newsfirstkannada.com

VIDEO: ‘ಕೇಂದ್ರ ಕಾಂಗ್ರೆಸ್​ ಸರ್ಕಾರದಿಂದ ಅಕ್ಕಿ ರಾಜಕೀಯ’- ಭಾಷಣದ ವೇಳೆ ಸಿಎಂ ಸಿದ್ದು ಯಡವಟ್ಟು

Share :

Published August 5, 2023 at 4:35pm

Update August 5, 2023 at 4:57pm

  ‘ಮೋದಿ ಹೇಳಿದ್ರು ಗ್ಯಾರಂಟಿ ಕೊಟ್ಟರೆ ಕಷ್ಟ ಆಗುತ್ತೆ ಅಂತಾ‌’

  ಗ್ಯಾರಂಟಿ ಯೋಜನೆ ಜಾರಿ ಆಗಲ್ಲ ಅಂತಾ ಗುಲ್ಲೆಬ್ಬಿಸುತ್ತಿದ್ದಾರೆ

  ಮಲ್ಲಿಕಾರ್ಜುನ ಖರ್ಗೆ ತವರೂರಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಇಂದು ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಿಎಂ ಭಾಷಣದ ಮಧ್ಯೆ ಬಿಜೆಪಿ ಎನ್ನುವ ಬದಲು ಕಾಂಗ್ರೆಸ್ ಎನ್ನುತ್ತಾ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಗುಲ್ಲು ಎಬ್ಬಿಸಿದ್ರು. ಬಿಜೆಪಿಯವರು ಬಡವರ ವಿರೋಧಿಗಳು ಅನ್ನೋದಕ್ಕೆ ಇದೇ ಒಂದು ನಿದರ್ಶನ. FCI ನವರು ನಮಗೆ ಹೆಚ್ಚುವರಿಯಾಗಿ ಬೇಕಾಗಿದ್ದ 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನ ಕೊಡ್ತೀವಿ ಅಂತಾ ಒಪ್ಪಿಕೊಂಡಿದ್ರು. ಕೇಂದ್ರದ ಕಾಂಗ್ರೆಸ್ ಸರ್ಕಾರ FCIನವರಿಗೆ ಹೇಳಿ ಅಕ್ಕಿ ಕೊಡದಂತೆ ಮಾಡಿದ್ರು. ಅಕ್ಕಿಯಲ್ಲೂ ರಾಜಕೀಯ ಮಾಡಿದ್ರು ಎಂದರು. ಕೂಡಲೇ ಸಭೆಯಲ್ಲಿದ್ದವರು ಕೂಗಾಡುತ್ತಿದ್ದಂತೆ ಕಾಂಗ್ರೆಸ್ ಅಲ್ಲ ಬಿಜೆಪಿ ಸರ್ಕಾರ ಅಕ್ಕಿಯಲ್ಲೂ ರಾಜಕೀಯ ಮಾಡಿದೆ ಎಂದು ಗುಡುಗಿದ್ದಾರೆ.

ರಾಜ್ಯ ಸರ್ಕಾರದ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲೇ ಚಾಲನೆ ಕೊಟ್ಟಿದ್ದೇವೆ. ಚುನಾವಣೆ ಪೂರ್ವದಲ್ಲೇ ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ಮಾಡುತ್ತೇವೆ ಅಂತಾ ಮಾತು ಕೊಟ್ಟಿದ್ದೆವು. ಈ ಹಿಂದೆಯೂ ನಾವು ನುಡಿದಂತೆ ನಡೆದಿದ್ದೇವೆ. ಈಗಲೂ ಕೊಟ್ಟ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಮುಂದಿನ ಐದು ವರ್ಷದಲ್ಲಿ ಗ್ಯಾರಂಟಿಗಳ ಜೊತೆ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ‘ಪೆನ್‌ ಡ್ರೈವ್ ತರೋಕೆ SP ರೋಡ್‌ಗೆ ನಾನ್ಯಾಕೆ ಹೋಗ್ಲಿ ಅವರೇ ತಂದು ಕೊಡ್ತಾರೆ’- HDK ಹೊಸ ಬಾಂಬ್‌!

ವಿರೋಧ ಪಕ್ಷದವರು ಸುಮ್ಮನೆ ಗ್ಯಾರಂಟಿ ಆಗಲ್ಲ ಅಂತಾ ಗುಲ್ಲೆಬ್ಬಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು ಗ್ಯಾರಂಟಿ ಕೊಟ್ಟರೆ ಆರ್ಥಿಕ ಪರಿಸ್ಥಿತಿ ಕಷ್ಟ ಆಗುತ್ತೆ ಅಂತಾ‌. ಈ ರಾಜ್ಯ ದಿವಾಳಿ ಆಗಿದೆಯಾ? ದೇಶ ದಿವಾಳಿ ಏನಾದ್ರೂ ಆಗುತ್ತೆ ಅಂದ್ರೆ ಅದು ಬಿಜೆಪಿಯಿಂದ. ಈ ರಾಜ್ಯವನ್ನ ಬಿಜೆಪಿ ಅವರು ಲೂಟಿ ಹೊಡೆದಿದ್ದಾರೆ. ಬೆಲೆ ಏರಿಕೆ ಹೆಚ್ಚಳ ಮಾಡಿ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಈ ಭಾಗಕ್ಕೆ ಬಿಜೆಪಿ ಅವರ ಕೊಡುಗೆ ಏನೂ ಅಂದ್ರೆ ಹೈದ್ರಾಬಾದ್ ಕರ್ನಾಟಕ ತೆಗೆದು ಕಲ್ಯಾಣ ಕರ್ನಾಟಕ ಮಾಡಿದ್ದು ಅಷ್ಟೇ. ಬಿಜೆಪಿ ಅವರಿಗೆ ಹೊಟ್ಟೆ ಉರಿ ಬಂದಿದೆ. ಗುಜರಾತ್ ಮಾಡೆಲ್ ಅಂದ್ರು, ಅದನ್ನ ಮಾಡಲು ಬಿಡಲ್ಲ. ನಮ್ಮದೆ ಆದ ಕರ್ನಾಟಕ ಮಾಡಲ್ ನಾವು ಮಾಡುತ್ತೇವೆ. ನುಡಿದಂತೆ ನಡೆಯುವ ಕರ್ನಾಟಕ ಮಾಡೆಲ್. 200 ಯೂನಿಟ್‌ವರೆಗೆ ವಿದ್ಯುತ್ ನಾವು ಫ್ರೀ ಆಗಿ ಕೊಡ್ತಿದ್ದೇವೆ. ಈಗಾಗಲೇ 1 ಕೋಟಿ 21 ಸಾವಿರ ಜನ ಗೃಹಜ್ಯೋತಿಗಾಗಿ ನೊಂದಾಯಿಸಿ ಕೊಂಡಿದ್ದಾರೆ ಅವರೆಲ್ಲ ಇದರ ಲಾಭ ಪಡೆಯಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ‘ಕೇಂದ್ರ ಕಾಂಗ್ರೆಸ್​ ಸರ್ಕಾರದಿಂದ ಅಕ್ಕಿ ರಾಜಕೀಯ’- ಭಾಷಣದ ವೇಳೆ ಸಿಎಂ ಸಿದ್ದು ಯಡವಟ್ಟು

https://newsfirstlive.com/wp-content/uploads/2023/08/Cm-Siddaramaiah.jpg

Load More