕಾಣಲು ಕಷ್ಟವಿದೆ
- ನಕಾರಾತ್ಮಕ ಆಲೋಚನೆಗಳು ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ
- ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು
- ಮನೆಗೆ ಸ್ನೇಹಿತರು, ಬಂಧುಗಳು ಬರಬಹುದು
- ಇಂದು ಬಾಂಧವ್ಯ ತುಂಬಾ ದುರ್ಬಲವಾಗುತ್ತದೆ
- ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಬೇರೆಯವರನ್ನ ಅರ್ಥ ಮಾಡಿಕೊಳ್ಳಬೇಕಾದ ಪ್ರಯತ್ನ ನಿಮ್ಮಿಂದ ನಡೆಯಬೇಕು
- ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು
- ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
- ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ಮಾದರಿ
- ಅಹಂಭಾವ ಸಲ್ಪ ಕಡಿಮೆ ಇದ್ದರೆ ತುಂಬಾ ಒಳ್ಳೆದಾಗುತ್ತದೆ
- ಕುಟುಂಬದವರು ನಿಮ್ಮನ್ನು ಇಷ್ಟಪಡುತ್ತಾರೆ ಆದರೆ ನೀವು ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ
- ಆಂಜನೇಯ ಸ್ವಾಮಿಯನ್ನು ಪೂಜಿಸಿ, ಹನುಮಾನ್ ಚಾಲೀಸಾ ಶ್ರವಣ ಮಾಡಿ
ಕನ್ಯಾ
- ನಿಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನ
- ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡ ಬರಬಹುದು
- ಹೃದ್ರೋಗಿಗಳಿಗೆ ಸಮಸ್ಯೆಯ ದಿನ
- ತುಂಬಾ ವಿಶ್ರಾಂತಿ ಬೇಕೆನಿಸಬಹುದು, ಆದರೆ ನೀವು ಕಾರ್ಯತತ್ಪರರಾಗಿರುತ್ತೀರಿ
- ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಧೈರ್ಯ ಇರುವುದಿಲ್ಲ
- ಸಂಬಂಧಿಕರ ಮಾತು ಸಮಾಧಾನವಾಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ತುಲಾ
- ವೃತ್ತಿಯಲ್ಲಿ ಲಾಭವಿದೆ, ಮನಸ್ಸಿಗೆ ಕಿರಿಕಿರಿ ಒಂದು ರೀತಿಯ ಶೀತಲ ಸಮರ
- ವೈಯಕ್ತಿಕ ಸಂಬಂಧಗಳಲ್ಲಿ ಸಂತೋಷ ಇರುತ್ತದೆ
- ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ, ಗೌರವೂ ಕೂಡ ಹೆಚ್ಚಾಗುತ್ತದೆ
- ಹಣಕಾಸಿನ ವಿಚಾರ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
- ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
- ಲೇಖಕರಿಗೆ ಸ್ವಲ್ಪ ಸಮಸ್ಯೆ ಕಾಣಬಹುದು
- ಮನ್ಯುಸೂಕ್ತ ಮಂತ್ರ ಪಠಿಸಿ ಅಥವಾ ಶ್ರವಣ ಮಾಡಿ
ವೃಶ್ಚಿಕ
- ಮಾನಸಿಕ ಒತ್ತಡವು ನಿಮಗೆ ತೊಂದರೆ ಉಂಟು ಮಾಡುತ್ತದೆ
- ತಾಳ್ಮೆ ಇರಲಿ ಆತುರಾತುರವಾದ ನಿರ್ಧಾರ ಬೇಡ
- ಇಂದು ಬದಲಾಗುತ್ತಿರುವ ಹವಾಮಾನದಿಂದ ಶೀತ, ಜ್ವರ ಕಾಣಬಹುದು ಜಾಗ್ರತೆವಹಿಸಿ
- ಯಾವುದೇ ಹೊಸ ಕೆಲಸ ಆರಂಭಿಸಬೇಡಿ
- ನಿಮ್ಮ ಕಾಲಿಗೆ ತೊಂದರೆಯಾಗುವ ಸೂಚನೆಗಳಿಗೆ ಎಚ್ಚರವಹಿಸಿ
- ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ
- ಇಂದ್ರಾಕ್ಷಿಯನ್ನು ಸ್ತುತಿಸಿ
ಧನಸ್ಸು
- ನಿಮ್ಮ ಸಾಧನೆ ಹಲವರಿಗೆ ಮಾದರಿ ಆದರೆ ನೀವೇ ಅದಕ್ಕೆ ಬೆಲೆ ಕೊಡುವುದಿಲ್ಲ
- ಹಿರಿಯರು ನಿಮ್ಮ ಬಗ್ಗೆ ಪ್ರಭಾವಿತರಾಗುತ್ತಾರೆ
- ನಿಮ್ಮ ಸಾಮರ್ಥ್ಯವು ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ ಗಮನಿಸಿ
- ದಿನ ಚೆನ್ನಾಗಿದೆ, ಹೊಸದನ್ನು ಆರಂಭಿಸಿ ಸಕಾಲಕ್ಕೆ ಚಿಂತಿಸಿ
- ಉತ್ತಮ ಫಲ ನಿರೀಕ್ಷಿಸಬಹುದಾದ ದಿನ
- ದುರ್ಗಾದೇವಿ ಆರಾಧನೆ ಮಾಡಿ
ಮಕರ
- ಪಿತ್ರಾರ್ಜಿತ ಆಸ್ತಿಗೆ ಸ್ವಲ್ಪ ಆಸ್ತಿ ಸೇರ್ಪಡೆಯಾಗಬಹುದು
- ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ
- ಪ್ರಾಮಾಣಿಕವಾಗಿ ದುಡಿದ ಕಲಾಕಾರರಿಗೆ ಇಂದು ಅದೃಷ್ಟ ಒಲಿಯಲಿದೆ
- ಉದ್ಯೋಗಕಾಂಕ್ಷಿಗಳಿಗೆ ಫಲವಿದೆ
- ವ್ಯವಹಾರ ಅಥವಾ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ಕಿರುಕುಳ ಬೇಸರ
- ಇಂದು ಜಗಳ ಆಗುವ ಸಾಧ್ಯತೆಗಳಿರುತ್ತವೆ ಎಚ್ಚರ
- ಕುಬೇರ ಲಕ್ಷ್ಮಿಯನ್ನು ಆರಾಧನೆ ಮಾಡಿ
ಕುಂಭ
- ಜೀವನದಲ್ಲಿ ಜಿಗುಪ್ಸೆ ಕಾಡುವಂತಹ ದಿನ
- ನಿಮ್ಮ ತಪ್ಪಿನ ಅರಿವಾಗಬೇಕು, ಅದರ ಬಗ್ಗೆ ಚಿಂತಿಸಿ ಸರಿಯಾಗುತ್ತದೆ
- ನಾವು ಸರಿಯಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಛಲ ಇರಬೇಕಾಗುತ್ತದೆ
- ಆರೋಗ್ಯ, ವ್ಯವಹಾರ, ಒಂಟಿತನ ಹೀಗೆ ಬೇಸರಕ್ಕೆ ಕಾರಣವಾದ ದಿನ
- ನಿಮಗೆ ತುಂಬಾ ಬೇಸರಕ್ಕೆ ಕಾರಣವಾಗುವ ದಿನ
- ಲೌಕಿಕ ಜೀವನಕ್ಕೆ ಕೊಟ್ಟಂತಹ ಬೆಲೆಯನ್ನು ಮನುಷ್ಯತ್ವಕ್ಕೆ ಕೊಟ್ಟರೆ ಇಂಥ ಪರಿಸ್ಥಿತಿಗಳು ದೂರವಾಗಬಹುದು
- ಸಪ್ತಋಷಿಗಳನ್ನು ಧ್ಯಾನ ಮಾಡಿ
ಮೀನ
- ತಂದೆಯವರ ಆರೋಗ್ಯದ ಬಗ್ಗೆ ಗಮನಿಸಿ
- ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತು ಹೋಗಬಹುದು
- ಭಾವನಾತ್ಮಕವಾಗಿ ವರ್ತಿಸುವುದರಿಂದ ಕೆಲಸಗಳಲ್ಲಿ ವ್ಯತ್ಯಯ ಕಾಣಬಹುದು
- ಬೇರೆಯವರಿಂದ ಹಲವಾರು ಸಮಸ್ಯೆಗಳು ಸಲಹೆಗಳು ಬರುತ್ತವೆ ಅದು ಸೂಕ್ತವಾಗಿರುವುದಿಲ್ಲ
- ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದು ಬೇಕಾಗಿರುವುದಿಲ್ಲ
- ಮನೆಯವರೊಂದಿಗೆ ವಿಶ್ವಾಸಕ್ಕೆ ಧಕ್ಕೆ ಬರಬಾರದು ನೋಡಿಕೊಳ್ಳಿ
- ಮೃತ್ಯುಂಜಯನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ