Advertisment

CMಗೆ ತಂದಿದ್ದ ಸಮೋಸಾ, ಕೇಕ್​ಗಳು ಮಂಗಮಾಯ.. CID ತನಿಖೆ ಹೇಳಿದ್ದೇನು?

author-image
Bheemappa
Updated On
CMಗೆ ತಂದಿದ್ದ ಸಮೋಸಾ, ಕೇಕ್​ಗಳು ಮಂಗಮಾಯ.. CID ತನಿಖೆ ಹೇಳಿದ್ದೇನು?
Advertisment
  • ಭದ್ರತೆಗೆ ನೀಡಿದ ತಿಂಡಿ ಕಾಣೆಯಾದ ಬಗ್ಗೆ ಸಿಐಡಿ ತನಿಖೆ
  • 3 ಸೀಲ್ಡ್ ಬಾಕ್ಸ್‌ಗಳಲ್ಲಿ ತಂದಿದ್ದ ಸಮೋಸಾ, ಕೇಕ್​ಗಳು
  • ತನಿಖೆ ಮಾಡಿ ಅಧಿಕಾರಿಯೊಬ್ಬರು ಏನೆಂದು ಹೇಳಿದ್ದಾರೆ..?

ಶಿಮ್ಲಾ: ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರಿಗೆಂದು ತಂದಿದ್ದ ಸಮೋಸಾ ಮತ್ತು ಕೇಕ್‌ಗಳನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಈ ಘಟನೆಯನ್ನು ಸಿಐಡಿ ತನಿಖೆಗೆ ವಹಿಸಿದ ವೇಳೆ ತನಿಖೆ ಮಾಡಿದ ಹಿರಿಯ ಅಧಿಕಾರಿಯೊಬ್ಬರು ‘ಸರ್ಕಾರಿ ವಿರೋಧಿ ಕೃತ್ಯ’ ಎಂದು ಹೇಳಿದ್ದಾರೆ.

Advertisment

ಸಿಎಂ ಸುಖ್ವಿಂದರ್ ಸಿಂಗ್ ಅವರು ಸಿಐಡಿ ಪ್ರಧಾನ ಕಚೇರಿಯ ಕಾರ್ಯಕ್ರಮದಲ್ಲಿ ಅಕ್ಟೋಬರ್ 21ರಂದು ಪಾಲ್ಗೊಂಡಿದ್ದರು. ಈ ವೇಳೆ ಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಸಿಎಂಗಾಗಿ ಲಕ್ಕರ್ ಬಜಾರ್‌ನಲ್ಲಿರುವ ಹೋಟೆಲ್ ರಾಡಿಸನ್ ಬ್ಲೂನಿಂದ ತಿನಿಸುಗಳನ್ನು ತರಿಸಿದ್ದರು. ಒಟ್ಟು ಮೂರು ಸೀಲ್ಡ್ ಬಾಕ್ಸ್‌ಗಳಲ್ಲಿ ಸಮೋಸಾ ಹಾಗೂ ಕೇಕ್​ಗಳನ್ನು ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್​ಗೆ ಹೇಳಿ ಐಜಿ ತರಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನಿಂದ ಅರ್ಜಿ ಆಹ್ವಾನ.. 10ನೇ ಕ್ಲಾಸ್ ಆಗಿದ್ರೆ, ಅಪ್ಲೇ ಮಾಡಿ

[caption id="attachment_95853" align="alignnone" width="800"]publive-image ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು[/caption]

Advertisment

ಮೂರು ಬಾಕ್ಸ್‌ಗಳಲ್ಲಿನ ತಿಂಡಿಯನ್ನ ಸಿಎಂಗೆ ನೀಡಬೇಕೇ ಎಂದು ಕರ್ತವ್ಯದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯನ್ನು ಕೇಳಿದ್ದರು. ಆದರೆ ಅವರು ಅವುಗಳನ್ನು ಮೆನುವಿನಲ್ಲಿ ಸೇರಿಸಿಲ್ಲ ಎಂದು ಹೇಳಿದ್ದರು ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಮನ್ವಯದ ಕೊರತೆಯಿಂದಾಗಿ ಸಿಎಂಗೆ ನೀಡಬೇಕಿದ್ದ ಅವುಗಳನ್ನು ಸಿಎಂ ಭದ್ರತಾ ಅಧಿಕಾರಿಗಳಿಗೆ ನೀಡಲಾಗಿತ್ತು ಎಂದು ಎಸ್​ಪಿ ಶ್ರೇಣಿಯ ಅಧಿಕಾರಿ ನಡೆಸಿದ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು

ಈ 3 ಬಾಕ್ಸ್​ನಲ್ಲಿದ್ದ ತಿನಿಸುಗಳನ್ನು ಸಿಎಂಗೆ ನೀಡಬೇಕು ಎನ್ನುವುದು ಎಸ್‌ಐಗೆ ಮಾತ್ರ ತಿಳಿದಿತ್ತು. ಆದರೆ ಇದರ ಮಾಹಿತಿ ಇಲ್ಲದೇ ಲೇಡಿ ಇನ್ಸ್‌ಪೆಕ್ಟರ್, ಮೆಕನಿಕಲ್ ಟ್ರಾನ್ಸ್​ಪೋರ್ಟ್​ ಸೆಕ್ಷನ್​ಗೆ ಕಳುಹಿಸಿದರು. ಈ ವೇಳೆ ಮೂರು ಬಾಕ್ಸ್​ಗಳಲ್ಲಿ ಹಲವರು ಕೈಯಾಡಿಸಿದ್ದಾರೆ. ಇದನ್ನೆಲ್ಲವನ್ನು ತನಿಖೆ ಮಾಡಿದ ಸಿಐಡಿಯ ಹಿರಿಯ ಅಧಿಕಾರಿ ತಮ್ಮ ಟಿಪ್ಪಣಿಯ ವಿಚಾರಣಾ ವರದಿಯಲ್ಲಿ ಎಲ್ಲ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿ, ಇವರೆಲ್ಲರೂ ಸರ್ಕಾರ ಹಾಗೂ ಸಿಐಡಿ ವಿರುದ್ಧವಾಗಿ ವರ್ತನೆ ಮಾಡಿದ್ದಾರೆ. ಇದರಿಂದ ವಿವಿಐಪಿ ವ್ಯಕ್ತಿಗಳಿಗೆ ತನಿಸುಗಳನ್ನು ನೀಡಲಾಗಲಿಲ್ಲ ಎಂದು ಬರೆದು ತನಿಖೆ ಪೂರ್ಣಗೊಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment