/newsfirstlive-kannada/media/post_attachments/wp-content/uploads/2025/02/MAHAKUMBA-STAMP-2.jpg)
ಮಹಾಕುಂಭಮೇಳಕ್ಕೆ ಇದೇ ಶುಭ ಶಿವರಾತ್ರಿ ದಿನದಂದ ತೆರೆ ಬೀಳಲಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳಕ್ಕೆ ದಾಖಲೆ ಲೆಕ್ಕದಲ್ಲಿ ಭಕ್ತರು ಸೇರಿ ಚರಿತ್ರೆಯನ್ನೇ ಬರೆದಿದ್ದಾರೆ. ಜನವರಿ 13ರಂದು ಶುರುವಾದ ಮಹಾಕುಂಭಮೇಳಕ್ಕೆ ಇಲ್ಲಿಯವರೆಗೂ 62 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಕುಂಭಮೇಳದ ಕ್ಲೈಮ್ಯಾಕ್ಸ್ಗೆ ಇನ್ನೆರಡು ದಿನ ಬಾಕಿ ಇದ್ದು ಸ್ಥಳೀಯ ಆಡಳಿತ ಬಹುದೊಡ್ಡ ಆತಂಕದಲ್ಲಿ ಮುಳುಗಿದೆ.
ಏನಿದು ಮಹಾಕುಂಭಮೇಳದ ಕ್ಲೈಮ್ಯಾಕ್ಸ್ ಟೆನ್ಶನ್?
ಮಹಾಕುಂಭಮೇಳಕ್ಕೆ ಜನ ತಂಡೋಪತಂಡವಾಗಿ ಬರ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೇಳಬೇಕು.. ಮಹಾಕಾಳನ ದರ್ಶನ ಮಾಡಬೇಕು.. ದೇವ ಪ್ರಯಾಗದಲ್ಲಿ ಒಮ್ಮೆ ಓಡಾಡಬೇಕು.. ಬಹುಪಾಲು ಹಿಂದೂ ಧರ್ಮೀಯರ ಹೆಬ್ಬಯಕೆ ಆಗಿರುತ್ತದೆ. ಇದಕ್ಕೆ ಪೂರಕ ಎನ್ನುವಂತೆ 144 ವರ್ಷಕ್ಕೊಮ್ಮೆ ಬರೋ ಮಹಾಕುಂಭಮೇಳಕ್ಕೆ ಹೋಗಿ ಬರೋಣ. ಮುಂದಿನ ಮಹಾಕುಂಭಮೇಳಕ್ಕಂತೂ ನಾವಿರೋದಿಲ್ಲ ಅನ್ನೋ ಕಾರಣಕ್ಕೆ ದೇವ ಪ್ರಯಾಗ ಅಕ್ಷರಶಃ ಜನರಿಂದ ತುಂಬಿ ತುಳುಕಲಿದೆ. ಅದರಲ್ಲೋ ಕುಂಭಮೇಳದ ಕ್ಲೈಮ್ಯಾಕ್ಸ್ಗೆ ನಿರೀಕ್ಷೆಗೂ ಮೂರಿ ಜನ ಬರ್ತಾರೆ ಅನ್ನೋ ಅಂದಾಜು ಮೂಡಿದೆ. ಇದೇ ಕಾರಣಕ್ಕೇ ಸ್ಥಳೀಯರು ಕೈ ಮುಗಿದು ಬೇಡುತ್ತಾ ಒಂದು ಸಂದೇಶ ನೀಡುತ್ತಿದ್ದಾರೆ. ಸಂಬಾಳಿಸೋದು ಸಾಕಾಗುತ್ತಿದೆ ಆದಷ್ಟು ಅಲ್ಲಿಂದಲೇ ಕೈ ಮುಗಿದುಬಿಡಿ ಎನ್ನುತ್ತಿದ್ದಾರೆ. ಸ್ಥಳೀಯ ಆಡಳಿತಕ್ಕೂ ಜನರನ್ನು ನಿಯಂತ್ರಿಸೋದು ಕಷ್ಟವಾಗುತ್ತಿದೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್; ಟಾಪ್ 10 ಫೋಟೋಸ್ ಇಲ್ಲಿವೆ!
ಜನ ಸಂದಣಿ ತಗ್ಗಿಸೋದಕ್ಕಾಗಿಯೇ 32 ರೈಲು ಕ್ಯಾನ್ಸಲ್?
ಮಹಾಕುಂಭಮೇಳಕ್ಕೆ 40 ಕೋಟಿ ಜನ ಬರಬಹುದು ಅಂತ್ಲೇ ಭಾರತೀಯ ರೈಲ್ವೇ 32 ವಿಶೇಷ ರೈಲುಗಳನ್ನು ಓಡಿಸಿತ್ತು. ಇತ್ತೀಚೆಗೆ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ರೈಲ್ವೇ ಇಲಾಖೆಗೂ ಜನರನ್ನು ನಿಯಂತ್ರಿಸೋದಕ್ಕೆ ಸಾಧ್ಯವಾಗುತ್ತಿಲ್ಲ ಅನ್ನೋ ಸಂದೇಶ ನೀಡಿತ್ತು. ಇದೇ ಕಾರಣಕ್ಕೇ ಕುಂಭಮೇಳದ ಕ್ಲೈಮ್ಯಾಕ್ಸ್ಗೆ ಮಗದಷ್ಟು ಜನ ಬಂದು ಸೇರಬಹುದು ಅನ್ನೋ ಆತಂಕದಲ್ಲೇ ಇದೇ ಫೆಬ್ರವರಿ 25 ರಿಂದ 28ರ ವರೆಗೂ 32 ವಿಶೇಷ ರೈಲು ಸೇವೆಗಳನ್ನು ನಿಲ್ಲಿಸುತ್ತಿದೆ. ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ನಿಲ್ಲಿಸಿದೆ. ವಾರದ ಏಳು ದಿನಗಳೂ ನವದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಲಭ್ಯವಿದ್ದ ವ್ಯವಸ್ಥೆ ಇದೀಗ ಸ್ಥಗಿತಗೊಂಡಿದೆ. ರೈಲ್ವೇ ಇಲಾಖೆಯ ಪ್ಲಾನ್ ಪ್ರಕಾರ ಬರೀ 32 ರೈಲುಗಳ ವಿಶೇಷ ಸೇವೆ ಅಷ್ಟೇ ನಿಲ್ಲೋದಿಲ್ಲ. ಬದಲಾಗಿ ಎಲ್ಲಾ 174 ರೈಲುಗಳ ವ್ಯವಸ್ಥೆಗೂ ಬ್ರೇಕ್ ಹಾಕಲಿದೆ ಎನ್ನಲಾಗುತ್ತಿದೆ. 41 ದಿನಗಳ ಪುಣ್ಯಸ್ನಾನದಲ್ಲಿ 60ಕೋಟಿಗೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಈ ಸಂಖ್ಯೆ ಕ್ಲೈಮ್ಯಾಕ್ಸ್ನಲ್ಲಿ ಮತ್ತಷ್ಟು ಹೆಚ್ಚಾಗಬಹುದು ಅನ್ನೋ ಟೆನ್ಶನ್ ಇದೀಗ ಎದ್ದು ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ