/newsfirstlive-kannada/media/post_attachments/wp-content/uploads/2024/12/SIDDU_HDD.jpg)
ರಾಜಕೀಯದಲ್ಲಿ ಯಾರೂ ಸ್ನೇಹಿತರಲ್ಲ, ಯಾರೂ ವಿರೋಧಿಗಳಲ್ಲ. ಆಗ ತೆನೆ ಬಳಗದಲ್ಲಿದ್ದ ಸಿದ್ದರಾಮಯ್ಯ ಈಗ ವಿರೋಧಿ ಬಣದಲ್ಲಿದ್ದಾರೆ. ಸದ್ಯ ಕಾಂಗ್ರೆಸ್ ಸಮಾವೇಶದಲ್ಲಿ ಈ ಹಿಂದೆ ಹೆಚ್.​ಟಿ ಕೃಷ್ಣಪ್ಪ ಆಡಿದ್ದ ಭವಿಷ್ಯವಾಣಿ ಒಂದನ್ನ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರನ್ನು ತಿವಿದಿದ್ದಾರೆ.
ಹಾಸನ, ಇದು ದಳಪತಿಗಳ ಭದ್ರ ಕೋಟೆ. ಆದ್ರೆ ಹಾಸನ ಅಖಾಡ ಈಗ ದಳಪತಿಗಳ ಲಕೋಟೆಯಲ್ಲಿಲ್ಲ. ಮೊನ್ನೆ ಚನ್ನಪಟ್ಟಣ ಕೂಡ ಕಾಂಗ್ರೆಸ್ ಪಾಲಾಗಿದೆ. ಹೀಗಿರುವಾಗ ಅಂದಿನ ತೆನೆ ಸದಸ್ಯ ಇಂದಿನ ಕಾಂಗ್ರೆಸ್​ನ ಪ್ರಶ್ನಾತೀತ ನಾಯಕ ಸಿಎಂ ಸಿದ್ದರಾಮಯ್ಯ, ದೊಡ್ಡಗೌಡರಿಗೆ ಹಿಂದಿನ ವಿಚಾರಗಳನ್ನೇ ಉಲ್ಲೇಖಿಸಿ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಸೂರ್ಯ ಶಿಕಾರಿಯಲ್ಲಿ ಮತ್ತೊಂದು ಮೈಲಿಗಲ್ಲು.. ಹೆಮ್ಮೆಯ ಇಸ್ರೋದಿಂದ ಹೊಸ ಸಮಾಚಾರ..!
/newsfirstlive-kannada/media/post_attachments/wp-content/uploads/2023/09/Hdd-Devegowda.jpg)
ಹೆಚ್.ಟಿ.ಕೃಷ್ಣಪ್ಪ ನುಡಿದಿದ್ದ ಭವಿಷ್ಯ ಪ್ರಸ್ತಾಪಿಸಿದ ಸಿದ್ದರಾಮಯ್ಯ
ಮಾಜಿ ಪ್ರಧಾನಿ ಹೆಚ್.​ಡಿ ದೇವೇಗೌಡರ ಕೋಟೆ ಹಾಸನದಲ್ಲಿ ನಡೆದ ಕಾಂಗ್ರೆಸ್ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡಿದ್ದಾರೆ. ಉಪಸಮರದಲ್ಲಿ ಹೆಚ್​.ಡಿ ದೇವೇಗೌಡರು ಆಡಿದ್ದ ಒಂದೊಂದು ಮಾತಿಗೂ ತಿರುಗೇಟು ಕೊಟ್ಟಿದ್ದಾರೆ. ಈ ನಡುವೆ ಹಿಂದೆ ಒಕ್ಕಲಿಗ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪ, ಹೆಚ್.​ಡಿ ದೇವೇಗೌಡರ ಬಗ್ಗೆ ನುಡಿದಿದ್ದ ಭವಿಷ್ಯವನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ. ಕೃಷ್ಣಪ್ಪ ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಅದನ್ನೇ ಸಿದ್ದರಾಮಯ್ಯ ಸಮಾವೇಶದಲ್ಲಿ ಪ್ರಸ್ತಾಪಿಸಿ ಹೇಳಿದ್ದಾರೆ. ಹೆಚ್.ಟಿ ಕೃಷ್ಣಪ್ಪ 2010ರಲ್ಲಿ ಹೇಳಿ ಬರೆದಿದ್ದ ಪತ್ರ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ.
/newsfirstlive-kannada/media/post_attachments/wp-content/uploads/2024/12/HSN_SIDDARAMAIAH_1.jpg)
ಯಾರು ಈ ಹೆಚ್​.ಟಿ ಕೃಷ್ಣಪ್ಪ?
- ಹೆಚ್.ಟಿ.ಕೃಷ್ಣಪ್ಪ ಅವರು ಪುಣ್ಯಕೋಟಿ ಕೃಷ್ಣಪ್ಪ ಅಂತಾನೇ ಖ್ಯಾತಿ
- ರಾಜಕೀಯ, ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ರು
- ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರು
- ಎರಡು ಬಾರಿ ಸಚಿವಗರಾಗಿ ಕಾರ್ಯ ನಿರ್ವಹಿಸಿದ್ದ ಹೆಚ್.ಟಿ.ಕೃಷ್ಣಪ್ಪ
- 1986ರಲ್ಲಿ ಹೆಗಡೆ ಸಂಪುಟದಲ್ಲಿ ಆರೋಗ್ಯ ಖಾತೆ ಸಚಿವರಾಗಿದ್ದರು
- ತತ್ವ ಸಿದ್ಧಾಂತ ಬಿಡದ ಹೆಚ್​.ಟಿ.ಕೃಷ್ಣ, ರಾಜಕಾರಣದಿಂದ ದೂರ
- ಸಿದ್ಧಾಂತದಲ್ಲೇ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿ
- ಮಾಜಿ ಸಚಿವ ಹೆಚ್.ಟಿ.ಕೃಷ್ಣಪ್ಪ 2021ರಲ್ಲಿ ಇಹಲೋಕ ತ್ಯಜಿಸಿದ್ದರು
ಇನ್ನು ಹೆಚ್​ಟಿ ಕೃಷ್ಣಪ್ಪ ಪತ್ರವನ್ನ ಉಲ್ಲೇಖಿಸಿಯೇ ಸಿದ್ದರಾಮಯ್ಯ ಅವರು, ಹೆಚ್​.ಡಿ ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ. ನೀವು ಯಾರನ್ನು ಬೆಳೆಸಿದ್ದೀರಿ ಅಂತ ತಿವಿದಿದ್ದಾರೆ. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಆಗಲೇ ಈ ಪಾಪದ ಹೊರೆ ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಅವರ ಮಾತು ನಿಜವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು, ಹೆಚ್​.ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/HSN_SIDDARAMAIAH.jpg)
‘ದುರಂತ ನೋಡುವ ಕಾಲ ಬರುತ್ತದೆ’
ನಮಗೆಲ್ಲಾ ರಾಜಕೀಯ ವನವಾಸ ತಂದ ಹೆಚ್.ಡಿ ದೇವೇಗೌಡರಿಗೆ ತನ್ನ ದುರಂತವನ್ನು ತಾನೇ ನೋಡುವ ಕಾಲ ಬರುತ್ತದೆ ಎಂದು ಹೆಚ್.ಟಿ ಕೃಷ್ಣಪ್ಪ ಅವರು ಹೇಳಿದ್ದರು. ಈಗ ಅವರು ಇಲ್ಲ. ಆದರೆ ಅವರು ಹೇಳಿದ್ದು ಸತ್ಯವಾಗುತ್ತಿದೆ. ನಾನು ಮಾತನಾಡಿದರೆ, ಸಿದ್ದರಾಮಯ್ಯ ಒಕ್ಕಲಿಗರ ವಿರುದ್ಧ ಎತ್ತಿಕಟ್ಟಿ ಬಿಡುತ್ತಿದ್ದರು. ಹೆಚ್.ಟಿ ಕೃಷ್ಣಪ್ಪ ಅವರು ಪಕ್ಕಾ ಒಕ್ಕಲಿಗ. ಅವರು ಹೇಳಿದ್ದು ಇದು.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೆಚ್.​ಟಿ ಕೃಷ್ಣಪ್ಪ ಪತ್ರವನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ದಳಪತಿಗಳು ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೋ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us