newsfirstkannada.com

ಎಲೆಕ್ಷನ್​​ ಬ್ಯುಸಿಯಿಂದ ಬ್ರೇಕ್ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ.. 3 ದಿನ ಹೋಗ್ತಿರೋದು ಎಲ್ಲಿಗೆ?

Share :

Published May 7, 2024 at 2:18pm

    ರಾಜ್ಯದಲ್ಲಿ ಕೆಲ ಬೆಳೆವಣಿಗೆಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ

    ಮಾಧ್ಯಮದವ್ರಿಗೆ ಏನನ್ನು ಪ್ರತಿಕ್ರಿಯೆ ನೀಡದೇ ತೆರಳಿದ ಸಿದ್ದರಾಮಯ್ಯ

    ಚುನಾವಣೆ ಮುಗಿದ ಬೆನ್ನಲ್ಲೇ ಸಿಎಂ ಊಟಿಗೆ ಹೋಗುತ್ತಿರುವುದೇಕೆ?

ಬೆಂಗಳೂರು: ಇಂದಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಲಿದೆ. ನಿರಂತರ ಎಲೆಕ್ಷನ್​​ ಸಮಾವೇಶ, ರ್ಯಾಲಿ, ಕ್ಯಾಂಪೇನ್​ಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ವಿಶ್ರಾಂತಿಗೆಂದು 3 ದಿನ ತಮಿಳುನಾಡಿನ ಊಟಿಗೆ ತೆರಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​.ಸಿ ಮಹದೇವಪ್ಪ ಕೂಡ ಊಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಬಳಿಕ ಮೈಸೂರಿನಿಂದ ಊಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್​.ಸಿ ಮಹದೇವಪ್ಪ ತೆರಳಲಿದ್ದಾರೆ.

ಇದನ್ನೂ ಓದಿ: ಗಂಡನ ಕೈ, ಕಾಲು ಕಟ್ಟಿ ಎದೆ ಮೇಲೆ ಕೂರುತ್ತಿದ್ದ ಹೆಂಡತಿ.. ಸಿಗರೇಟ್​ನಿಂದ ಸುಟ್ಟು ಹೇಗೆಲ್ಲ ಟಾರ್ಚರ್ ಕೊಡ್ತಿದ್ದಳು?

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗಂಡ ಸಾವು.. ಸುದ್ದಿ ಗೊತ್ತಾದ್ರೂ ವೋಟ್ ಮಾಡಿದ ಮಹಿಳೆ; ಕಾರಣ ಇದೆ

ಸದ್ಯ ರಾಜ್ಯದಲ್ಲಿ ಲೋಕಸಭಾ ಮತದಾನ ಇಂದಿಗೆ ಅಂತ್ಯವಾಗುತ್ತಿದೆ. ಜೂನ್ 4 ರಂದು ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಡಲಿದೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣ, ಮಹಿಳೆಯ ಕಿಡ್ನಾಪ್​ ಕೇಸ್​ನಲ್ಲಿ ಕಾಂಗ್ರೆಸ್​- ಜೆಡಿಎಸ್​ ಮಧ್ಯೆ ವಾಕ್ಸಮರ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ಹೋಗಿದ್ದಕ್ಕೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಇನ್ನು ವಿಡಿಯೋಗಳನ್ನ ರಿಲೀಸ್ ಮಾಡಿರೋದು ಡಿಸಿಎಂ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಎಲ್ಲ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದ್ದರು ಸಿಎಂ ಸಿದ್ದರಾಮಯ್ಯ ಇವುಗಳಿಗೆ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸಚಿವ ಹೆಚ್​.ಸಿ ಮಹದೇವಪ್ಪ ಜೊತೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ಊಟಿಗೆ ತೆರಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲೆಕ್ಷನ್​​ ಬ್ಯುಸಿಯಿಂದ ಬ್ರೇಕ್ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ.. 3 ದಿನ ಹೋಗ್ತಿರೋದು ಎಲ್ಲಿಗೆ?

https://newsfirstlive.com/wp-content/uploads/2024/05/SIDDU_MAHADEVAPPA_NEW.jpg

Load More