/newsfirstlive-kannada/media/post_attachments/wp-content/uploads/2025/06/CHANDRABABU_NAIDU.jpg)
ನಮ್ಮ ದೇಶದಲ್ಲಿ ಓಲಾ, ಉಬರ್ ಟ್ಯಾಕ್ಸಿಗಳು ಸಕ್ಸಸ್ ಆಗಿ ಓಡುತ್ತಿವೆ. ಓಲಾ ಯಶಸ್ಸಿನ ಹಿಂದೆ ಕನ್ನಡಿಗರ ಪರಿಶ್ರಮ ಇದೆ. ಕೂ ಆ್ಯಪ್ ಆರಂಭಿಸಿದ್ದ ಅಪ್ರಮೇಯ ರಾಧಾಕೃಷ್ಣ ಅವರು, ಕೂ ಆ್ಯಪ್ ಆರಂಭಕ್ಕೂ ಮುನ್ನ ಟ್ಯಾಕ್ಸಿ ಫಾರ್ ಶ್ಯೂರ್ ಆ್ಯಪ್ ಆರಂಭಿಸಿದ್ದರು. ಈ ಆ್ಯಪ್ ಮೂರೂವರೇ ವರ್ಷಗಳಲ್ಲಿ 1,200 ಕೋಟಿ ರೂಪಾಯಿವರೆಗೂ ಬೆಳೆದಿತ್ತು. ಈ ಆ್ಯಪ್ ಅನ್ನು ಓಲಾ ಕಂಪನಿಗೆ ಮಾರಿದ್ದರು. ಆ ಆ್ಯಪ್ ಅನ್ನೇ ಓಲಾ ಕಂಪನಿಯವರು ಓಲಾ ಆ್ಯಪ್ ಆಗಿ ಪರಿವರ್ತನೆ ಮಾಡಿದ್ದರು. ಹೀಗೆ ಓಲಾ ಯಶಸ್ಸಿನ ಹಿಂದೆ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಅವರ ಪರಿಶ್ರಮ, ಐಡಿಯಾ ಕೂಡ ಇದೆ.
/newsfirstlive-kannada/media/post_attachments/wp-content/uploads/2023/09/N_CHANDRABABU_NAYDU.jpg)
ಈಗ ಇದೇ ರೀತಿ Rapido (ರಾಪಿಡೋ) ಬೈಕ್, ಆಟೋ ಆ್ಯಪ್ ಐಡಿಯಾದ ಜನಕ ಯಾರು ಎಂಬುದು ಬಹಿರಂಗವಾಗಿದೆ. Rapido ಬೈಕ್, ಆಟೋ ಆ್ಯಪ್ ಐಡಿಯಾದ ಜನಕ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!. ಇದನ್ನು ಕೇಳಿದರೇ, ನಿಮಗೆ ಅಶ್ಚರ್ಯವಾಗಬಹುದು. ಆದರೇ, ಇದು ಸತ್ಯ. ಇದನ್ನು ಖುದ್ದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಈಗ ದೇಶದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಐಡಿಯಾ ಸಕ್ಸಸ್ ಆಗಿದೆ. ಚಂದ್ರಬಾಬು ನಾಯ್ಡುರಲ್ಲಿ ರಾಜಕಾರಣಿ ಮಾತ್ರವಲ್ಲ, ಓರ್ವ ಬ್ಯುಸಿನೆಸ್ ಮನ್ ಐಡಿಯಾ, ಮನಸ್ಸು ಕೂಡ ಇದೆ ಎಂಬುದು ಸಾಬೀತಾಗಿದೆ.
Rapido ಬೈಕ್, ಆಟೋ ಆ್ಯಪ್‌ನ ಸಂಸ್ಥಾಪಕ ಪವನ್ ಗುಂಟಪಲ್ಲಿಯ ತಂದೆ ಟಿಡಿಪಿ ಕಾರ್ಯಕರ್ತರಾಗಿದ್ದರು. ಮಗ ಪವನ್ ಗುಂಟಪಲ್ಲಿ, ಐಐಟಿ, ಐಐಎಂನಲ್ಲಿ ಓದಿ ಬಂದಿದ್ದರು. ಮುಂದೇನು ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದ್ದರು. ಈ ವೇಳೆ ಪವನ್ ಗುಂಟಪಲ್ಲಿಯ ತಂದೆ ಚಂದ್ರಬಾಬು ನಾಯ್ಡು ಭೇಟಿಯಾದಾಗ, Rapido ಬೈಕ್ ಆರಂಭಿಸುವ ಐಡಿಯಾ ಕೊಟ್ಟರಂತೆ.
ಅದನ್ನು ಪವನ್ ಗುಂಟಪಲ್ಲಿ ಜಾರಿಗೆ ತಂದರು. ಕೆಲವೇ ತಿಂಗಳುಗಳಲ್ಲಿ ದೇಶದಲ್ಲಿ Rapido ಬೈಕ್ ಸಕ್ಸಸ್ ಆಯಿತು. ಆ್ಯಪ್ ನಲ್ಲಿ ಜನರು ಬೈಕ್ ಅನ್ನು ಬುಕ್ ಮಾಡಿ, ತಾವು ಇರುವ ಸ್ಥಳದಲ್ಲೇ ಬೈಕ್ ಹತ್ತಿಕೊಂಡು ಓಡಾಡಲು ಶುರು ಮಾಡಿದ್ದರು. ಜೊತೆಗೆ Rapido ಆಟೋ ಆ್ಯಪ್ ಗಳ ಮೂಲಕವೂ ಆಟೋ ಬುಕ್ ಮಾಡಿಕೊಂಡು ಜನರು ನಗರಗಳಲ್ಲಿ ಓಡಾಡಿದ್ದರು.
/newsfirstlive-kannada/media/post_attachments/wp-content/uploads/2025/06/pavan_guntupalli.jpg)
ಸಿಎಂ ಚಂದ್ರಬಾಬು ನಾಯ್ಡು ಅವರ ಐಡಿಯಾ ಈಗ ಕ್ಲಿಕ್ ಆಗಿ, Rapido ಈಗ ಭಾರತದ 100 ನಗರಗಳಿಗೆ ವಿಸ್ತರಿಸಿಕೊಂಡಿದೆ. ಪ್ರತಿ ಗಂಟೆಗೂ ಲಕ್ಷಾಂತರ ಮಂದಿ Rapido ಬೈಕ್​ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದನ್ನು ಖುದ್ದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೊಂಡಿದ್ದಾರೆ. ಜೊತೆಗೆ Rapido ಸಂಸ್ಥಾಪಕ ಪವನ್ ಗುಂಟಪಲ್ಲಿ ಕೂಡ ಚಂದ್ರಬಾಬು ನಾಯ್ಡು ಅವರೇ Rapido ಆರಂಭದ ಐಡಿಯಾ ಕೊಟ್ರು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us