/newsfirstlive-kannada/media/post_attachments/wp-content/uploads/2025/06/Ahmedabad-plane-crash-9.jpg)
ಅಹ್ಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 241 ಮಂದಿ ಜೀವ ಕಳೆದುಕೊಂಡಿದ್ದಾರೆ. ವಿಶ್ವಾಸ್ ಕುಮಾರ್ ರಮೇಶ್ ಎಂಬತ ಓರ್ವ ವ್ಯಕ್ತಿ ಮಾತ್ರ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ.
ಇನ್ನು, ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 10 ವಿಮಾನ ಸಿಬ್ಬಂದಿ. ಇಬ್ಬರು ಪೈಲಟ್ ಇದ್ದರು. ಪೈಲಟ್ನಲ್ಲಿ ಸಿಬ್ಬಂದಿಯಲ್ಲಿ ಓರ್ವ ಮಂಗಳೂರು ಮೂಲದ ಉದ್ಯೋಗಿ ಒಬ್ಬರಿದ್ದರು. ಅವರ ಹೆಸರು ಕ್ಲೈವ್ ಕುಂದರ್. ಇವರು ಕೂಡ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..
ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಪ್ರಸಕ್ತ ಮುಂಬೈ ನಿವಾಸಿಯಾಗಿರುವ ಕ್ಲೈವ್ ಕುಂದರ್ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಕ್ಲೈವ್ ಕುಂದರ್ 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಟ್ರೈನೀ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಜೊತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
Clive Kunder : The copilot with 1,100 hours of flying experience Air India
RIP#planecrashpic.twitter.com/OjS9XZqKLn— yourweirdcrush X (@Yourweirdcrush1) June 12, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ