/newsfirstlive-kannada/media/post_attachments/wp-content/uploads/2025/04/CM_SIDDARAMAIAH.jpg)
ಪಾಕಿಸ್ತಾನದ ಜೊತೆ ಯುದ್ಧ ಬೇಡ ಎನ್ನುವ ಮೂಲಕ ಭಾರೀ ಸುದ್ದಿ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಾರ್ವಜನಿಕವಾಗಿ ತಮ್ಮ ಕೋಪತಾಪ ತೋರಿಸಿ ಸುದ್ದಿ ಮಾಡಿದ್ದಾರೆ. ಬೆಳಗಾವಿ ಕಾಂಗ್ರೆಸ್ ಸಮಾವೇಶದ ವೇಳೆ ಬಿಜೆಪಿ ವಿರುದ್ಧದ ಪ್ರತಿಭಟನೆ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ, ಏಕವಚನದಲ್ಲಿ ನಿಂದಿಸಿ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದಾರೆ. ಸಿಎಂ ವರ್ತನೆಗೆ ಬಿಜೆಪಿ ಬೆಂಕಿ ಉಗುಳುತ್ತಿದೆ.
ಏಯ್ ಬಾರಯ್ಯ ಇಲ್ಲಿ, ಅವನ್ಯಾವನು ಎಸ್​​ಪಿ, ಏನ್ಮಾಡ್ತಾ ಇದ್ದೀರಿ ನೀವು. ಬಿಜೆಪಿಯವರನ್ನು ಕಳ್ಸಿ ಆಚೆಗೆ. ಇದು ಸಿದ್ದರಾಮಯ್ಯ ಕೋಪತಾಪದ ಮಾತು. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಸಿದ್ದರಾಮಯ್ಯ ರೋಷಾವೇಶಗೊಂಡಿದ್ದಾರೆ. ಬಿಜೆಪಿ ಪ್ರತಿಭಟನೆ ಕಂಟ್ರೋಲ್ ಮಾಡದ ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಣ್ಣು ಕೆಂಪಗೆ ಮಾಡಿದ್ದಾರೆ.
ವೇದಿಕೆ ಮೇಲೆಯೇ ತಾಳ್ಮೆ ಕಳೆದುಕೊಂಡ ‘ಕೋಪ’ರಾಮಯ್ಯ!
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ವೇದಿಕೆ ಮೇಲೆ ಭಾಷಣ ಮಾಡುವಾಗ ತಾಳ್ಮೆ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದಾರೆ. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶಿಸಿ ಗೋ.. ಗೋ.. ಪಾಕಿಸ್ತಾನ ಅಂತ ಘೋಷಣೆ ಕೂಗಿದ್ದೇ ಈ ಘಟನೆಗೆ ಕಾರಣ ಆಗಿದೆ. ನಡೆದಿದ್ದು ಇಷ್ಟೇ.. ಸಿಎಂ ಭಾಷಣದ ವೇಳೆಯೇ ಬಿಜೆಪಿ ಕಾರ್ಯಕರ್ತರು ಕಪ್ಪುಬಟ್ಟೆ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ವೇದಿಕೆಯತ್ತ ನುಗ್ಗಲು ಮುಂದಾಗಿದ್ದರು. ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಯಾರಯ್ಯಾ ಅವ್ನು.. ವೇದಿಕೆಗೆ ಬರುವ ತನಕ ನೀವು ಏನು ಮಾಡುತ್ತಿದ್ದೀರಿ ಅಂತಾ ಪೊಲೀಸ್ ಅಧಿಕಾರಿ ಮೇಲೆ ಗರಂ ಆಗಿ ಕೈ ಎತ್ತಿದ್ದಾರೆ.
ಕೋಪಕ್ಕೆ ತುತ್ತಾದ ಎಎಸ್​ಪಿ ನಾರಾಯಣ ಭರಮನಿ
ಅಂದಹಾಗೆ ಸಿಎಂ ಸಿದ್ದರಾಮಯ್ಯ ಕೋಪಕ್ಕೆ ತುತ್ತಾದವರು ಬಂದೋಬಸ್ತ್​ಗೆ ನಿಯೋಜನೆಗೊಂಡಿದ್ದ ಧಾರವಾಡ ಎಎಸ್​ಪಿ ನಾರಾಯಣ ಭರಮನಿ. ಇವರಿಗೆ ವೇದಿಕೆ ಭದ್ರತೆಯ ಉಸ್ತುವಾರಿ ವಹಿಸಲಾಗಿತ್ತು. ಹೀಗಾಗಿ ಸಂಬಂಧವೇ ಇಲ್ಲದ ಪೋಲಿಸ್ ಅಧಿಕಾರಿ ವಿರುದ್ಧ ಸಿಎಂ ಸಾರ್ವಜನಿಕವಾಗಿ ಗರಂ ಆಗಿದ್ದಾರೆ.
ಇನ್ನು ಇದೇ ವೇಳೆ ಭದ್ರತಾ ವ್ಯವಸ್ಥೆ ವಿಚಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಕೂಡ ಗರಂ ಆಗಿ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಬಿಜೆಪಿ ಕಾರ್ಯಕರ್ತರ ಕಪ್ಪು ಬಾವುಟ ಪ್ರದರ್ಶನದ ಬಗ್ಗೆ ಕೆಂಡಾಮಂಡಲರಾದ ಡಿಸಿಎಂ ಡಿ.ಕೆ ಶಿವಕುಮಾರ್, ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗೆ ಮುಂದುವರಿದಲ್ಲಿ ಇನ್ಮುಂದೆ ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ ಅಂತ ಪ್ರತಿಜ್ಞೆಗೈದಿದ್ದಾರೆ.
ವಿರೋಧ ಪಕ್ಷದವಾದ ಬಿಜೆಪಿಯ ಎಲ್ಲ ನಾಯಕರಿಗೆ ಹೇಳುತ್ತಿದ್ದೇನೆ. ಈ ರೀತಿ, ಈ ಪ್ರವೃತ್ತಿ ನಡೆಯುತ್ತಿದ್ದರೇ ಇಡೀ ರಾಜ್ಯದಲ್ಲಿ ಒಂದೂ ಸಭೆಯನ್ನು ಮಾಡೋಕೆ ಬಿಡಲ್ಲ. ಇದು ಕಾಂಗ್ರೆಸ್ ಪಕ್ಷದ ಒಂದು ಪ್ರತಿಜ್ಞೆ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ತಪ್ಪಾಗಿದ್ರೆ ಕರೆದು ಬುದ್ಧಿ ಹೇಳಬಹುದಿತ್ತು. ಎಚ್ಚರಿಕೆ ಕೊಡಬಹುದಿತ್ತು, ಅದು ಬಿಟ್ಟು ಕರ್ತವ್ಯನಿರತ ಅಧಿಕಾರಿ ಮೇಲೆ ಕೈ ಎತ್ತಲು ಮುಂದಾಗಿ ಮುಜುಗರ ಅನುಭವಿಸುವಂತಾಗಿದೆ ಸಿಎಂ ಸಿದ್ದರಾಮಯ್ಯಗೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ