newsfirstkannada.com

ಬಿಜೆಪಿ ಸೋಲಿಸಲು ಒಂದಾದ ವಿಪಕ್ಷಗಳು; ತಮಿಳುನಾಡು ಸಿಎಂ MK ಸ್ಟಾಲಿನ್​​ ಬಿಚ್ಚಿಟ್ರು ಮಹತ್ವದ ಸತ್ಯ!

Share :

17-07-2023

    ಬಿಜೆಪಿ ಸೋಲಿಸಲು ಒಂದಾದ ವಿಪಕ್ಷಗಳು

    ಬೆಂಗಳೂರಿನಲ್ಲಿ 2 ದಿನಗಳು ಮಹತ್ವದ ಸಭೆ

    ಈ ಬಗ್ಗೆ ಸಿಎಂ ಎಂ.ಕೆ ಸ್ಟಾಲಿನ್​ ಹೇಳಿದ್ದೇನು?

ಚೆನ್ನೈ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಕೇಂದ್ರ ವಿಪಕ್ಷಗಳು ಒಂದಾಗಿವೆ. ಕಳೆದ ತಿಂಗಳು ಜೂನ್ 23ನೇ ತಾರೀಕಿನಂದು ಪಟ್ನಾದಲ್ಲಿ ಮೊದಲ ಸಭೆ ನಡೆಸಿದ್ದ ವಿರೋಧ ಪಕ್ಷಗಳು, ಇದರ ಮುಂದುವರಿದ ಭಾಗವಾಗಿ ಮತ್ತೆ ಬೆಂಗಳೂರಿನಲ್ಲಿ ಸೇರುತ್ತಿವೆ. ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲೇ ಈ ಸಭೆಯೂ ನಡೆಯಲಿದೆ.

ಇನ್ನು, ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ವಿಪಕ್ಷಗಳ ಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಎಂ.ಕೆ ಸ್ಟಾಲಿನ್​​, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳು ಒಂದಾಗಿವೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಬೆಂಗಳೂರಿನಲ್ಲಿ ಇಂದು, ನಾಳೆ ನಡೆಯಲಿರೋ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಕಳೆದ 13 ವರ್ಷಗಳ ಹಿಂದೆ ಜಯಲಲಿತಾ ಸರ್ಕಾರ ನಮ್ಮ ಪಕ್ಷದ ನಾಯಕರ ವಿರುದ್ಧ ಹಲವು ನಕಲಿ ಕೇಸ್​​ಗಳನ್ನು ದಾಖಲಿಸಿದ್ದರು. ಮಿನಿಸ್ಟರ್​​ ಕೆ. ಪೋನ್ಮುಡಿ ವಿರುದ್ಧವೂ ಅಂದೇ ಕೇಸ್​ ಆಗಿತ್ತು. ನಾವು ಕಾಂಗ್ರೆಸ್​ನೊಂದಿಗೆ ಸೇರಿ ಬಿಜೆಪಿ ವಿರುದ್ಧ ಒಂದಾಗಿದ್ದೇವೆ ಎಂದು ವಿಪಕ್ಷಗಳ ಧ್ವನಿ ಅಡಗಿಸಲು ಹೀಗೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಜಾರಿ ನಿರ್ದೇಶನಾಲಯ ಮೂಲಕ ವಿಪಕ್ಷಗಳನ್ನು ಟಾರ್ಗೆಟ್​ ಮಾಡುತ್ತಿದೆ ಎಂದು ಆರೋಪಿಸಿದರು.

ಏನಿದು ವಿಪಕ್ಷಗಳ ಸಭೆ?

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಒಂದಾದ ವಿಪಕ್ಷಗಳ ಸಭೆ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ. ತಾಜ್ ವೆಸ್ಟೆಂಡ್​ ಹೊಟೇಲ್​ನಲ್ಲಿ ಲೋಕಸಭಾ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಈಗಾಗಲೇ ಸೋನಿಯಾ ಗಾಂಧಿ, ರಾಹುಲ್​​ ಗಾಂಧಿ, ನಿತೀಶ್​ ಕುಮಾರ್​​, ಅರವಿಂದ್​ ಕೇಜ್ರಿವಾಲ್​​, ಎಂ.ಕೆ ಸ್ಟಾಲಿನ್​​, ಅಖಿಲೇಶ್​ ಯಾದವ್​ ಸೇರಿದಂತೆ ಹಲವರು ಆಗಮಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬಿಜೆಪಿ ಸೋಲಿಸಲು ಒಂದಾದ ವಿಪಕ್ಷಗಳು; ತಮಿಳುನಾಡು ಸಿಎಂ MK ಸ್ಟಾಲಿನ್​​ ಬಿಚ್ಚಿಟ್ರು ಮಹತ್ವದ ಸತ್ಯ!

https://newsfirstlive.com/wp-content/uploads/2023/07/MK-Stalin-2.jpg

Load More