ಅತಿಯಾದ ಒತ್ತಡ, ಪೋಷಕರೇ ಮಕ್ಕಳ ಬಗ್ಗೆ ಎಚ್ಚರ, ವಾಗ್ವಾದ ಬೇಡವೇ ಬೇಡ; ಇಲ್ಲಿದೆ ಇಂದಿನ ಭವಿಷ್ಯ

author-image
Ganesh Nachikethu
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಈ ದಿನ ಚೆನ್ನಾಗಿದೆ ಎಂದುಕೊಳ್ಳುವ ಹೊತ್ತಿಗೆ ಸಮಸ್ಯೆ!
  • ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಶಕ್ತಿ ಮೀರಿ ಕೆಲಸ
  • ಮಾತಿನ ಸರಮಾಲೆಯಿಂದ ನಂಬಿಕೆ ಹಾಳಾಗ್ಬಹುದು ಎಚ್ಚರ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ವರ್ಷ ಋತು, ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ತಿಥಿ ಚಿತ್ತ ನಕ್ಷತ್ರ, ಶನಿವಾರ ಬೆಳಗ್ಗೆ 9 ಗಂಟೆಯಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷವಾಗಬಹುದು
  • ವ್ಯಾಪಾರ ವ್ಯವಹಾರದಲ್ಲಿ ಲಾಭ ಉಂಟಾಗಬಹುದು
  • ಕೆಲಸ ಕಾರ್ಯಗಳಲ್ಲಿ ಉತ್ಸಾಹ ಬಿಡುವಿಲ್ಲದ ಕಾರ್ಯ ಗೌರವ
  • ಹಿರಿಯ ಸಹೋದರರು ಬಂಧುಗಳಲ್ಲಿ ವೈಮನಸ್ಯದ ಮಾತು
  • ಜನರಿಗೆ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ
  • ನಿಮ್ಮ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಯೋಗ ಬರುತ್ತದೆ
  • ಕುಲದೇವರನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಪ್ರಯಾಣದಿಂದ ಲಾಭ ಪಡೆಯಬಹುದು ದೂರ ಪ್ರಯಾಣ ಬೇಡ
  • ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದ ಮನೋಭಾವವಿರುತ್ತದೆ
  • ನಿಮ್ಮ ತತ್ವ ಸಿದ್ಧಾಂತಗಳಿಂದ ಜನರು ಪ್ರಭಾವಿತರಾಗುತ್ತಾರೆ
  • ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು
  • ಆಸ್ತಿ ವಿವಾದಗಳು ಇದ್ದರೂ ಈ ದಿನ ಬಗೆಹರಿಯುವ ಸಾಧ್ಯತೆಗಳಿವೆ
  • ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಮಾತೆಯರಿಗೆ ಹೆಣ್ಣು ಮಕ್ಕಳಿಗೆ ಅಗ್ನಿಯ ತೊಂದರೆ ಆಗಬಹುದು
  • ಜಾತವೇದಾಗ್ನಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ವ್ಯಾವಹಾರಿಕವಾಗಿ ವ್ಯಾಪಾರದಲ್ಲಿ ಹೆಚ್ಚು ಶ್ರಮ ಪಡಬೇಕಾದ ದಿನ
  • ಖರ್ಚು ಹೆಚ್ಚಾಗಿ ಕೆಲವು ದುಷ್ಟ ಪರಿಣಾಮ ನಿಮಗಾಗಬಹುದು
  • ಸ್ವಲ್ಪಮಟ್ಟಿಗೆ ದುರಾಸೆಯನ್ನು ದೂರ ಮಾಡುವುದು ಉತ್ತಮ
  • ಸಂಬಂಧಗಳು ಚೆನ್ನಾಗಿದ್ದರೂ ಬೆಂಬಲ ಸಿಕ್ಕುವುದು ಕಷ್ಟ ಸಾಧ್ಯ
  • ಪ್ರೇಮಿಗಳಿಗೆ ಉತ್ತಮ ದಿನ
  • ನಿಮ್ಮ ಸಹೋದರಿಗೆ ತೊಂದರೆಯ ಸೂಚನೆ ಇದೆ
  • ಮೂಲ ದುರ್ಗಾದೇವಿಯನ್ನು ಅರ್ಚಿಸಿ

ಕಟಕ

publive-image

  • ನಿಮಗಿರುವ ಗೌರವ ಸ್ಥಾನಗಳ ದುರುಪಯೋಗವಾಗಬಹುದು
  • ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆಯಾಗಬಹುದು
  • ಬೆಲೆ ಬಾಳುವ ಪದಾರ್ಥಗಳು ನಷ್ಟವಾಗಬಹುದು
  • ಮಾತೆಯರೊಂದಿಗೆ ಸಭ್ಯವಾಗಿ ವರ್ತಿಸಬೇಕಾಗಬಹುದು, ಅವಮಾನವಿದೆ
  • ದೀರ್ಘಕಾಲದ ಅನಾರೋಗ್ಯದ ಸೂಚನೆಗಳಿವೆ
  • ಭಗವತೀ ದುರ್ಗೆಯನ್ನು ನೀಲಿ ಹೂಗಳಿಂದ ಪ್ರಾರ್ಥನೆ ಮಾಡಿ

ಸಿಂಹ

publive-image

  • ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಶುಭ ವಾರ್ತೆ ಕೇಳಬಹುದು
  • ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಸಂತೋಷವಿರುತ್ತದೆ
  • ಸ್ನೇಹಿತರ ಸಂಬಂಧಗಳು ಹೆಚ್ಚಾಗಬಹುದು
  • ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ
  • ಅತಿಯಾದ ಉತ್ಸಾಹ ಕೆಲವು ಕೆಲಸಗಳನ್ನು ಹಾಳು ಮಾಡಬಹುದು
  • ಸಾಯಂಕಾಲಕ್ಕೆ ಹೊಸ ಸಂಬಂಧದಲ್ಲಿ ಕಿರಿಕಿರಿ ಬೇಸರ
  • ಶಾಂತಿಪ್ರದ ದುರ್ಗಾದೇವಿಯನ್ನು ಆರಾಧಿಸಿ ಕಪ್ಪು ಬಟ್ಟೆ ಧರಿಸಬಾರದು

ಕನ್ಯಾ

publive-image

  • ಹೊಸ ಹೊಸ ಲಾಭಕ್ಕಾಗಿ ಹಣ ಕೂಡಿಡಲು ನಿಮ್ಮ ಬುದ್ಧಿ ಖರ್ಚಾಗುತ್ತದೆ
  • ನಿಮ್ಮ ವಿರೋಧಿಗಳು ನಿಮ್ಮನ್ನು ಹಣಿಯಲು ಪ್ರಯತ್ನಿಸುತ್ತಿರುತ್ತಾರೆ
  • ಗಮನವಿಲ್ಲದ ಕೆಲಸಗಳಿಂದ ತಪ್ಪಿಗೆ ಸಿಲುಕುವ ಸಾಧ್ಯತೆಗಳಿವೆ ಗಮನಿಸಿ
  • ಆಕಾಶ ಮಾರ್ಗದ ಪ್ರಯಾಣಕ್ಕೆ ಅಡ್ಡಿಯಾಗಬಹುದು
  • ಸೋದರ ಮಾವನಿಗೆ ತೊಂದರೆ ಕಾಣಬಹುದು ಜಾಗೃತೆವಹಿಸಿ
  • ವೈರೋಚನಿ ಶಕ್ತಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ನೌಕರಿ ಚಿಂತೆ ಕಾಡಬಹುದು
  • ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು
  • ನಿಮ್ಮ ಕೆಟ್ಟ ಅಸಭ್ಯಗಳಿದ್ದರೆ ನಿಧಾನವಾಗಿ ಬಿಡುವುದು ಒಳ್ಳೆಯದು
  • ರಹಸ್ಯ ಶತ್ರುಗಳ ಬಗ್ಗೆ ಎಚ್ಚರ ವಹಿಸಿ ಕಂಟಕ ಸೂಚನೆಯಿದೆ
  • ವಾಹನ ಚಾಲನೆ ಬೇಡ, ಪ್ರಯಾಣ ಬೇಡ
  • ವಾಯುವ್ಯಾಸ್ತ್ರ ಮಂತ್ರ ಶ್ರವಣ ಮಾಡಿ

ವೃಶ್ಚಿಕ

publive-image

  • ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗಲು ಅವಕಾಶ ಮಾಡಿಕೊಡಬಾರದು
  • ಆಡಳಿತ ವರ್ಗ ಪ್ರಬಲ ವ್ಯಕ್ತಿಗಳ ಮಾತು ಮನಸ್ಸಿಗೆ ಬೇಸರ ತರಬಹುದು
  • ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ದೊರೆಯುತ್ತದೆ
  • ಆಹಾರದ ಬಗ್ಗೆ ಗಮನವಿರಲಿ ಶೀತ ಸಂಬಂಧಿ ತೊಂದರೆ ಕಾಣಬಹುದು
  • ಕೋಪ ಅನರ್ಥಕ್ಕೆ ಕಾರಣವಾಗಬಹುದು ಸ್ನೇಹಿತರೊಂದಿಗೆ ಜಗಳ ಸಂಭವ
  • ನಾರಾಯಣಿ ದುರ್ಗಾ ಶಕ್ತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

publive-image

  • ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
  • ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಯ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಸ್ತು ರೂಪದಲ್ಲಿ ಪ್ರಾಪ್ತಿಯಾಗಬಹುದು
  • ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ
  • ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
  • ಅಲುಪ್ತಾ ಶಕ್ತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಸ್ನೇಹಿತರ ಮತ್ತು ಸಂಬಂಧಿಕರ ಮಧ್ಯೆ ಮಾತಿನ ಘರ್ಷಣೆ ನಡೆಯಬಹುದು
  • ರಾಜಕಾರಣಿಗಳಿಗೆ ಹಿನ್ನಡೆಯಾಗುವ ಸೂಚನೆಗಳಿವೆ
  • ಮಾನಸಿಕ ಉದ್ವೇಗವು ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡಬಹುದು
  • ಮಹಿಳೆಯರಿಗೆ ಸಿಹಿ ಸುದ್ದಿ ತಮ್ಮ ಕಾರ್ಯ ಸಾಧನೆ ಮಾಡುತ್ತೀರಿ
  • ಯಾವುದೋ ಮರಣವಾರ್ತೆ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು
  • ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ

ಕುಂಭ

publive-image

  • ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು
  • ಕುಂಭ ರಾಶಿಯ ಶಿಕ್ಷಕರು ಅಪವಾದವನ್ನು ಎದುರಿಸಬೇಕಾದ ದಿನ
  • ಮನಸ್ಸಿಗೆ ಕಿರಿಕಿರಿಯಾಗಬಹುದು ತಾಳ್ಮೆ ಇರಲಿ
  • ರಸ್ತೆ ಬದಿಯ ವ್ಯಾಪಾರಿಗಳು ಲಾಭ ಪಡೆಯಲು ಅವಕಾಶವಿದೆ
  • ಮನೆಯ ಹೊರಗೆ ಒಳಗೆ ನೆಮ್ಮದಿ ಇಲ್ಲದಿರುವ ದಿನ
  • ಮಹಾ ಶೂಲನಿಯನ್ನು ಪ್ರಾರ್ಥಿಸಿ

ಮೀನ

publive-image

  • ಈ ದಿನ ಚೆನ್ನಾಗಿದೆ ಎಂದುಕೊಳ್ಳುವ ಹೊತ್ತಿಗೆ ಸಮಸ್ಯೆ ಉದ್ಭವಿಸಬಹುದು
  • ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಸಮಯ ಶಕ್ತಿ ಮೀರಿ ಕೆಲಸ
  • ಕುಟುಂಬದಲ್ಲಿ ವಾಗ್ವಾದ ಬೇಡ
  • ಮಾತಿನ ಸರಮಾಲೆಯಿಂದ ನಂಬಿಕೆ ಹಾಳಾಗಬಹುದು ಎಚ್ಚರವಿರಲಿ
  • ಮಗುವಿನ ಭವಿಷ್ಯ ಗಮನಿಸಿ ಮಕ್ಕಳನ್ನು ಬಯಸುವವರಿಗೆ
  • ಶುಭದಿನ ಪಂಚಮುಖಿ ಆಂಜನೇಯನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment