ದಿಢೀರ್‌ ಸಿಟಿ ರೌಂಡ್ಸ್ ರದ್ದು ಮಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್

author-image
admin
Updated On
ದಿಢೀರ್‌ ಸಿಟಿ ರೌಂಡ್ಸ್ ರದ್ದು ಮಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್
Advertisment
  • ಬೆಂಗಳೂರಲ್ಲಿ ಇನ್ನೂ 3 ದಿನ ಮಳೆಯಾದ್ರೆ ಏನು ಗತಿ ಅನ್ನೋ ಚಿಂತೆ
  • ಅದೇ ಬಿಎಂಟಿಸಿ ಬಸ್‌ನಲ್ಲಿ ಬಿಬಿಎಂಪಿ ವಾರ್ ರೂಂಗೆ ಪ್ರಯಾಣ
  • ನಾಳೆ ಹೊಸಪೇಟೆಯಲ್ಲಿ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ

ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ ಸುರಿದು ಅವಾಂತರವನ್ನೇ ಸೃಷ್ಟಿಸಿದೆ. ಇನ್ನೂ 3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು, ಸಿಟಿ ಜನರು ನಿಂತ ನೀರಲ್ಲಿ ನಡುಗುವಂತಾಗಿದೆ. ಮಳೆ ಅನಾಹುತದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಿಟಿ ರೌಂಡ್ಸ್ ದಿಢೀರ್ ಕ್ಯಾನ್ಸಲ್ ಮಾಡಲಾಗಿದೆ.

ಸಿಟಿ ರೌಂಡ್ಸ್ ರದ್ದು ಮಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅದೇ ಬಿಎಂಟಿಸಿ ಬಸ್‌ನಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಬಿಬಿಎಂಪಿ ವಾರ್ ರೂಂಗೆ ತೆರಳಿದರು. ಸಚಿವ ಕೆ.ಜೆ ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಾಥ್ ನೀಡಿದ್ದಾರೆ.

ಬಿಬಿಎಂಪಿ ವಾರ್ ರೂಮ್‌ನಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸಲಿರುವ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಪ್ರಮುಖವಾಗಿ ಮಳೆಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ.

publive-image

ನಗರದಲ್ಲಿ ಮತ್ತೆ ವ್ಯಾಪಕ ಮಳೆ ಸುರಿಯುತ್ತಾ ಇದೆ. ಸಂಜೆ ವೇಳೆ ಟ್ರಾಫಿಕ್ ಜಾಮ್‌ ಕೂಡ ಹೆಚ್ಚಾಗಲಿದೆ. ಇದರಿಂದ ವಾಹನ ಸವಾರರಿಗೆ ಮತ್ತಷ್ಟು ‌ಕಿರಿಕಿರಿ ಉಂಟಾಗುತ್ತದೆ. ಆಗ ಸರ್ಕಾರ ಜನರಿಂದ ಆಕ್ರೋಶ ಎದುರಿಸಬೇಕಾಗುತ್ತದೆ. ಹೀಗಾಗಿ ಇಂದು ನಡೆಸಬೇಕಿದ್ದ ನಗರ ಪ್ರದಕ್ಷಿಣೆಯನ್ನು ಸಿಎಂ ಸಿದ್ದರಾಮಯ್ಯ ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರೇ ಹುಷಾರ್.. ಮಹಾಮಳೆಗೆ ಬೆಂಗಳೂರಲ್ಲಿ ಹಲವು ಅವಾಂತರ; ಎಲ್ಲೆಲ್ಲಿ ಏನೇನ್ ಆಯ್ತು? 

ಈಗಾಗಲೇ ಮಳೆಯಿಂದಾಗಿ ಅನೇಕ ಕಡೆ ಟ್ರಾಫಿಕ್ ಜಾಮ್ ಆಗಿದೆ. ಕೆಲವು ಕಡೆ ಮರಗಳು ಬಿದ್ದು ಟ್ರಾಫಿಕ್‌ ಇನ್ನೂ ಹೆಚ್ಚಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲೂ ಮಳೆಯಿಂದಾಗಿ ಪರಿಹಾರ ಕ್ರಮ ತೆಗೆದುಕೊಳ್ಳುವುದು ದೊಡ್ಡ ಸವಾಲು ಆಗಿದೆ.

publive-image

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹಾಗೂ ಟ್ರಾಫಿಕ್‌ನಲ್ಲಿ ಜನರು ಸಿಲುಕಿದ್ದು, ಈಗಾಗಲೇ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದರ ನಡುವೆ ಸಿಎಂ ಹಾಗೂ ಡಿಸಿಎಂ ಸಿಟಿ ರೌಂಡ್ಸ್ ಮಾಡಿದರೆ ಜನರಿಗೆ ಇನ್ನಷ್ಟು ತೊಂದರೆ ಆಗುತ್ತೆ.

ನಾಳೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಕೂಡ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುವ ಸಾಧ್ಯತೆ ಇತ್ತು. ನಾಳೆಯ ಸಾಧನಾ ಸಮಾವೇಶಕ್ಕೆ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಸರ್ಕಾರ, ಹೀಗಾಗಿ ಬಿಬಿಎಂಪಿ ವಾರ್ ರೂಮ್‌ನಲ್ಲೇ ಬೆಂಗಳೂರು ಜನರ ಸಮಸ್ಯೆ ಆಲಿಸಲು ತೀರ್ಮಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment