newsfirstkannada.com

100 ದಿನ ಪೂರೈಸಿದ ಸಿದ್ದು ಸರ್ಕಾರ.. ಒಂದೇ ಕಾರಲ್ಲಿ ಬಂದು ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್

Share :

Published August 29, 2023 at 11:01am

Update August 29, 2023 at 12:12pm

  ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ ಕಾಂಗ್ರೆಸ್​ ಸರ್ಕಾರ

  ಒಂದೇ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಬಂದ ಸಿಎಂ ಮತ್ತು ಡಿಸಿಎಂ

  ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಡಿಕೆಶಿ

ಮೈಸೂರು: ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಭೇಟಿ ನೀಡಿದ್ದಾರೆ. ಒಂದೇ ಕಾರಿನಲ್ಲಿ ಇಬ್ಬರು ನಾಯಕರು ಹರಕೆ ತೀರಿಸಲು ಬಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಕಾರಿನಲ್ಲಿ ಡಿ.ಕೆ.ಶಿ ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಚಾಮುಂಡಿ ಬೆಟ್ಟಕ್ಕೆ ಬಂದಿಳಿದಿದ್ದಾರೆ. ಶತದಿನವನ್ನು ಕಾಂಗ್ರೆಸ್​ ಸರ್ಕಾರ ಪೂರೈಸಿದ ಹಿನ್ನಲೆ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಮೇ 9ರಂದೂ ಒಟ್ಟಿಗೆ ಆಗಮಿಸಿದ್ದರು. ಚುನಾವಣೆಗೂ ಮುನ್ನ ಪೂಜೆ ಸಲ್ಲಿಸಿದ್ದರು. ಇದೀಗ ಸರ್ಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದು 100 ದಿನಗಳನ್ನು ಕಳೆದಿದೆ. ಈ ಹಿನ್ನೆಲೆಯಲ್ಲಿ ನಾಯಕರು ದೇವರ ದರ್ಶನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100 ದಿನ ಪೂರೈಸಿದ ಸಿದ್ದು ಸರ್ಕಾರ.. ಒಂದೇ ಕಾರಲ್ಲಿ ಬಂದು ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್

https://newsfirstlive.com/wp-content/uploads/2023/08/Siddaramaiah-5.jpg

Load More