Advertisment

ಬೆಲೆ ಏರಿಕೆ, ಗೊಂದಲ, ಗದ್ದಲದ ನಡುವೆ ದೆಹಲಿಗೆ ಫ್ಲೈಟ್ ಬುಕ್ ಮಾಡಿದ CM, DCM.. ಮುಂದೇನು..?

author-image
Gopal Kulkarni
Updated On
ಡಿ.ಕೆ ಶಿವಕುಮಾರ್​ ಆಟಕ್ಕೆ ಬ್ರೇಕ್​​ ಹಾಕಲು ಮುಂದಾದ ಸಿಎಂ ಸಿದ್ದರಾಮಯ್ಯ; ಸದ್ಯದಲ್ಲೇ ಹೈಕಮಾಂಡ್​​ ಭೇಟಿ
Advertisment
  • ಪಕ್ಷದ ವರಿಷ್ಠರನ್ನ ಭೇಟಿಯಾಗಲಿರುವ ಸಿಎಂ, ಸಿದ್ದು, ಡಿಸಿಎಂ ಡಿಕೆಶಿ
  • ‘ಹೈ’ ಭೇಟಿ ವೇಳೆ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಸಾಧ್ಯತೆ
  • ಕೆಪಿಸಿಸಿ ಅಧ್ಯಕ್ಷ ಗಾದಿ, ಎಂಎಲ್‌ಸಿ ನಾಮನಿರ್ದೇಶನ ಕುರಿತು ಚರ್ಚೆ

ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿರುವ ಸಿಎಂ, ‌ಡಿಸಿಎಂ.. ಬಹಳ ದಿನಗಳ ಬಳಿಕ ಹೈಕಮಾಂಡ್ ಭೇಟಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ರನ್ನ ಭೇಟಿ ಮಾಡಲಿರುವ ಸಿಎಂ, ಡಿಸಿಎಂ.

Advertisment

ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಕುರ್ಚಿ ಕಾದಾಟ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಇದು ಯಾವಾಗ ಧಗದಗಿಸುತ್ತೋ ಗೊತ್ತಿಲ್ಲ. ಇದರ ಜೊತೆಗೆ ಸಚಿವ ಹನಿಟ್ರ್ಯಾಪ್​ ಯತ್ನ ಕಾಂಗ್ರೆಸ್​ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಈ ಗೊಂದಲ, ಗದ್ದಲದ ನಡುವೆ ಸಿಎಂ ಸಿದ್ದರಾಮಯ್ಯ ಬಹುದಿನದ ನಂತ್ರ ದೆಹಲಿಯ ಫ್ಲೈಟ್​ ಹತ್ತಲಿದ್ದಾರೆ. ಜೊತೆ ಜೊತೆಯಲಿ ಅಂತ ಡಿಸಿಎಂ ಡಿಕೆಶಿ ಕೂಡ, ಸಿಎಂ ಜೊತೆಗೆ ಡೆಲ್ಲಿ ಫ್ಲೈಟ್​ ಹತ್ತಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

publive-image

ಇಂದಿನಿಂದ ಮೂರು ದಿನ ಸಿಎಂ, ಡಿಸಿಎಂ ದೆಹಲಿ ಯಾತ್ರೆ
ಹನಿಟ್ರ್ಯಾಪ್ ಹಂಗಾಮ ಮಧ್ಯೆ ಸಿಎಂ ಆ್ಯಂಡ್​​ ಡಿಸಿಎಂ, ಜೊತೆ ಜೊತೆಯಲಿ ಅಂತ ದೆಹಲಿ ಟೂರ್ ಹಮ್ಮಿಕೊಂಡಿದ್ದಾರೆ. ಮೊನ್ನೆಯಷ್ಟೇ ಹೈಕಮಾಂಡ್​ ಭೇಟಿ ಮಾಡಿ ಸೀಟ್​​​ಗೆ ಟವೆಲ್​​ ಹಾಸಿ ಬಂದ ಸಾಹುಕಾರ್​​​​ ಸತೀಶ್​​, ಹತ್ತಾರು ವಿಷಯದಲ್ಲಿ ಸೈಲೆಂಟ್​ ಆಗಿಯೇ ದಾಳ ಉರುಳಿಸಿ ವಾಪಸ್​ ಆಗಿದ್ದಾರೆ. ಅಧಿಕಾರ ಹಸ್ತಾಂತರ ಇಲ್ಲ, ಸಿದ್ದು ಇಳಿಯೋ ಹಾಗಿಲ್ಲ. ಕೆಪಿಸಿಸಿ ಸೀಟ್​​ ಖಾಲಿ ಮಾಡಿಸಿ ಅಷ್ಟೇ ಅಂತ ಹೈಕಮಾಂಡ್​ ಮುಂದೆ ತಮ್ಮ ಮನದ ಮಾತು ಒಪ್ಪಿಸಿದ್ದಾರೆ. ಈ ಬೆನ್ನಲ್ಲೆ ಸಿಎಂ - ಡಿಸಿಎಂ ಡೆಲ್ಲಿ ವಿಹಾರಕ್ಕೆ ತೆರಳ್ತಿದ್ದು, ಮೂರು ದಿನಗಳ ಕಾಲ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

ಇದನ್ನೂ ಓದಿ:ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ, ಡಿಕೆಶಿ ದಿಢೀರ್ ಮೀಟಿಂಗ್; ಏನಾಯ್ತು..? ​

Advertisment

publive-image

ಬಹಳ ದಿನಗಳ ಬಳಿಕ ಹೈಕಮಾಂಡ್ ಭೇಟಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ರನ್ನ ಭೇಟಿ ಮಾಡಲಿದ್ದು, ಹಲವು ವಿಷ್ಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

publive-image

ಇದನ್ನೂ ಓದಿ:ಸೆಪ್ಟೆಂಬರ್​ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಆಗಲಿದ್ದಾರೆ -ಸಂಚಲನ ಮೂಡಿಸಿದ ರಾವತ್ ಹೇಳಿಕೆ

ಉಭಯ ನಾಯಕರು ತಮ್ಮ ಪಕ್ಷದ ವರಿಷ್ಠರನ್ನ ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸುವ ಸಾಧ್ಯತೆ ಇದೆ. ಇನ್ನು ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಗಾದಿ ಮತ್ತು ಖಾಲಿ ಆಗ್ತಿರುವ ಎಂಎಲ್‌ಸಿ ನಾಮನಿರ್ದೇಶನದ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದಷ್ಟಕ್ಕೆ ಸೀಮಿತ ಆಗಲ್ಲ ಅನಿಸುತ್ತೆ.. ಸಚಿವ ರಾಜಣ್ಣ ಹನಿಟ್ರ್ಯಾಪ್​​, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಬಿದ್ದ ಹೊಡೆತ, ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕುರಿತು ಸಿಎಂ ಮಾಹಿತಿ ನೀಡ್ತಾರೆ ಎನ್ನಲಾಗಿದೆ.

Advertisment

ಇದನ್ನೂ ಓದಿ: ಕಸದ ಮೇಲೆ ತೆರಿಗೆ.. ಕರ್ನಾಟಕ ಸರ್ಕಾರಕ್ಕೆ ಯಾಕಿಂಥಾ ಸ್ಥಿತಿ ಬಂತು? ಪ್ರಹ್ಲಾದ್ ಜೋಶಿ ಹೇಳಿದ್ದೇನು? VIDEO

ಒಟ್ಟಾರೆ 3 ದಿನ ದೆಹಲಿಯಲ್ಲೇ ಡೇರೆ ಹಾಕಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ವರಿಷ್ಠರ ನಡುವಿನ ಭೇಟಿ ವೇಳೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯುತ್ತಾ? ಪಕ್ಷದ ನಾಯಕತ್ವ ಬದಲಾವಣೆ ಕುರಿತಂತೆ ಕೆಲವು ಹಿರಿಯ ಸಚಿವರ ಬೇಡಿಕೆಯನ್ನು ವರಿಷ್ಠರ ಎದುರು ಸಿಎಂ ಪ್ರಸ್ತಾಪಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment