ಫಲಿತಾಂಶಕ್ಕೂ ಮೊದಲೇ CM ಕುರ್ಚಿ ಮೇಲೆ ಟವೆಲ್‌; ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್‌ ಯಾರು?

author-image
admin
Updated On
ಟಿಕ್​​.. ಟಿಕ್​​.. ಟಿಕ್​.. ಬದಲಾಗ್ತಿದೆ ‘ಕಾಲ’.. ಪವಾರ್ ಫ್ಯಾಮಿಲಿಯಲ್ಲಿ ‘ಪವರ್​’ಗಾಗಿ ಗಡಿಯಾರ ಗಲಾಟೆ..!
Advertisment
  • ಬಹುಮತಕ್ಕೆ ಮುನ್ನವೇ ಸಿಎಂ ಕುರ್ಚಿಗೆ ಟವೆಲ್ ಹಾಕಿದ ಲೀಡರ್ಸ್‌
  • ನಮ್ಮವರೇ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಮೈತ್ರಿ ಪಕ್ಷಗಳ ನಾಯಕರು
  • ಹಾಲಿ ಸಿಎಂ ಏಕನಾಥ್ ಶಿಂಧೆಯೇ ಮತ್ತೆ ಸಿಎಂ ಆಗಬೇಕು ಎಂದು ಪಟ್ಟು

ಇದೊಂಥರಾ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಟೆನ್ಶನ್​ಗೆ ಒಳಗಾಗಿರುವ ಪರಿಸ್ಥಿತಿ. ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಮಹಾಯುತಿಗೆ ಗದ್ದುಗೆ ಅಂತ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಮಧ್ಯೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎನ್ನವಂತೆ ಮುಂದಿನ ಸಿಎಂ ಗಾದಿಗೆ ಫೈಟ್ ಶುರುವಾಗಿದೆ. ಒಂದ್ಕಡೆ ಮಹಾಯುತಿ ಮತ್ತೊಂದೆಡೆ ಮಹಾವಿಕಾಸ್ ಅಘಾಡಿ ಮೈತ್ರಿ ಪಕ್ಷಗಳ ನಡುವೆಯೂ ಗುದ್ದಾಟ ನಡೀತಿದೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಯಾರ್ ಗೆಲ್ತಾರೆ? ಯಾರು ಸೋಲ್ತಾರೆ? ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ ಲೆಕ್ಕಾಚಾರವೇನು? 

11 ವರ್ಷ ಕಾಯ್ದವರಿಗೆ ಇನ್ನೊಂದು ವರ್ಷ ಕಾಯೋದು ಕಷ್ಟನಾ. ಮಹಾರಾಷ್ಟ್ರದಲ್ಲಿ ಮತ ಹಬ್ಬ ಮುಗಿದಿದ್ದು ಮತದಾರ ಪ್ರಭುಗಳು ನೀಡಿರುವ ಮಹಾ ಭವಿಷ್ಯ ಇಂದು ಹೊರಬೀಳಬೇಕಿದೆ. ಎರಡೂ ಕಡೆಯ ನಾಯಕರು ಅಧಿಕಾರ ಹಿಡಿಯುವ ಕಾತರದಲ್ಲಿದ್ದಾರೆ. ಆದ್ರೆ ಬಹುಮತ ಬರುವ ಮುನ್ನವೇ ಸಿಎಂ ಕುರ್ಚಿಗೆ ಟವೆಲ್ ಹಾಕುವ ಕಾರ್ಯ ನಡೆದಿದೆ.

publive-image

ಯಾರ ಪಾಲಾಗುತ್ತೆ ‘ಮಹಾ’ ಗದ್ದುಗೆ? ರಿಸಲ್ಟ್​ಗೂ ಮುನ್ನ ಸಿಎಂ ಕುರ್ಚಿ ಫೈಟ್!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು ಕೌಂಟ್​ಡೌನ್ ಶುರುವಾಗಿದೆ. ಒಂದ್ಕಡೆ ಶಿಂಧೆ, ಅಜಿತ್ ಪವಾರ್ ಜೊತೆ ಮೈತ್ರಿಮಾಡಿಕೊಂಡಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವ ಉಮೇದಿನಲ್ಲಿದೆ. ಮತ್ತೊಂದೆಡೆ 10 ವರ್ಷಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷಗಳು ಗದ್ದುಗೆ ಹಿಡಿಯುವ ಲೆಕ್ಕಾಚಾರದಲ್ಲಿವೆ. ಆದ್ರೆ ಫಲಿತಾಂಶ ಹೊರಬೀಳುವ ಮುನ್ನವೇ ಎರಡೂ ಮೈತ್ರಿ ಪಡೆಯಲ್ಲಿ ಸಿಎಂ ಅಭ್ಯರ್ಥಿ ಕುರಿತು ರೇಖಾಗಣಿತ ಶುರುವಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚಿನ ಸಾಲ ಕೇಳಿದ್ದ CM ಸಿದ್ದರಾಮಯ್ಯ.. ಕೊಡಲು ಆಗಲ್ಲ ಎಂದ ನಿರ್ಮಲಾ ಸೀತಾರಾಮನ್ 

ಕೂಸು ಹುಟ್ಟುವ ಮುನ್ನವೇ ನಮ್ಮವರೇ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಮೈತ್ರಿ ಪಕ್ಷಗಳ ನಾಯಕರು ವಾಕ್ಸಮರಕ್ಕಿಳಿದಿದ್ದಾರೆ. ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹಾಗೂ ಶಿವಸೇನೆ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ನಡುವೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರ ಮಾತಿನ ಚಕಮಕಿಗೆ ಕಾರಣವಾಗಿದೆ.

publive-image

ನಾನಾ ಪಟೋಲೆ-ಸಂಜಯ್ ರಾವತ್ ಮಾತಿನ ಸಮರ!
ಸಮೀಕ್ಷೆ ಬೆನ್ನಲ್ಲೇ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾ ವಿಕಾಸ್ ಅಘಾಡಿಗೆ ಬಹುಮತ ಬರಲಿದ್ದು ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆ ಆಗಲಿದೆ, ಕಾಂಗ್ರೆಸ್ ನಾಯಕರೊಬ್ಬರು ಮುಂದಿನ ಸಿಎಂ ಆಗಲಿದ್ದಾರೆ ಎಂದಿದ್ದರು. ನಾನಾ ಪಟೋಲೆ ಮಾತಿಗೆ ಠಾಕ್ರೆ ಬಣದ ಸಂಜಯ್ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಮೈತ್ರಿಪಕ್ಷಗಳ ನಾಯಕರು ಕೂತು ನಿರ್ಧರಿಸುತ್ತೇವೆ, ನಾನಾ ಪಟೋಲೆಯೇ ಸಿಎಂ ಅಭ್ಯರ್ಥಿ ಆಗಿದ್ದರೆ ಕಾಂಗ್ರೆಸ್ ಹೈಕಮಾಂಡ್ ಘೋಷಿಸಲಿ ಎಂದಿದ್ದಾರೆ.

ಶರದ್ ಪವಾರ್, ಕಾಂಗ್ರೆಸ್, ಉದ್ಧವ್ ಠಾಕ್ರೆ ಸೇರಿ ಮಹಾ ಅಘಾಡಿ ಮೈತ್ರಿ ಮಾಡಿದ್ದೇವೆ. ನಮ್ಮ ಜೊತೆ ಸಣ್ಣಪುಟ್ಟ ಪಕ್ಷಗಳಿವೆ. ಸಮಾಜವಾದಿ ಪಾರ್ಟಿಯಿಂದ, ಕಮ್ಯುನಿಸ್ಟ್ ಪಾರ್ಟಿ, ಶೆಟ್​ಕರಿ ಕಾಮಗಾರ್ ಪಕ್ಷದ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿ ಬರ್ತಾರೆ. ಮಹಾ ವಿಕಾಸ್ ಅಘಾಡಿಗೆ ಬಹುಮತ ಬರಲಿದ್ದು ಒಮ್ಮೆ ನಾವೆಲ್ಲಾ ಕೂತು ನಿರ್ಣಯ ಮಾಡುತ್ತೇವೆ.
ಸಂಜಯ್ ರಾವತ್, ಶಿವಸೇನೆ ನಾಯಕ

ಮಹಾಯುತಿ ಮೈತ್ರಿಕೂಟದಲ್ಲೂ ಸೇಮ್ ಸಿಎಂ ಪಾಲಿಟಿಕ್ಸ್ ಶುರುವಾಗಿದೆ. ಹಾಲಿ ಸಿಎಂ ಏಕನಾಥ್ ಶಿಂಧೆಯೇ ಮತ್ತೆ ಸಿಎಂ ಆಗಬೇಕು ಅಂತ ಶಿಂಧೆ ಬಣದ ಶಿವಸೇನೆ ಹಕ್ಕು ಮಂಡಿಸಿದೆ. ಆದ್ರೆ ಬಿಜೆಪಿಯಿಂದ ದೇವೇಂದ್ರ ಫಡ್ನವೀಸ್ ಅವರೇ ಸಿಎಂ ಆಗಬೇಕು ಎಂದ ಬಿಜೆಪಿ ನಾಯಕ ಪ್ರವೀಣ್ ದರೇಕರ್ ಒತ್ತಾಯಿಸಿದ್ದಾರೆ. ಅಜಿತ್ ಪವಾರ್ ಎನ್‌ಸಿಪಿ ಪಕ್ಷವೇ ಕಿಂಗ್ ಮೇಕರ್ ಆಗಲಿದ್ದು ಅಜಿತ್ ಪವಾರ್ ಅವರೇ ಸಿಎಂ ಆಗಲಿ ಅಂತ ಎನ್​ಸಿಪಿಯ ಅಮೋಲ್ ಮಿತಾಕರಿ ವಾದಿಸಿದ್ದಾರೆ.

publive-image

ಒಳ್ಳೆಯ ಪರ್ಫಾರ್ಮೆನ್ಸ್.. ಒಳ್ಳೆಯ ರಿಸಲ್ಟ್ ಎಂದ ಖರ್ಗೆ
ಮಹಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದೇವೆ. ಒಳ್ಳೆಯ ರಿಸಲ್ಟ್ ಬರಲಿದೆ ಎಂದಿದ್ದಾರೆ. ಜಾರ್ಖಂಡ್​​ನಲ್ಲೂ ನಮ್ಮ ಪರ ಫಲಿತಾಂಶ ಬರಲಿದೆ ಎಂದಿದ್ದಾರೆ.

ಎರಡೂ ಮೈತ್ರಿ ಪಾಳಯಗಳು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಹೊಸ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರದ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತ ಎಣಿಕೆ ನಡೆಯಲಿದ್ದು ಯಾರಿಗೆ ಅಧಿಕಾರ ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment