/newsfirstlive-kannada/media/post_attachments/wp-content/uploads/2025/02/SIDDU-DK.jpg)
ಆರ್ಸಿಬಿ ಸಂಭ್ರಮಾಚರಣೆ ವೇಳೆಯ ಕಾಲ್ತುಳಿತ ದುರಂತ ಸರ್ಕಾರಕ್ಕೆ ಸಂಕಟ ತಂದಿಟ್ಟಿದೆ. ಈಗಾಗಲೇ ಹಲವರ ತಲೆತಂಡವೂ ಆಗಿದೆ. ಈ ನಡುವೆ, ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರೋ ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂಗೆ ಬುಲಾವ್ ನೀಡಿದೆ.
ಕಾಲ್ತುಳಿತ ದುರಂತದಲ್ಲಿ ರಾಜಕೀಯ ಜಟಾಪಟಿ ಎದ್ದು ನಿಂತಿದೆ. ಹಿಂದೆಂದೂ ನಡೆಯದಂತ ಘೋರ ಘಟನೆ ಸರ್ಕಾರಕ್ಕೆ ಮುಜುಗರವನ್ನೂ ತಂದಿಟ್ಟಿದೆ. ಈ 11 ಜನರ ಸಾವಿಗೆ ಹೊಣೆ ಯಾರು? ಇದಕ್ಕೆ ಉತ್ತರ ಸರ್ಕಾರ ಅನ್ನೋದು ಹಲವರ ಕತ್ತಿವರಸೆ.. ಸರ್ಕಾರ ಒಪ್ಪಲು ತಯಾರಿಲ್ಲ.. ವಿಧಾನಸೌಧದಲ್ಲಿ ಆಗಿದ್ಯಾ ಅನ್ನೋ ಮರುಪ್ರಶ್ನೆಯೇ ಸರ್ಕಾರಕ್ಕೆ ಗುರಾಣಿ.. ಈ ನಡುವೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಕಾಂಗ್ರೆಸ್ ಹೈಕಮಾಂಡ್ ಸರ್ಕಾರದ ವಿರುದ್ಧ ಗರಂ ಆಗಿದೆ. ಅಷ್ಟೇ ಅಲ್ಲ ಸಿಎಂ, ಡಿಸಿಎಂ ಇಬ್ಬರಿಗೂ ಬುಲಾವ್ ನೀಡಿದೆ.
ಇದನ್ನೂ ಓದಿ: ಏಷ್ಯಾಗೆ ಆಪತ್ತು, ಹೊಸ ಕಾಯಿಲೆ, ರೋಗ ಬರುತ್ತೆ; ನಾಲ್ಕು ಸ್ಫೋಟಕ ಭವಿಷ್ಯವಾಣಿ ನುಡಿದ ಬಾಬಾ ವಂಗಾ
ಇಂದು ಹೈಕಮಾಂಡ್ ಭೇಟಿಯಾಗಲಿರೋ ಸಿಎಂ, ಡಿಸಿಎಂ
ಅತ್ತ ವಿರೋಧ, ಇತ್ತ ಮುಜುಗರ.. ಸರ್ಕಾರಕ್ಕಿರೋದು ಡ್ಯಾಮೇಜ್ ಕಂಟ್ರೋಲ್ ಒಂದೇ ಆಪ್ಶನ್. ಈ ನಡುವೆ, ಹೈಕಮಾಂಡ್ ದೆಹಲಿಗೆ ಬನ್ನಿ ಅಂತಾ ಕರೆದಿದ್ದಾರೆ. ಅದರಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳ್ತಿದ್ದಾರೆ. ಈ ವೇಳೆ ಕಾಲ್ತುಳಿತ ದುರಂತದ ಬಗ್ಗೆ ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ.
ದೆಹಲಿಯಲ್ಲಿ ಸಿಎಂ ಡಿಸಿಎಂ ‘ಹೈ’ ಟಾಕ್!
ದುರಂತದಲ್ಲಿ ಸರ್ಕಾರದ ವೈಫಲ್ಯ ಬಗ್ಗೆ ಹೈಕಮಾಂಡ್ ಗರಂ ಆಗಿದ್ದು, ಸಂಪೂರ್ಣ ವರದಿ ಕೇಳಿದೆ. ಹೀಗಾಗಿ RCB ಸಂಭ್ರಮ ಸಮಾರಂಭ ಸಾವಿನ ಮನೆಯಾಗಿದ್ದು ಹೇಗೆ? ಎಂಬುದರ ಕುರಿತಂತೆ ಸಿಎಂ ಹಾಗೂ ಡಿಸಿಎಂ ಮಾಹಿತಿ ನೀಡಲಿದ್ದಾರೆ. ಈಗಾಗಲೇ ವರದಿ ಕೂಡ ಹೈಕಮಾಂಡ್ ಕೈ ಸೇರಿದ್ದು, ಈ ರಿಪೋರ್ಟ್ ಆಧಾರದಲ್ಲೇ ಸಿಎಂ ಹಾಗೂ ಡಿಸಿಎಂರನ್ನ ರಾಹುಲ್ ಗಾಂಧಿ ದೆಹಲಿಗೆ ಕರೆಸಿಕೊಳ್ತಿದ್ದಾರಂತೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅಂದು ನಡೆದ ಪ್ರತಿಯೊಂದು ವಿಷಯದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಇನ್ನು, ಪೊಲೀಸ್ ಕಮಿಷನರ್ ಸಸ್ಪೆಂಡ್ ಸರ್ಕಾರಕ್ಕೆ ಬಾರೀ ಡ್ಯಾಮೇಜ್ ತಂದಿದೆ. ಕಮಿಷನರ್ ಸಾರ್ವಜನಿಕವಾಗಿ ಒಳ್ಳೆಯ ಇಮೇಜ್ ಇದ್ದ ಆಫೀಸರ್. ಅವರನ್ನ ಸಸ್ಪೆಂಡ್ ಮಾಡಿದ್ದು ಸರ್ಕಾರಕ್ಕೆ ಭಾರೀ ಕೆಟ್ಟ ಹೆಸರಿಗೆ ಕಾರಣವಾಗಿದೆ ಎಂದು ವರದಿಯಲ್ಲಿದೆ. ಇದೆಲ್ಲದರ ಬಗ್ಗೆ ಸಿಎಂ, ಡಿಸಿಎಂರಿಂದ ಹೈಕಮಾಂಡ್ ಮಾಹಿತಿ ಕಲೆಹಾಕಲಿದ್ದಾರೆ.
ಇದನ್ನೂ ಓದಿ: BREAKING: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ದಿಢೀರ್ ಮುಂದೂಡಿಕೆ
ಕಾಲ್ತುಳಿತ ಪ್ರಕರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆಯಾಗ್ತಿದೆ. ಸರ್ಕಾರ ಸಂಕಟದಲ್ಲಿ ಸಿಲುಕಿದೆ. ಈ ನಡುವೆ ಹೈಕಮಾಂಡ್ ಮೀಟಿಂಗ್ ಕುತೂಹಲಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ಏನ್ ಕ್ರಮ ಕೈಗೊಳ್ಳುತ್ತೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ