newsfirstkannada.com

×

ಮಂಡ್ಯ ಲೋಕಸಭೆ ವಿಚಾರದಲ್ಲಿ ಸಿದ್ದರಾಮಯ್ಯ ಜಾಣ ನಡೆ; ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಬಿಗ್ ಪ್ಲಾನ್..!

Share :

Published January 12, 2024 at 2:07pm

    ಸಿದ್ದರಾಮಯ್ಯ ಪ್ಲಾನ್​ಗೆ ಸ್ಥಳೀಯ ನಾಯಕರಿಂದ ವಿರೋಧ

    ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಕ್ಕರ್ ಕೊಡಲು ಚಿಂತನೆ

    ಪ್ಲಾನ್ ಸಕ್ಸಸ್ ಆದರೆ ಮೈತ್ರಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ಪಕ್ಕಾ

ಮಂಡ್ಯ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯ ಕ್ಷೇತ್ರ ಪದೇಪದೆ ಮುನ್ನಲೆಗೆ ಬರುತ್ತಿದೆ. ಮಂಡ್ಯ ರಾಜಕಾರಣದಲ್ಲಿ ಕಳೆದ ಒಂದು ತಿಂಗಳಿನಿಂದ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬೆನ್ನಲ್ಲೇ ಹಾಲಿ ಸಂಸದೆ ಸುಮಲತಾ ರಾಜಕೀಯ ಭವಿಷ್ಯ ಏನು ಅನ್ನೋದು ಕುತೂಹಲ ಮೂಡಿಸಿದೆ.

ಯಾಕಂದರೆ ಸುಮಲತಾ ಅಂಬರೀಶ್ ಪಡೆಯಲ್ಲಿ ಎರಡು ಬಣಗಳಾಗಿವೆ ಎನ್ನಲಾಗುತ್ತಿದ್ದು, ಒಂದು ಬಿಜೆಪಿ-ಜೆಡಿಎಸ್​ ಮೈತ್ರಿ ಪರ ಇದೆ. ಇನ್ನೊಂದು ಸುಮಲತಾ ಅಂಬರೀಶ್ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತಿದೆ. ಅದರಂತೆ ನಾಲ್ಕೈದು ದಿನಗಳ ಹಿಂದೆ ಸುಮಲತಾರ ಅತ್ಯಾಪ್ತ ಇಂಡುವಾಳು ಸಚ್ಚಿದಾನಂದ ಜೆಡಿಎಸ್ ನಾಯಕ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದರು. ಇದು ಮಂಡ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತರೂಢ ಕಾಂಗ್ರೆಸ್​ ಲಾಭ ಪಡೆಯಲು ಮುಂದಾಗಿದೆ. ಮಂಡ್ಯ ಲೋಕಸಭೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೈತ್ರಿ ಪಕ್ಷಗಳ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಫೈನಲ್ ಮಾಡಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರಂತೆ. ಆ ಮೂಲಕ ಬಿಜೆಪಿ ಹಾಗೂ ಜೆಡಿಎಸ್​ಗೆ ಟಕ್ಕರ್ ಕೊಡಲು ನಿರ್ಧರಿಸಿದ್ದಾರಂತೆ. ಅದರ ಮುಂದುವರಿದ ಭಾಗವಾಗಿ ಸುಮಲತಾ ಅವರನ್ನು ಪಕ್ಷಕ್ಕೆ ಕರೆ ತರಲು ಸಿದ್ದರಾಮಯ್ಯ ತೆರೆಮರೆಯಲ್ಲಿ ಪ್ಲಾನ್ ಮಾಡ್ತಿದ್ದಾರೆ ಎಂಬ ಗುಲ್ ಎದ್ದಿದೆ.

ಸಚಿವ ಚಲುವರಾಯಸ್ವಾಮಿ ಅಥವಾ ಅವರ ಪತ್ನಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಚಲುವರಾಯಸ್ವಾಮಿ ಕುಟುಂಬ ಅದನ್ನು ನಿರಾಕರಿಸಿದೆ. ಅದೇ ಕಾರಣಕ್ಕೆ ಸುಮಲತಾರನ್ನು ಪಕ್ಷಕ್ಕೆ ಕರೆತರುವ ಕಾರ್ಯತಂತ್ರ ಶುರುವಾಗಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಅವರ ತಂಡ ಒಲವು ತೋರಿಸಿದೆ ಎಂದು ಹೇಳಲಾಗಿದೆ.

ಚುನಾವಣೆಯಲ್ಲಿ ದೇವೇಗೌಡರ ಕುಟುಂಬಸ್ಥರು ಮೈತ್ರಿ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ. ಈಗಾಗಲೇ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಗೆ ಪೈಪೋಟಿ ಕೊಡಬಲ್ಲ ಕ್ಯಾಂಡಿಡೇಟ್ ಅಂದರೆ ಸದ್ಯ ಸುಮಲತಾ ಅಂಬರೀಶ್ ಮಾತ್ರ. ಸುಮಲತಾರನ್ನು ಕರೆತಂದು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರಂತೆ.

ಸಿದ್ದರಾಮಯ್ಯ ಅವರ ಪ್ಲಾನ್​ಗೆ ಸ್ಥಳೀಯ ಕಾಂಗ್ರೆಸ್​ ಮುಖಂಡರಿಂದ ವಿರೋಧ ಇದೆಯಂತೆ. ಮತ್ತೊಂದೆಡೆ ಕಾಂಗ್ರೆಸ್​ ಪಡೆ ಸೇರಲು ಸುಮಲತಾ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ರೆ ಗೆಲ್ಲೋದು ಕಷ್ಟ. ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವುದು ಸೂಕ್ತ ಎಂದು ಸುಮಲತಾ ಆಪ್ತ ಪಡೆ ಸಲಹೆ ನೀಡ್ತಿದ್ಯಂತೆ. ಕಾಂಗ್ರೆಸ್​ಗೆ ಸುಮಲತಾ ಅನಿವಾರ್ಯ, ಸುಮಲತಾಗೆ ಕಾಂಗ್ರೆಸ್ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಅರಿತಿರುವ ಸಿದ್ದರಾಮಯ್ಯ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ರಣಕಹಳೆ ಮೊಳಗಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಲೋಕಸಭೆ ವಿಚಾರದಲ್ಲಿ ಸಿದ್ದರಾಮಯ್ಯ ಜಾಣ ನಡೆ; ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಬಿಗ್ ಪ್ಲಾನ್..!

https://newsfirstlive.com/wp-content/uploads/2024/01/SIDDARAMIAH-3.jpg

Load More