ಬೆಂಗಳೂರಿನ HAL ಮೇಲೆ ಚಂದ್ರಬಾಬು ನಾಯ್ಡು ಕಣ್ಣು.. ಕೇಂದ್ರದ ಮುಂದೆ ದೊಡ್ಡ ಲಾಬಿ..!

author-image
Ganesh
Updated On
ಬೆಂಗಳೂರಿನ HAL ಮೇಲೆ ಚಂದ್ರಬಾಬು ನಾಯ್ಡು ಕಣ್ಣು.. ಕೇಂದ್ರದ ಮುಂದೆ ದೊಡ್ಡ ಲಾಬಿ..!
Advertisment
  • ಹೆಚ್‌ಎಎಲ್‌ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕಣ್ಣು
  • ದೊನಕೊಂಡದಲ್ಲಿ ವಾಯುಪಡೆ ಸ್ಟೇಷನ್ ಸ್ಥಾಪನೆಗೂ ಮನವಿ
  • ಅಮಿತ್ ಶಾ, ರಾಜನಾಥ್ ಸಿಂಗ್ ಜೊತೆ ಚಂದ್ರಬಾಬುನಾಯ್ಡು ಚರ್ಚೆ

ಹೈಟೆಕ್ ಸಿಟಿ.. ಸಿಲಿಕಾನ್ ಸಿಟಿ.. ಐಟಿ-ಬಿಟಿ ಕ್ಯಾಪಿಟಲ್. ಆದ್ರೆ, ಆಗಾಗ ಇಲ್ಲಿರೋ ಕಂಪನಿಗಳ ಮೇಲೆ ನೆರೆ ರಾಜ್ಯಗಳು ಕಣ್ಣಾಕೋದು ಸಾಮಾನ್ಯ. ಆದ್ರೀಗ ಬೆಂಗಳೂರಿನಲ್ಲಿರೋ ದೊಡ್ಡ ಕಂಪನಿ ಮೇಲೆ ಆಂಧ್ರಪ್ರದೇಶ ಸಿಎಂ ಕಣ್ಣಾಕಿದ್ದಾರೆ. ಹೆಚ್‌ಎಎಲ್‌ನ ತೆಲುಗು ನಾಡಿಗೆ ಶಿಫ್ಟ್ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು.. ಐಟಿಬಿಟಿ ಕಂಪನಿಗಳ ಆಗರ.. ಹೈಟೆಕ್ ಸಿಟಿ ಎಂಬ ಪ್ರಸಿದ್ಧಿ ಪಡೆದಿರೋ ನಗರಿ. ಅದಕ್ಕೋ ಏನೋ? ಅಕ್ಕ-ಪಕ್ಕದ ರಾಜ್ಯಗಳು ಆಗಾಗ ಬೆಂಗಳೂರಿನಲ್ಲಿರೋ ಕಂಪನಿಗಳನ್ನ ತಮ್ಮತ್ತ ಸೆಳೆಯಲು ಲಾಬಿ ಮಾಡ್ತಿರುತ್ತವೆ. ಇದೀಗ ಬೆಂಗಳೂರಿನಲ್ಲಿರೋ ಬಿಗ್ ಕಂಪನಿ ಮೇಲೆ ಆಂಧ್ರ ಚಿತ್ತಹರಿಸಿದೆ.

ಇದನ್ನೂ ಓದಿ: ಆರ್​ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್​.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!

ಹೆಚ್‌ಎಎಲ್‌ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕಣ್ಣು

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂಬ ಕಾರಣಕ್ಕೆ ಎಷ್ಟೋ ಕಂಪನಿಗಳು ಬೇರೆ ಬೇರೆ ರಾಜ್ಯಗಳಿಗೆ ಶಿಫ್ಟ್ ಆಗ್ತಿವೆ.. ಈ ನಡುವೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು ಕಣ್ಣು ಈಗ ಬೆಂಗಳೂರಿನ ಎಚ್‌ಎಎಲ್ ಮೇಲೆ ಬಿದ್ದಿದೆ.. ಬೆಂಗಳೂರಿನ ಎಚ್‌ಎಎಲ್‌ ಆಂಧ್ರಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಕಂಪನಿ ಸ್ಥಾಪನೆಗೆ ಜಾಗ ಕೂಡ ಗುರ್ತಿಸಿದೆ.

HAL ಮೇಲೆ ಆಂಧ್ರ ಕಣ್ಣು!

ಬೆಂಗಳೂರಿನಲ್ಲಿರೋ ಹೆಚ್​ಎಎಲ್ ಸಂಸ್ಥೆ ಆಂಧ್ರಕ್ಕೆ ಸ್ಥಳಾಂತರಿಸುವಂತೆ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿರೋ ಎಚ್ಎಎಲ್ ಉತ್ಪಾದನಾ ಘಟಕ, ಅಡ್ವಾನ್ಸ್ ಮೀಡಿಯಂ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕ, ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕ ಶಿಫ್ಟ್​ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ HAL ಕಂಪನಿಗೆ 10 ಸಾವಿರ ಎಕರೆ ಭೂಮಿ ಕೊಡಲು ಸಿದ್ಧ ಅಂತ ತಿಳಿಸಿದ್ದಾರೆ. ಮಡಕಶಿರಾ-ಲೇಪಾಕ್ಷಿ ಮಧ್ಯೆ ಸ್ಥಳಗಳಲ್ಲಿ ಜಾಗ ಕೊಡ್ತೇವೆ. ಅಲ್ಲಿ 5ನೇ ಜನರೇಷನ್ ಏರ್ ಕ್ರಾಫ್ಟ್ ಉತ್ಪಾದನೆಗೆ ಆಂಧ್ರಪ್ರದೇಶ ಒಲವು ತೋರಿದೆ. ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಹಬ್​ಗಳ ಸ್ಥಾಪನೆ ಮಾಡುತ್ತೇವೆ. ಬೆಂಗಳೂರಿನಲ್ಲಿ HAL ಬೆಳವಣಿಗೆ ತುತ್ತತುದಿ ತಲುಪಿದೆ. ಈಗ ಹೆಚ್‌ಎಎಲ್‌ಗೆ ಹೆಚ್ಚಿನ ಜಾಗದ ಅಗತ್ಯ ಇದೆ.

ಇದನ್ನೂ ಓದಿ: PF ಇರೋರಿಗೆ ಗುಡ್​ನ್ಯೂಸ್​.. ಬಡ್ಡಿ ದರ ನಿಗದಿ ಮಾಡಿದ ಕೇಂದ್ರ ಸರ್ಕಾರ

ಹೀಗಾಗಿ ಆಂಧ್ರಪ್ರದೇಶ ಹೆಚ್ಚಿನ ಜಾಗ ಕೊಡಲು ಸಿದ್ಧ ಅಂತ ಸಿಎಂ ನಾಯ್ಡು ಮನವಿ ಮಾಡಿದ್ದಾರೆ ಅಂತ ತಿಳಿದುಬಂದಿದೆ.
ಬರೀ ಹೆಚ್‌ಎಎಲ್ ಆದ್ರೆ ಒಪ್ಪಲ್ಲ.. ಅನ್ನೋ ಕಾರಣಕ್ಕೆೋ ಏನೋ? ಕೇಂದ್ರ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಮತ್ತೊಂದು ಆಫರ್ ಕೊಟ್ಟಿದ್ದಾರೆ.

ವಾಯುಪಡೆ ಸ್ಟೇಷನ್‌ಗೂ ಮನವಿ!

ದೊನಕೊಂಡದಲ್ಲಿ ವಾಯುಪಡೆ ಸ್ಟೇಷನ್ ಸ್ಥಾಪನೆಗೂ ಸಿಎಂ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರಂತೆ. ವಾಯುಪಡೆ ಸ್ಟೇಷನ್​ಗೆ 6 ಸಾವಿರ ಎಕರೆ ಭೂಮಿ ನೀಡಲು ಸಿದ್ಧ ಅಂತ ತಿಳಿಸಿದ್ದಾರಂತೆ. ವಿಶಾಖಪಟ್ಟಣ ಬಳಿ 3 ಸಾವಿರ ಎಕರೆ ಜಾಗ ಕೊಡಲು ಸಿದ್ಧ ಅಂತ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚಂದ್ರಬಾಬುನಾಯ್ಡು ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಆಂಧ್ರಪ್ರದೇಶ ಸಿಎಂ ಏನೋ ಕೇಂದ್ರಕ್ಕೆ ಈ ಮನವಿ ಇಟ್ಟಿದ್ದಾರೆ. ಕೇಂದ್ರ ಸಚಿವರು ನಾಯ್ಡು ಮನವಿಯನ್ನ ಪುರಸ್ಕರಿಸ್ತಾರಾ? ಅಥವಾ ತಿರಸ್ಕರಿಸ್ತಾರಾ? ಸದ್ಯಕ್ಕೆ ಇದೇ ಮುಂದಿರೋ ಪ್ರಶ್ನೆ.

ಇದನ್ನೂ ಓದಿ: ₹225 ಕೋಟಿ ಲಾಟರಿ ಗೆದ್ದ ನಿವೃತ್ತ ಇಂಜಿನಿಯರ್; ಅದೃಷ್ಟ ಖುಲಾಯಿಸಿದ್ದೇ ರೋಚಕ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment