newsfirstkannada.com

ಬಿಹಾರದಲ್ಲಿ ಪತನವಾಗುತ್ತಾ ನಿತೀಶ್ ಕುಮಾರ್‌ ಸರ್ಕಾರ? ಶಾಸಕರ ಆಪರೇಷನ್ ಶುರು!

Share :

Published January 25, 2024 at 9:05pm

Update January 25, 2024 at 9:06pm

    2020ರಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿ ಸರ್ಕಾರ

    ಮೈತ್ರಿ ಬದಲಾವಣೆ ಮಾಡಿಕೊಳ್ಳಲು ಸಿಎಂ ನಿತೀಶ್ ನಿರ್ಧಾರ

    ಬಿಜೆಪಿ ಜೊತೆ ಮೈತ್ರಿಗೆ ಮುಂದಾದ ಜೆಡಿಯು ನಾಯಕರು

ಪಾಟ್ನಾ: ಬಿಹಾರ ರಾಜ್ಯ ರಾಜಕೀಯದಲ್ಲಿ ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ. ಸಿಎಂ ನಿತೀಶ್ ಕುಮಾರ್ ಅವರು ಮತ್ತೆ ಆರ್‌ಜೆಡಿ ಜೊತೆ ಮೈತ್ರಿ ಮುರಿದುಕೊಳ್ಳಲು ನಿರ್ಧಾರ ಮಾಡಿದ್ದು, ಬಹುಮತದ ಕೊರತೆ ಎದುರಾಗಿದೆ. ಆರ್‌ಜೆಡಿ, ಕಾಂಗ್ರೆಸ್ ಮೈತ್ರಿ ಮುರಿದು ಬಿಜೆಪಿ ಜೊತೆ ಕೈ ಜೋಡಿಸಿದ್ರೆ ನಿತೀಶ್ ಕುಮಾರ್ ಸರ್ಕಾರ ಸೇಫ್ ಆಗಬಹುದು. ಈ ದೋಸ್ತಿ ದಂಗಲ್‌ನಿಂದ ಬಿಹಾರದಲ್ಲಿ ರಾಜಕೀಯದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಬಿಹಾರದಲ್ಲಿ ಮೈತ್ರಿ ಬದಲಾವಣೆ ಮಾಡಿಕೊಳ್ಳಲು ಸಿಎಂ ನಿತೀಶ್ ಕುಮಾರ್ ನಿರ್ಧಾರ ಮಾಡಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲು ತೀರ್ಮಾನಿಸಿರೋ ಜೆಡಿಯು ನಾಯಕರು ದೆಹಲಿಗೆ ತೆರಳಿದ್ದಾರೆ. ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಕೂಡ ದೆಹಲಿಗೆ ಪ್ರಯಾಣ ಮಾಡಿದ್ದು ಬಿಹಾರ ರಾಜ್ಯ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದೆ. ಬಿಜೆಪಿ ಜೊತೆ ಮೈತ್ರಿಗೆ ನಿತೀಶ್ ಕುಮಾರ್ ಒಲವು ತೋರಿದ್ದಾರೆ.

2020ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 43 ಸ್ಥಾನಗಳನ್ನ ಗೆದ್ದಿತ್ತು. ಹೀಗಾಗಿ ಆರ್‌ಜೆಡಿ, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಇದೀಗ ಮೈತ್ರಿ ಮುರಿದುಕೊಳ್ಳಲು ತೀರ್ಮಾನಿಸಿದ್ದು ಬಿಜೆಪಿ ಜೊತೆ ಸರ್ಕಾರ ರಚಿಸೋ ಸರ್ಕಸ್ ಆರಂಭಿಸಿದ್ದಾರೆ.

ಬಿಹಾರದ ಸಂಖ್ಯಾಬಲ (ಒಟ್ಟು 243)
ಆರ್‌ಜೆಡಿ: 75
ಬಿಜೆಪಿ: 74
ಜೆಡಿ(ಯು): 43
ಕಾಂಗ್ರೆಸ್: 19
ಎಡ ಪಕ್ಷಗಳು: 12
ಇತರೆ: 20

ಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಶಾಸಕರ ಸ್ಥಾನ ಇದ್ದು ಸರ್ಕಾರ ರಚಿಸಲು 122 ಸದಸ್ಯರ ಬೆಂಬಲ ಅಗತ್ಯವಿದೆ. ಜೆಡಿಯು, ಬಿಜೆಪಿ ಜೊತೆಯಾದ್ರೆ ಶಾಸಕರ ಸಂಖ್ಯೆ 117 ಆಗುತ್ತೆ. ಆರ್‌ಜೆಡಿ ಕೂಡ ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚಿಸೋ ಸರ್ಕಸ್ ಮಾಡುತ್ತಿದೆ. ಯಾರೇ ಸರ್ಕಾರ ರಚನೆ ಮಾಡಬೇಕಿದ್ರೂ ಉಳಿದ ಶಾಸಕರ ಆಪರೇಷನ್ ನಡೆಸಬೇಕಿದೆ.

ಮೈತ್ರಿ ಮುರಿದು ಬಿದ್ದಿದ್ದೇಕೆ?
ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಈ ಮಧ್ಯೆ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ ಅವರು ಸರ್ಕಾರವನ್ನೇ ವಿಸರ್ಜನೆ ಮಾಡುವ ಮಾತನಾಡಿದ್ದಾರೆ. ಕರ್ಪೂರಿ ಠಾಕೂರ್ ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಪರೋಕ್ಷವಾಗಿ ಲಾಲೂ ಕುಟುಂಬದ ವಿರುದ್ಧ ಟೀಕೆ ಮಾಡಿದ್ದರು. ಕರ್ಪೂರಿ ಠಾಕೂರ್ ಎಂದೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆ ತರಲಿಲ್ಲ. ಕರ್ಪೂರಿ ಠಾಕೂರ್ ಮಕ್ಕಳನ್ನು ರಾಜಕೀಯವಾಗಿ ಬೆಳೆಸಲಿಲ್ಲ. ಈಗ ಕೆಲವರು ತಮ್ಮ ಮಕ್ಕಳನ್ನ ರಾಜಕೀಯವಾಗಿ ಬೆಳೆಸುತ್ತಾರೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್​​ಗೆ ಬಿಗ್​ ಶಾಕ್​​.. ಬಿಜೆಪಿ ಸೇರಲು ಅಸಲಿ ಕಾರಣ ಬಿಚ್ಚಿಟ್ಟ ಜಗದೀಶ್​ ಶೆಟ್ಟರ್​​!

ನಿತೀಶ್ ಕುಮಾರ್ ಅವರ ಹೇಳಿಕೆಗೆ ಲಾಲೂ ಯಾದವ್ ಪುತ್ರಿ ರೋಹಿಣಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಟೀಕೆಯ ಬಳಿಕ ಆರ್‌ಜೆಡಿ-ಜೆಡಿಯು ಸಂಬಂಧ ಹದಗೆಟ್ಟಿದ್ದು ತೇಜಸ್ವಿ ಯಾದವ್‌ಗೆ ಸಿಎಂ ಹುದ್ದೆ ನೀಡಲು ಆರ್‌ಜೆಡಿ ಪಟ್ಟು ಹಿಡಿದಿತ್ತು. ಲಾಲೂ ಪ್ರಸಾದ್ ಯಾದವ್ ಮನೆಯಲ್ಲಿ ಸರಣಿ ಸಭೆಗಳು ನಡೆದ ಹಿನ್ನೆಲೆಯಲ್ಲಿ ಜೆಡಿಯು ಬಿಹಾರ ವಿಧಾನಸಭೆ ವಿಸರ್ಜಿಸುವ ಸುಳಿವು ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿ ಜೊತೆ ಸರ್ಕಾರ ರಚಿಸಲು ಜೆಡಿಯು ಷರತ್ತು ವಿಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಹಾರದಲ್ಲಿ ಪತನವಾಗುತ್ತಾ ನಿತೀಶ್ ಕುಮಾರ್‌ ಸರ್ಕಾರ? ಶಾಸಕರ ಆಪರೇಷನ್ ಶುರು!

https://newsfirstlive.com/wp-content/uploads/2024/01/Lalu-Prasad-yadav-Bihar.jpg

Load More