newsfirstkannada.com

VIDEO: ‘ಇದು ಕರ್ನಾಟಕ, ನಾನು ಕನ್ನಡದಲ್ಲೇ ಮಾತಾಡೋದು’- ಸಿಎಂ ಸಿದ್ದರಾಮಯ್ಯ

Share :

18-06-2023

    UPSC ಕೋಚಿಂಗ್ ಸಂಸ್ಥೆ ಇನ್​ಸೈಟ್​​​​ ಆಯೋಜಿಸಿದ್ದ ಕಾರ್ಯಕ್ರಮ

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ ಭಾಗಿ

    ಇದು ಕರ್ನಾಟಕ, ನಾನು ಕನ್ನಡದಲ್ಲೇ ಮಾತಾಡೋದು ಎಂದ ಸಿಎಂ

ಬೆಂಗಳೂರು: ಇಂದು ದೇಶದ ಅತ್ಯುತ್ತಮ UPSC ಕೋಚಿಂಗ್ ಸಂಸ್ಥೆ ಇನ್​ಸೈಟ್​​​​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ವೇದಿಕೆ ಮೇಲೆ ಸಭೆಯನ್ನು ಉದ್ದೇಶಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ನನಗೆ ಇಂಗ್ಲೀಷ್​​ನಲ್ಲಿ ಭಾಷಣ ಮಾಡಿ ಎಂದರು. ಇದು ಕರ್ನಾಟಕ, ನಾನು ಕನ್ನಡದಲ್ಲೇ ಮಾತಾಡೋದು ಎಂದರು.

ಕಾರ್ಯಕ್ರಮ ನಡೆಯುತ್ತಿರೋದು ಕರ್ನಾಟಕದಲ್ಲೇ. ಹೀಗಾಗಿ ಕನ್ನಡದಲ್ಲೇ ಭಾಷಣ ಮಾಡುತ್ತೇನೆ. ಯೂನಿಯನ್​​ ಪಬ್ಲಿಕ್​ ಸರ್ವೀಸ್​ ಕಮಿಷನ್​​ (UPSC) ಸಂಸ್ಥೆ ಪ್ರತೀ ವರ್ಷ ಪರೀಕ್ಷೆ ನಡೆಸುತ್ತದೆ. ಬ್ರಿಟೀಷರ ಕಾಲದಲ್ಲಿ ಐಸಿಎಸ್​​ ಎಂದು ಇತ್ತು. ಈಗ ಇದು IAS, IPS ಎಂದು ಬದಲಾಗಿದೆ ಎಂದರು ಸಿದ್ದರಾಮಯ್ಯ.

ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೇ ಸುಪ್ರೀಂ

ಪ್ರಜಾಪ್ರಭುತ್ವ ಎಂದರೆ ಜನರಿಗಾಗಿ ಇರುವ ಸರ್ಕಾರ. ಇಲ್ಲಿ ಯಾವಾಗಲೂ ಪ್ರಜೆಗಳೇ ಸುಪ್ರೀಂ. ಜನರಿಗಾಗಿ ಪ್ರಜಾಪ್ರಭುತ್ವ ಇದೆ. ಜನರಿಂದಲೇ ಸರ್ಕಾರ ಆಯ್ಕೆ ಆಗುತ್ತದೆ. ಬದಲಾವಣೆ ತರಲು ಸರ್ಕಾರ ನೀತಿ ರೂಪಿಸುತ್ತದೆ. ಸರ್ಕಾರದ ನೀತಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸೋ ಕೆಲಸ ಐಎಎಸ್​​ ಮತ್ತು ಐಪಿಎಸ್​ ಅಧಿಕಾರಿಗಳದ್ದು ಎಂದರು.

ಸರ್ಕಾರ, ಜನರ ಮಧ್ಯೆ ಐಎಎಸ್​ ಅಧಿಕಾರಿಗಳು ಸೇತುವೆ ಆಗಿರುತ್ತಾರೆ. ಚುನಾವಣೆಗೆ ಮುನ್ನ ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿ. ನಾವು ಜನರ ಸೇವೆ ಮಾಡಬೇಕು, ಇಲ್ಲದೆ ಹೋದಲ್ಲಿ ನಮಗೆ ರಾಜಕಾರಣಿ ಆಗಲು ಲಾಯಕ್ಕಿಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು ಸಿದ್ದರಾಮಯ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಇದು ಕರ್ನಾಟಕ, ನಾನು ಕನ್ನಡದಲ್ಲೇ ಮಾತಾಡೋದು’- ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2023/06/Siddaramaiah_Insight.jpg

Load More