Advertisment

ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?

author-image
Gopal Kulkarni
Updated On
ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?
Advertisment
  • ತಮ್ಮದೇ ಸರ್ಕಾರ, ತಮ್ಮದೇ ಪೊಲೀಸ್‌ ಆದರೂ ಪ್ರತಿಭಟನೆಗಿಳಿದ ದೀದಿ
  • ಸಿಎಂ ಮಮತಾ ಪ್ರತಿಭಟನೆ ಯಾರ ವಿರುದ್ಧ ಎಂದು ಟೀಕಾ ಪ್ರಹಾರ
  • ಮಮತಾ ಬ್ಯಾನರ್ಜಿ ಪ್ರತಿಭಟನೆಯ ಹಿಂದಿರುವ ಅಸಲಿಯತ್ತು ಏನು?

ಕೊಲ್ಕತ್ತಾ: ಪಶ್ಚಿಮ ಬಂಗಾಳ ಈಗಲೂ ಕೂಡ ಬೂದಿ ಮುಚ್ಚಿದ ಕೆಂಡದಂತಿದೆ. ಆರ್​.ಜಿ. ಕರ್ ಕಾಲೇಜಿನಲ್ಲಿ ವೈದ್ಯೆಯ ಮೇಲಾದ ಅನ್ಯಾಯದ ವಿರುದ್ಧ ಇಡೀ ವೈದ್ಯಲೋಕವೇ ರೊಚ್ಚಿಗೆದ್ದಿದೆ. ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿದೆ. ಇದರ ಮಧ್ಯೆ ಆರ್​ಜಿ ಕರ್ ಕಾಲೇಜಿನಲ್ಲಿ ನಿನ್ನೆ ನಡೆದ ವಿಧ್ವಂಸಕ ಕೃತ್ಯಗಳು ಜನರನ್ನ ಇನ್ನಷ್ಟು ಕೆರಳಿಸಿದೆ. ಆಸ್ಪತ್ರೆಗೆ ನುಗ್ಗಿದ ಒಂದು ಗುಂಪು ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿವುದರ ಜೊತೆಗೆ ದೊಡ್ಡ ದಾಂಧಲೆಯನ್ನೇ ಸೃಷ್ಟಿಸಿದ್ದರು. ಇದೆಲ್ಲದರ ಬೆಳವಣಿಗೆಗಳ ನಡುವೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರ ರಾಜೀನಾಮೆಗಾಗಿ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಈಗ ಸಿಎಂ ಮಮತಾ ಬ್ಯಾನರ್ಜಿಯೇ ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದಾರೆ.

Advertisment

ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?

ಸ್ಥಳೀಯರು ಪೊಲೀಸರಿಂದ ಸರಿಯಾದ ತನಿಖೆ ನಡೆಯುತ್ತಲ್ಲೇ ಎಂದು ಸ್ಪಷ್ಟಪಡಿಸಿದ ಕೊಲ್ಕತ್ತಾ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿತು. ಇದರ ನಡುವೆ ಸ್ಥಳೀಯ ಪೊಲೀಸರು ಘಟನೆ ನಡೆದು ನಾಲ್ಕು ದಿನವಾದರೂ ಪ್ರಕರಣಕ್ಕೆ ಸಂಬಂಧಿಸಿಂತೆ ಒಬ್ಬರನ್ನೇ ಬಂಧಿಸಿದ್ದಾರೆ. ನಮಗೆ ಇದು ಸಾಮೂಹಿಕ ಅತ್ಯಾಚಾರದಂತೆ ಭಾಸವಾಗುತ್ತಿದೆ. ಪ್ರಭಾವಿಗಳು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ನಡೆದ ಮಹಾಪ್ರತಿಭಟನೆ ದೀದಿ ಕುರ್ಚಿಯನ್ನು ಅಲ್ಲಾಡುವಂತೆ ಮಾಡಿತ್ತು.

publive-image

ಇದನ್ನೂ ಓದಿ:ಮನೆಯಲ್ಲಿ ಆರಾಮಾಗಿ ಮಲಗಿದ್ದವನಿಗೆ ಶಾಕ್​ ಕೊಟ್ಟ ಟೋಲ್​ ಪ್ಲಾಜಾ; ನುಂಗಿದ್ದು ಎಷ್ಟು ಹಣ?

Advertisment

ಸದ್ಯ ಈಗ ಮಮತಾ ಬ್ಯಾನರ್ಜಿ ಖುದ್ದು ತಾವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಾದ ಘಟನೆಯನ್ನು ಅಭಯಾ ಪ್ರಕರಣ ಎಂದು ಹೆಸರಿಸಿ ರಸ್ತೆಗಿಳಿದು ಱಲಿಯನ್ನು ಮಾಡಿದ್ರು. ನಿರ್ಭಾಯದ ರೀತಿಯಲ್ಲಿಯೇ ಈ ಘಟನೆಯನ್ನು ಅಭಯಾ ಎಂದು ಕರೆಯುವ ಮೂಲಕ ಬೀದಿಗಿಳಿದು ಱಲಿ ನಡೆಸಿದ ದೀದಿ. ಬಿಜೆಪಿ ಹಾಗೂ ಎಡಪಕ್ಷಗಳು ಈ ಘಟನೆಯನ್ನು ರಾಜಕೀಯಗೊಳಿಸುತ್ತಿದೆ. ಪ್ರಕರಣದಲ್ಲಿ ಯಾರೇ ಇದ್ದರೂ ಕೂಡ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮತ್ತೊಮ್ಮೆ ಈ ರೀತಿಯಾದ ಕೆಲಸಕ್ಕೆ ಕೈಹಾಕುವವರು ಸಾವಿರ ಬಾರಿ ಯೋಚನೆ ಮಾಡಬೇಕು ಅಂತಹ ಶಿಕ್ಷೆ ಅಪರಾಧಿಗಳಿಗೆ ಆಗಬೇಕು ಅಂತ ಕಿಡಿಕಾರಿದ್ದಾರೆ.


">August 16, 2024

Advertisment


">August 16, 2024

ದೀದಿ ಱಲಿಗೆ ನೆಟ್ಟಿಗರ ಲೇವಡಿ!
ಕೊಲ್ಕತ್ತಾದಲ್ಲಿ ಇಂದು ದೀದಿ ನಡೆಸಿದ ಱಲಿಯನ್ನು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅನ್ನುವವರು ಸಿಎಂ ಮಮತಾ ಬ್ಯಾನರ್ಜಿಯವರ ವಿರುದ್ಧ ಸಿಡಿದು ಱಲಿ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸಿಎಂ ಮಮತಾ ಬ್ಯಾನರ್ಜಿಯವರಿಗೆ ರಾಜೀನಾಮೆ ನೀಡಲು ಬೇಡಿಕೆಯಿಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಸಿಎಂ ಮಮತಾ ಬ್ಯಾನರ್ಜಿಯವರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅನೇಕ ರೀತಿಯಲ್ಲಿ ಮಮತಾ ಪ್ರತಿಭಟನೆ ಲೇವಡಿಗೀಡಾಗುತ್ತಿದೆ.

ಇಡೀ ಪೊಲೀಸ್ ವ್ಯವಸ್ಥೆಯೇ ಸಿಎಂ ಕೈಯಲ್ಲಿ ಇರುತ್ತೆ. ಅದರಿಂದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದು ಬಿಟ್ಟು, ತಮ್ಮದೇ ಸರ್ಕಾರದ ತಪ್ಪಿಟ್ಟುಕೊಂಡು ಅವರೇ ಬೀದಿಗಿಳಿದು ಹೋರಾಟಕ್ಕೆ ನಿಂತಿರುವುದು ನಿಜಕ್ಕೂ ಖೇದಕರ ಇದು ಕೇಜ್ರಿವಾಲ್​ರ ಪರಂಪರೆಯ ಮುಂದುವರಿಕೆಯ ಭಾಗ ಎಂದು ಕೆಲವರು ಲೇವಡಿ ಮಾಡಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿರುವ ಪಶ್ಚಿಮ ಬಂಗಾಳ
ದೀದಿ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟಪಡಿಸಲಿ ಅಂತ ವಿಪಕ್ಷಗಳು ಕಿಡಿಕಾರಿವೆ. ಘಟನೆ ನಡೆದು ಹೆಚ್ಚು ಕಡಿಮೆ ಏಳೆಂಟು ದಿನಗಳೇ ಆಗಿವೆ. ಸಿಬಿಐ ತನಿಖೆಯ ಹಂತಕ್ಕೂ ಈಗಾಗಲೇ ಪ್ರಕರಣ ಹೋಗಿದೆ. ಆದರೂ ಕೂಡ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಒಂದು ಸಣ್ಣ ಬಿರುಗಾಳಿ ಬೀಸಿದರೂ ಕೂಡ ಆ ಕೆಂಡ ಮತ್ತಷ್ಟು ನಿಗಿನಿಗಿ ಆಗುವುದರಲ್ಲಿ ಸಂದೇಹವೇ ಇಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment